ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸಿದ ಭಜರಂಗ್ ಪೂನಿಯಾ

Kannadaprabha News   | Asianet News
Published : Aug 09, 2021, 09:25 AM IST
ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸಿದ ಭಜರಂಗ್ ಪೂನಿಯಾ

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆಅಧಿಕೃತ ತೆರೆ * ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಿ ಮಿಂಚಿದ ಭಜರಂಗ್ ಪೂನಿಯಾ * ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಪೂನಿಯಾ

ಟೋಕಿಯೋ(ಆ.09): ಸೆಮಿಫೈನಲ್‌ನಲ್ಲಿ ವಿಜಯ ಪತಾಕೆ ಹಾರಿಸಿ ಕಂಚಿನ ಪದಕ ಕೊರಳಿಗೇರಿಸಿಕೊಂಡಿದ್ದ ಕುಸ್ತಿಪಟು ಭಜರಂಗ್‌ ಪೂನಿಯಾ ಟೋಕಿಯೋ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದರು.

ಉದ್ಘಾಟನಾ ಸಮಾರಂಭದಲ್ಲಿ ಸಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದ ಕ್ರೀಡಾಪಟುಗಳು, ಸಮಾರೋಪದಲ್ಲಿ ಟ್ರಾಕ್‌ ಸೂಟ್‌ನಲ್ಲೇ ಹೆಜ್ಜೆ ಹಾಕಿದರು. ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಬಾಕ್ಸರ್‌ ಮೇರಿಕೋಮ್‌ ಹಾಗೂ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಭಾರತದ ಪರ ಧ್ವಜಧಾರಿಗಳಾಗಿದ್ದರು.

ಸಯೊನಾರ ಟೋಕಿಯೋ; ಒಲಿಂಪಿಕ್ಸ್‌ಗೆ ಅಧಿಕೃತ ತೆರೆ

ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ತಾನು ಪಾಲನೆ ಮಾಡುತ್ತಿರುವ ಶಿಷ್ಟಾಚಾರದ ಪ್ರಕಾರ, ಇದೀಗ ಚಿನ್ನ ಗೆದ್ದಿರುವ ನೀರಜ್‌ ಚೋಪ್ರಾ ಸೇರಿದಂತೆ ಟೋಕಿಯೋ ಒಲಿಂಪಿಕ್ಸ್‌ ವಿಜೇತರು ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ ಸೇರಿದಂತೆ ಮುಂಬರುವ ಕ್ರೀಡಾಕೂಟಗಳಲ್ಲಿ ಧ್ವಜಧಾರಿಗಳಾಗಲಿದ್ದಾರೆ.

ಬೈ ಬೈ ಟೋಕಿಯೋ: 

ಇಡೀ ಜಗತ್ತನ್ನೇ ಕಾಡಿದ ಕೊರೋನಾದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟು ನಂತರ ಆತಂಕದಿಂದಲೇ ಆರಂಭವಾದ ಟೋಕಿಯೋ ಒಲಿಂಪಿಕ್ಸ್‌ ಅದ್ಧೂರಿಯಾಗಿ ಭಾನುವಾರ ಅಂತ್ಯಗೊಂಡಿದೆ. ಜಪಾನ್‌ನ ಶಿಸ್ತುಬದ್ಧ ಆಯೋಜನೆಯಿಂದಾಗಿ ಒಲಿಂಪಿಕ್ಸ್‌ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 11,000 ಕ್ರೀಡಾಪಟುಗಳು ಸೇರಿ ಸುಮಾರು 60 ಸಾವಿರದಷ್ಟು ಜನರು ಒಂದೆಡೆ ಸೇರಿದ್ದರೂ ಕೊರೋನಾ ಹೆಚ್ಚು ಬಾಧಿಸಲಿಲ್ಲ. ಇದಕ್ಕೆ ಜಪಾನ್‌ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳೇ ಕಾರಣವಾದವು. ಮುಂದಿನ ಒಲಿಂಪಿಕ್ಸ್‌ 2024ರಲ್ಲಿ ಪ್ಯಾರೀಸ್‌ನಲ್ಲಿ ನಡೆಯಲಿದೆ. ಅಲ್ಲಿ ಭಾರತ ಮತ್ತಷ್ಟು ದಾಖಲೆ ಬರೆಯಲಿ ಎಂದು ಆಶಿಸೋಣ. 

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ