* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭ
* ಜುಲೈ 23ರಂದು ಅಧಿಕೃತವಾಗಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ
* ಇದು ಜಪಾನ್‌ನಲ್ಲಿ ನಡೆಯುತ್ತಿರುವ 2ನೇ ಒಲಿಂಪಿಕ್ಸ್.
ಟೋಕಿಯೋ(ಜು.22): 2020ರ ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ‘ನಿಹೋನ್ ಎ ಯುಕೋಸೋ’ (ಜಪಾನ್‌ಗೆ ಸುಸ್ವಾಗತ!).
ಕೋವಿಡ್‌ನಿಂದಾಗಿ ಒಂದು ವರ್ಷ ಮುಂದೂಡಿಕೆಯಾಗಿದ್ದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಪದಕ ಗೆಲ್ಲಲು ಕ್ರೀಡಾಪಟುಗಳು ಎಷ್ಟು ಉತ್ಸುಕರಾಗಿದ್ದಾರೋ, ಕ್ರೀಡಾಕೂಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಹ ಅಷ್ಟೇ ಆಸಕ್ತಿಯಿಂದ ಕಾಯುತ್ತಿದ್ದಾರೆ. ಕೋವಿಡ್ ಭಯದ ನಡುವೆಯೂ ಕ್ರೀಡಾಕೂಟ ನಡೆಯಲಿದ್ದು, ಯಾವುದೇ ಅಡೆ ತಡೆಗಳಿಲ್ಲದೆ ಮುಕ್ತಾಯಗೊಳ್ಳಲಿ ಎನ್ನುವುದು ಎಲ್ಲರ ಆಶಯ.
undefined
‘ಕ್ರೀಡಾ ಕುಂಭಮೇಳ’ ಎಂದೇ ಕರೆಸಿಕೊಳ್ಳುವ ಟೋಕಿಯೋ ಒಲಿಂಪಿಕ್ ಕ್ರೀಡಾಕೂಟಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ಸಿಗಲಿದೆ. ಕೋವಿಡ್ ಮಹಾಮಾರಿಯ ನಡುವೆಯೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಹಾಗೂ ಜಪಾನ್ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೊರೋನಾ ಸೋಂಕು ಹಬ್ಬದಂತೆ ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದ್ದರೂ, ಕೆಲ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಸಾವಿರಾರು ಕೋಟಿ ರುಪಾಯಿ ಹಣ ಖರ್ಚು ಮಾಡಿ ಎಲ್ಲಾ ಸೌಕರ್ಯಗಳನ್ನು ಮಾಡಿರುವ ಜಪಾನ್ ಹಾಗೂ ಐಒಸಿ ಶತಾಯಗತಾಯ ಕ್ರೀಡಾಕೂಟವನ್ನು ನಡೆಸಿಯೇ ತೀರಲು ಪಣತೊಟ್ಟಿದೆ.
ಟೋಕಿಯೋ ಉದ್ಘಾಟನಾ ಸಮಾರಂಭದಿಂದ ಹೊರಗುಳಿದ ಬಹುತೇಕ ಭಾರತೀಯ ಅಥ್ಲೀಟ್ಸ್
ಒಲಿಂಪಿಕ್ಸ್‌ನ ಕೆಲ ಸ್ಪರ್ಧೆಗಳು ಈಗಾಗಲೇ ಆರಂಭಗೊಂಡಿದ್ದರೂ, ಶುಕ್ರವಾರ ಸಂಜೆ ಅಧಿಕೃತವಾಗಿ ಚಾಲನೆ ದೊರೆಯಲಿದೆ. ಇದು ಜಪಾನ್‌ನಲ್ಲಿ ನಡೆಯುತ್ತಿರುವ 2ನೇ ಒಲಿಂಪಿಕ್ಸ್. 1964ರಲ್ಲಿ ಟೋಕಿಯೋ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿತ್ತು. ಅಲ್ಲದೇ 2 ಬಾರಿ (1972, 1998) ಚಳಿಗಾಲದ ಒಲಿಂಪಿಕ್ಸ್‌ಗೂ ಜಪಾನ್ ಆತಿಥ್ಯ ನೀಡಿದೆ. 1940ರಲ್ಲೇ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಬೇಕಿತ್ತು. ಆದರೆ 1938ರಿಂದ ಆತಿಥ್ಯದಿಂದ ಹಿಂದೆ ಸರಿದಿತ್ತು.