ಒಲಿಂಪಿಕ್ಸ್‌ಗೆ ವೆಚ್ಚದ ಬಗ್ಗೆ ಜಪಾನ್, ಐಒಸಿ ಕಿತ್ತಾಟ

By Suvarna News  |  First Published Apr 22, 2020, 11:39 AM IST

ಕೊರೋನಾ ವೈರಸ್ ಭೀತಿಯಿಂದಾಗಿ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷ ಮುಂದೂಡಲ್ಪಟ್ಟಿವೆ. ಇದೀಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ - ಟೋಕಿಯೋ ಗೇಮ್ಸ್‌ ಆಯೋಜಕರ ನಡುವೆ ಕಿತ್ತಾಟ ಆರಂಭವಾಗಿದೆ.ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ಟೋಕಿಯೋ(ಏ.22): ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು 2021ಕ್ಕೆ ಮುಂದೂಡಿರುವ ಕಾರಣ, 2 ಬಿಲಿಯನ್‌ ಡಾಲರ್‌ನಿಂದ 6 ಬಿಲಿಯನ್‌ ಡಾಲರ್‌ ವರೆಗೂ ಹೆಚ್ಚುವರಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದ್ದು, ಈ ವೆಚ್ಚವನ್ನು ಭರಿಸುವವರು ಯಾರು ಎನ್ನುವ ಬಗ್ಗೆ ಟೋಕಿಯೋ ಗೇಮ್ಸ್‌ ಆಯೋಜಕರು ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಸಿ) ಕಿತ್ತಾಟ ಶುರುವಾಗಿದೆ. 

ಇತ್ತೀಚೆಗಷ್ಟೇ ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌, ಜಪಾನ್‌ ಪ್ರಧಾನಿ ಶಿನ್ಜೊ ಅಬೆ ಹೆಚ್ಚುವರಿ ವೆಚ್ಚ ಭರಿಸಲು ಒಪ್ಪಿದ್ದಾರೆ ಎಂದಿದ್ದರು. ತನ್ನ ವೆಬ್‌ಸೈಟ್‌ನಲ್ಲೂ ಐಒಸಿ, ಜಪಾನ್‌ ಹೆಚ್ಚುವರಿ ಹಣ ಬಿಡುಗಡೆ ಮಾಡಲಿದೆ ಎಂದು ಪ್ರಕಟಿಸಿತ್ತು. ಇದಕ್ಕೆ ಕ್ರೀಡಾಕೂಟದ ಆಯೋಜಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Tap to resize

Latest Videos

'ಕೊರೋನಾದಿಂದ ಮತ್ತೊಮ್ಮೆ ಟೋಕಿಯೋ ಒಲಿಂಪಿಕ್ಸ್‌ ಮುಂದೂಡಿಕೆ ಕಷ್ಟ'

ಕೊರೋನಾ ವೈರಸ್‌ನಿಂದಾಗಿ 2020ರ ಜುಲೈನಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 2021ರ ಜುಲೈ 23ರಿಂದ ಆರಂಭವಾಗಲಿದೆ. 


 

click me!