ಪ್ಯಾರಾಲಿಂಪಿಕ್ಸ್‌; ಭಾರತಕ್ಕೆ ಒಲಿದ 8ನೇ ಪದಕ ಸಿಂಗ್‌ರಾಜ್‌ಗೆ ಕಂಚಿನ ಮಿಂಚು..!

By Suvarna News  |  First Published Aug 31, 2021, 12:11 PM IST

* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 8ನೇ ಪದಕ ಗೆದ್ದ ಭಾರತ

* ಶೂಟರ್‌ ಸಿಂಗ್‌ರಾಜ್‌ ಕೊರಳಿಗೆ ಕಂಚಿನ ಹಾರ

* ಪುರುಷರ 10 ಮೀಟರ್‌ ಏರ್‌ ಪಿಸ್ತೂಸ್‌ SH1 ಫೈನಲ್‌ ಸ್ಪರ್ಧೆಯಲ್ಲಿ ಗೆಲುವು


ಟೋಕಿಯೋ(ಆ.31): ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಪುರುಷರ 10 ಮೀಟರ್‌ ಏರ್‌ ಪಿಸ್ತೂಸ್‌ SH1 ಫೈನಲ್‌ ಸ್ಪರ್ಧೆಯಲ್ಲಿ ಸಿಂಗ್‌ರಾಜ್‌ ಅಧಾನ ಕಂಚಿನ ಪದಕ ಜಯಿಸಿದ್ದಾರೆ. ಇದರೊಂದಿಗೆ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 8ನೇ ಪದಕ ಬಾಚಿಕೊಂಡಂತೆ ಆಗಿದೆ.

39 ವರ್ಷದ ಸಿಂಗ್‌ರಾಜ್‌ ಅಧಾನ ಒಟ್ಟು 216.8 ಅಂಕಗಳನ್ನು ಕಲೆಹಾಕುವುದರೊಂದಿಗೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.  ಪುರುಷರ 10 ಮೀಟರ್‌ ಏರ್‌ ಪಿಸ್ತೂಸ್‌ SH1 ಫೈನಲ್‌ಗೆ ಮನೀಶ್ ನರ್ವಾಲ್ ಹಾಗೂ ಸಿಂಗ್‌ರಾಜ್‌ ಅರ್ಹತೆ ಪಡೆದುಕೊಂಡಿದ್ದರು. ಮನೀಶ್‌ ನರ್ವಾಲ್‌ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. ಎರಡನೇ ಸುತ್ತಿನಲ್ಲಿಯೇ ಮನೀಶ್‌ ಸ್ಪರ್ಧೆಯಿಂದ ಹೊರಬಿದ್ದರು. ಆದರೆ ಸಿಂಗ್‌ರಾಜ್‌ ನಿಖರವಾಗಿ ಶೂಟ್‌ ಮಾಡುವ ಮೂಲಕ ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿ ಕಂಚಿನ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾದರು.

debut at 39 and that too with a Bronze!! is proof that hard work always pays off. With his dedication and determination, he has won 🥉 and made every Indian proud

What a spectacular win! You have inspired us all👏 pic.twitter.com/q72g6mZPYz

— SAI Media (@Media_SAI)

Tap to resize

Latest Videos

undefined

Paralympics ಅಭಿನವ್‌ ಬಿಂದ್ರಾ ಆತ್ಮಕತೆ ಓದಿ ಶೂಟರ್‌ ಆದ ಅವನಿ ಲೇಖರಾ!

Another for

Singhraj's 20th Shot kicked him into the top 3 in medal tally with a thrilling margin in Men's P1 10m Air Pistol SH1 Event at

— Doordarshan Sports (@ddsportschannel)

for Singhraj 🔥He was out of the medal position and with the 20th shot he got into the top three. Just WOW 💯 pic.twitter.com/cLmeOWl4IG

— Doordarshan Sports (@ddsportschannel)

ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾದ ಭಾನುವಾರ (ಆ.29) ಭಾರತ ಎರಡು ಪದಕಗಳನ್ನು ಜಯಿಸಿತ್ತು. ಇನ್ನು ಸೋಮವಾರ(ಆ.30) ಎರಡು ಚಿನ್ನ ಸಹಿತ ಒಟ್ಟು 5 ಪದಕಗಳನ್ನು ಜಯಿಸಿತ್ತು. ಇಂದು ಸಿಂಗ್‌ರಾಜ್‌ ಭಾರತಕ್ಕೆ ಮತ್ತೊಂದು ಪದಕ ಗೆದ್ದುಕೊಟ್ಟಿದ್ದಾರೆ.
 

click me!