Paralympcs: ಕೋಚ್‌ ಇಲ್ಲದೆ ಅಭ್ಯಾಸ ಮಾಡಿ ಪದಕ ಗೆದ್ದ ಯೋಗೇಶ್‌ ಕಥುನಿಯಾ!

Kannadaprabha News   | Asianet News
Published : Aug 31, 2021, 01:35 PM IST
Paralympcs: ಕೋಚ್‌ ಇಲ್ಲದೆ ಅಭ್ಯಾಸ ಮಾಡಿ ಪದಕ ಗೆದ್ದ ಯೋಗೇಶ್‌ ಕಥುನಿಯಾ!

ಸಾರಾಂಶ

* ಕೋಚ್‌ ಇಲ್ಲದೇ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಯೋಗೇಶ್‌ ಕಥುನಿಯಾ * ಎಫ್‌56 ವಿಭಾಗದಲ್ಲಿ ಯೋಗೇಶ್‌ 44.38 ಮೀ ದೂರಕ್ಕೆ ಡಿಸ್ಕಸ್‌ ಎಸೆದು ಬೆಳ್ಳಿ ಗೆದ್ದ ಯೋಗೇಶ್ * 24 ವರ್ಷದ ಯೋಗೇಶ್‌ ಕಥುನಿಯಾ, 8ನೇ ವಯಸ್ಸಿನಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದರು..!

ಟೋಕಿಯೋ(ಆ.31): ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಡಿಸ್ಕಸ್‌ ಥ್ರೋ ಪಟು ಯೋಗೇಶ್‌ ಕಥುನಿಯಾ. ಎಫ್‌56 ವಿಭಾಗದಲ್ಲಿ ಯೋಗೇಶ್‌ 44.38 ಮೀ ದೂರಕ್ಕೆ ಡಿಸ್ಕಸ್‌ ಎಸೆದು ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. 24 ವರ್ಷದ ಯೋಗೇಶ್‌ ತಮ್ಮ 6ನೇ ಹಾಗೂ ಅಂತಿಮ ಎಸೆತದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಕಾರಣ ಪದಕ ಖಚಿತವಾಯಿತು. ಆದರೆ ಯೋಗೇಶ್‌ ಕೋಚ್ ಇಲ್ಲದೇ ಪದಕ ಗೆದ್ದ ರೀತಿಯೇ ನಿಜಕ್ಕೂ ಸ್ಪೂರ್ತಿಯ ಕಥೆ.

ನವದೆಹಲಿಯ 24 ವರ್ಷದ ಯೋಗೇಶ್‌ ಕಥುನಿಯಾ, 8ನೇ ವಯಸ್ಸಿನಲ್ಲಿ ಪಾರ್ಶ್ವವಾಯುಗೆ ತುತ್ತಾದ ಕಾರಣ ಅವರ ಕಾಲುಗಳು ಶಕ್ತಿ ಕಳೆದುಕೊಂಡವು. ಯೋಧನ ಮಗನಾದ ಯೋಗೇಶ್‌ ಛಲ ಬಿಡದೆ ಕ್ರೀಡೆಯತ್ತ ಹೊರಳಿದರು. 2019ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದು ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ಯೋಗೇಶ್‌, ಟೋಕಿಯೋ ಗೇಮ್ಸ್‌ಗೆ ಕೋಚ್‌ ಇಲ್ಲದೆ ಅಭ್ಯಾಸ ನಡೆಸಿದರು. ಕೋವಿಡ್‌ನಿಂದಾಗಿ ಅಭ್ಯಾಸ ನಡೆಸಲು ಕ್ರೀಡಾಂಗಣಕ್ಕೂ ಹೋಗಲು ಆಗಿರಲಿಲ್ಲ. ಆದರೂ ಪದಕ ಗೆಲ್ಲುವಲ್ಲಿ ಯೋಗೇಶ್‌ ಹಿಂದೆ ಬೀಳಲಿಲ್ಲ.

Paralympics ಅಭಿನವ್‌ ಬಿಂದ್ರಾ ಆತ್ಮಕತೆ ಓದಿ ಶೂಟರ್‌ ಆದ ಅವನಿ ಲೇಖರಾ!

40ರ ಪ್ರಾಯದಲ್ಲೂ ಕಮ್ಮಿಯಾಗದ ದೇವೇಂದ್ರ ಝಾಝರಿಯಾ ಉತ್ಸಾಹ!

1981ರಲ್ಲಿ ರಾಜಸ್ಥಾನದ ಚುರು ಎಂಬಲ್ಲಿ ಜನಿಸಿದ ಝಝಾರಿಯಾ 8ನೇ ವಯಸ್ಸಿನಲ್ಲಿ ಮರ ಏರುವಾಗ ಆಕಸ್ಮಿಕವಾಗಿ ವಿದ್ಯುತ್‌ ತಗುಲಿದ್ದರಿಂದ ಎಡಗೈ ಕಳೆದುಕೊಂಡಿದ್ದರು. ಆದರೂ ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಮಿಂಚುತ್ತಿದ್ದ ಝಝಾರಿಯಾ ಮುಂದೆ ಜಾವೆಲಿನ್‌ ಥ್ರೋ ಅಭ್ಯಾಸ ಮಾಡತೊಡಗಿದರು. 

2004ರ ಅಥೆನ್ಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದ ಝಝಾರಿಯಾ, ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ತಮ್ಮದೇ ದಾಖಲೆ ಮುರಿದು 2ನೇ ಬಾರಿ ಚಿನ್ನಕ್ಕೆ ಮುತ್ತಿಕ್ಕಿದರು. 2017ರಲ್ಲಿ ಪ್ರತಿಷ್ಠಿತ ಖೇಲ್‌ ರತ್ನ ಪ್ರಶಸ್ತಿ ಪಡೆದ ಮೊದಲ ಪ್ಯಾರಾ ಅಥ್ಲೀಟ್‌ ಎನಿಸಿಕೊಂಡರು.

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ