ಪಿಸ್ತೂಲ್ ಬದಲಿಗೆ ಪೆನ್‌; ಕ್ರೊವೇಷಿಯಾದಲ್ಲೇ ಬಿಎ ಪರೀಕ್ಷೆ ಬರೆಯಲಿರೋ ಮನು ಭಾಕರ್

By Suvarna News  |  First Published May 17, 2021, 12:35 PM IST

* ಭಾರತದ ತಾರಾ ಶೂಟರ್ ಮನು ಭಾಕರ್ ಒಲಿಂಪಿಕ್ಸ್‌ ಪದಕದ ಮೇಲೆ ಕಣ್ಣಿಟ್ದಿದ್ದಾರೆ.

* ಸದ್ಯ ಪಿಸ್ತೂಲ್ ಬದಿಗಿಟ್ಟು ಪದವಿ ಪರೀಕ್ಷೆ ಬರೆಯಲು ಮುಂದಾದ ಮನು

* ರಾಜ್ಯಶಾಸ್ತ್ರ ವಿದ್ಯಾರ್ಥಿನಿಯಾಗಿರುವ ಮನು ಭಾಕರ್


ಕ್ರೊವೇಷಿಯಾ(ಮೇ.17): ಭಾರತದ ತಾರಾ ಶೂಟರ್‌ ಮನು ಭಾಕರ್‌, ಟೋಕಿಯೋ ಒಲಿಂಪಿಕ್ಸ್‌ ಸಿದ್ಧತೆಗಾಗಿ ಕ್ರೊವೇಷಿಯಾಗೆ ತೆರಳಿದ್ದು, ಅಲ್ಲಿಯೇ ತಮ್ಮ ಬಿಎ 4ನೇ ಸೆಮೆಸ್ಟರ್‌ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ. ಮುನು ಭಾಕರ್ ಸದ್ಯ ಪಿಸ್ತೂಲ್ ಬದಿಗಿಟ್ಟು ಪೆನ್ನು ಹಿಡಿಯಲು ಮುಂದಾಗಿದ್ದಾರೆ. 

ಮೇ 18ರಿಂದ ಪದವಿ ಪರೀಕ್ಷೆ ಆರಂಭಗೊಳ್ಳಲಿದ್ದು, ಆನ್‌ಲೈನ್‌ನಲ್ಲೇ ಪರೀಕ್ಷೆ ಬರೆಯಲು ಮನು ಭಾಕರ್‌ಗೆ ಅವಕಾಶ ನೀಡಲಾಗಿದೆ. ಮನು, ದೆಹಲಿ ವಿಶ್ವ ವಿದ್ಯಾಲಯಕ್ಕೆ ಸೇರಿದ ಪ್ರತಿಷ್ಠಿತ ಲೇಡಿ ಶ್ರೀ ರಾಮ್‌ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದಾರೆ. ರಾಜ್ಯಶಾಸ್ತ್ರ ವಿದ್ಯಾರ್ಥಿನಿಯಾಗಿರುವ ಮನು ಭಾಕರ್ ಏಕಕಾಲದಲ್ಲಿ ಎರಡು ಸವಾಲುಗಳನ್ನು ಸ್ವೀಕರಿಸಲು ಸಿದ್ದರಾಗಿದ್ದಾರೆ.

Tap to resize

Latest Videos

ಮನು ಬಿಎ ಪರೀಕ್ಷೆಯ ಜೊತೆ ಜೊತೆಯಲ್ಲೇ ಮೇ 20ರಿಂದ ಆರಂಭಗೊಳ್ಳಲಿರುವ ಯುರೋಪಿಯನ್‌ ಚಾಂಪಿಯನ್‌ಶಿಪ್‌ನಲ್ಲೂ ಪಾಲ್ಗೊಳ್ಳಲಿದ್ದಾರೆ. ಯುರೋಪಿಯನ್‌ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡಕ್ಕೆ ಅತಿಥಿ ಆಹ್ವಾನವನ್ನು ನೀಡಲಾಗಿದೆ. 

ಕ್ರೊವೇಷಿಯಾದಲ್ಲಿ ಭಾರತ ಶೂಟಿಂಗ್‌ ತಂಡ ಅಭ್ಯಾಸ

ನಾನು ಎರಡು ಸವಾಲುಗಳನ್ನು ನಿಭಾಯಿಸಲು ಸಿದ್ದನಿದ್ದೇನೆ. ಈ ಹಿಂದೆಯೂ ಇಂತಹ ಸವಾಲುಗಳಿಗೆ ಮುಖಾಮುಖಿಯಾಗಿದ್ದೇನೆ. ನನ್ನ ಅದೃಷ್ಟಕ್ಕೆ ಪರೀಕ್ಷೆಯ ದಿನ ನನ್ನ ಸ್ಪರ್ಧೆಯಿಲ್ಲ. ಹೀಗಾಗಿ ನನಗೇನು ಅಂತಹ ತೊಂದರೆ ಇಲ್ಲವೆಂದು ಪಿಟಿಐ ಸುದ್ದಿಸಂಸ್ಥೆಗೆ ಮನು ಭಾಕರ್ ತಿಳಿಸಿದ್ದಾರೆ. 

ನಾನು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತೇನೆ. ಆದರೆ ಶೂಟಿಂಗ್‌ ನನ್ನ ಮೊದಲ ಆಧ್ಯತೆ ಎಂದು ಮನು ಭಾಕರ್ ತಿಳಿಸಿದ್ದಾರೆ. ಈ ವರ್ಷವೇ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯುವುದರಿಂದ, ಹೆಚ್ಚಿನ ಗಮನವನ್ನು ಶೂಟಿಂಗ್‌ಗೆ ನೀಡುತ್ತೇನೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಬೇಕು ಎಂದಿರುವೆ ಎಂದು ಕಾಮನ್‌ವೆಲ್ತ್ ಪದಕ ವಿಜೇತೆ ಮನು ಭಾಕರ್ ಹೇಳಿದ್ದಾರೆ.
 

click me!