* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕಿಂದು ಅಧಿಕೃತ ಚಾಲನೆ ಸಿಗಲಿದೆ.
* ಸರಳವಾಗಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇವಲ ಸಾವಿರ ವಿವಿಐಪಿಗಳು ಭಾಗಿ
* ಭಾರತೀಯ ಕಾಲಮಾನ ಇಂದು ಸಂಜೆ 4.30ಕ್ಕೆ ಕ್ರೀಡಾಕೂಟಕ್ಕೆ ಚಾಲನೆ
ಟೋಕಿಯೋ(ಜು.23): ಕ್ರೀಡೆಯ ಇತಿಹಾಸದಲ್ಲೇ ವಿಭಿನ್ನ ಎನಿಸಿರುವ ಒಲಿಂಪಿಕ್ಸ್‌ಗೆ ಅಷ್ಟೇ ವಿಭಿನ್ನವಾದ ಆರಂಭ ಶುಕ್ರವಾರ ದೊರೆಯಲಿದೆ. ಸಾವಿರಾರು ಖಾಲಿ ಆಸನಗಳ ಮುಂದೆ ಟೋಕಿಯೋ ಒಲಿಂಪಿಕ್ಸ್‌ಗೆ ಅಧಿಕೃತ ಚಾಲನೆ ಸಿಗಲಿದೆ. 68,000 ಆಸನ ಸಾಮರ್ಥ್ಯ ಹೊಂದಿರುವ ಒಲಿಂಪಿಕ್ ಕ್ರೀಡಾಂಗಣದಲ್ಲಿ ಕೇವಲ 1000 ವಿವಿಐಪಿಗಳು ಮಾತ್ರ ಹಾಜರಿರಲಿದ್ದಾರೆ. ಇದು ಸಂಪೂರ್ಣವಾಗಿ ಟೀವಿಯಲ್ಲಿ ವೀಕ್ಷಿಸಬೇಕಾದ ಒಲಿಂಪಿಕ್ಸ್.
ಜಪಾನ್‌ನಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ದೇಶದ ಹಲವೆಡೆ ಲಾಕ್‌ಡೌನ್ ಕೂಡ ಜಾರಿಯಲ್ಲಿದೆ. ಆತಂಕದ ನಡುವೆಯೇ ಕ್ರೀಡಾಕೂಟ ನಡೆಯಲಿದ್ದು, ಇದಕ್ಕೆ ಸ್ಥಳೀಯರ ವಿರೋಧ ಈಗಲೂ ಇದೆ. ಉದ್ಘಾಟನಾ ಸಮಾರಂಭವನ್ನು ಸರಳವಾಗಿ ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
undefined
ಅತಿದೊಡ್ಡ ಕ್ರೀಡಾಜಾತ್ರೆ ಟೋಕಿಯೋ ಒಲಿಂಪಿಕ್ಸ್‌ಗೆ ಕ್ಷಣಗಣನೆ
ಜಪಾನ್‌ರ ದೊರೆ ನುರುಹಿಟೊ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೊನ್, ಅಮೆರಿಕ ಅಧ್ಯಕ್ಷ ಜೋ ಬೈಡನ್‌ರ ಪತ್ನಿ ಜಿಲ್ ಬೈಡನ್ ಸೇರಿದಂತೆ ಕೆಲ ರಾಜಕೀಯ ನಾಯಕರು ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ಕಾರ‍್ಯಕ್ರಮ ಇರುತ್ತೋ? ಇಲ್ಲವೋ?
ಕೋವಿಡ್ ಭೀತಿ ಕಾರಣ ಹೆಚ್ಚು ಜನ ಸೇರಬಾರದು ಎನ್ನುವ ಕಾರಣಕ್ಕೆ ಈ ಬಾರಿ ಹೆಚ್ಚಾಗಿ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ನಡೆಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಕೆಲ ಸ್ಥಳೀಯರ ಪ್ರಕಾರ, ಅದ್ಧೂರಿ ಟೆಕ್ ಶೋಗಾಗಿ ರಿಹರ್ಸಲ್ ನಡೆದಿದ್ದು, ಡ್ರೋನ್‌ಗಳ ಪ್ರದರ್ಶನವೂ ಇರಲಿದೆ. ಉದ್ಘಾಟನಾ ಕಾರ‍್ಯಕ್ರಮದ ಸಂಪೂರ್ಣ ವೇಳಾಪಟ್ಟಿಯನ್ನು ಆಯೋಜಕರು ಬಹಿರಂಗಪಡಿಸಿಲ್ಲ. ಅಲ್ಲದೇ ಒಲಿಂಪಿಕ್ಸ್ ಕ್ರೀಡಾ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತರುವವರು ಯಾರು ಎನ್ನುವ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ.
ಉದ್ಘಾಟನಾ ಸಮಾರಂಭ: ಸಂಜೆ 4.30ಕ್ಕೆ(ಭಾರತೀಯ ಕಾಲಮಾನ)
ನೇರ ಪ್ರಸಾರ: ಡಿಡಿ ಸ್ಪೋಟ್ಸ್‌ರ್, ಸೋನಿ ಟೆನ್