ಒಲಿಂಪಿಕ್ಸ್‌ಗೆ ಕೊರೋನಾ ಭೀತಿ: ಸ್ಪಷ್ಟನೆ ನೀಡಿದ ಆಯೋಜಕರು

By Suvarna News  |  First Published Feb 7, 2020, 11:22 AM IST

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ಟೋಕಿಯೋ ಒಲಿಂಪಿಕ್ಸ್‌ ಮೇಲೆ ಪರಿಣಾಮ ಬೀರಬಹುದು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ಕುರಿತು ಆಯೋಜಕರು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...


ಟೋಕಿಯೋ(ಫೆ.07): 2020ರ ಒಲಿಂಪಿಕ್ಸ್‌ಗೆ ಕೊರೋನಾ ಜ್ವರ ಭೀತಿ ಇದೆ ಎನ್ನುವುದು ಸುಳ್ಳು ಸುದ್ದಿ, ಪೂರ್ವನಿಗದಿಯಂತೆಯೇ ಕ್ರೀಡಾಕೂಟ ನಡೆಯಲಿದೆ ಎಂದು ಗುರುವಾರ ಆಯೋಜಕರು ಸ್ಪಷ್ಟಪಡಿಸಿದರು.

ಕೊರೋನಾ ವೈರಸ್ ಸೋಂಕಿತರ ಸಾಮೂಹಿಕ ಹತ್ಯೆಗೆ ಚೀನಾ ನಿರ್ಧಾರ?

Latest Videos

undefined

ಚೀನಾದಲ್ಲಿ ವ್ಯಾಪಕವಾಗಿ ಹರಡಿರುವ ಜ್ವರ 560ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದು, ಜಪಾನ್‌ಗೂ ಹಬ್ಬುವ ಭೀತಿ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆ ವರದಿಗಳನ್ನು ಆಯೋಜಕರು ತಳ್ಳಿಹಾಕಿದ್ದು ನಿಗದಿತ ದಿನಾಂಕಗಳಂದೇ ಒಲಿಂಪಿಕ್ಸ್‌ಗೆ ಚಾಲನೆ ದೊರೆಯಲಿದೆ ಎಂದರು. 

2020ರ ಒಲಿಂಪಿಕ್ಸ್‌ಗೆ 90,000 ಕೋಟಿ ಬಜೆಟ್‌!

ಜುಲೈ 24ರಂದು ಟೋಕಿಯೋ ಒಲಿಂಪಿಕ್ಸ್‌ಗೆ ಚಾಲನೆ ದೊರಕಲಿದೆ. ಇದಾದ ಬಳಿಕ ಆಗಸ್ಟ್ 25ರಿಂದ ಪ್ಯಾರಾಲಿಂಪಿಕ್ಸ್‌  ಆರಂಭವಾಗಲಿದೆ ಎಂದು ಆಯೋಜಕರು ಖಚಿತಪಡಿಸಿದರು. ಈ ಎರಡು ಕ್ರೀಡಾಕೂಟಗಳಿಗೂ ದಾಖಲೆಯ ಪ್ರಮಾಣದಲ್ಲಿ ಟಿಕೆಟ್ ಬೇಡಿಕೆಯಿದೆ. ಅದರಲ್ಲೂ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ 11 ಸಾವಿರ ಅಥ್ಲೀಟ್ಸ್‌ಗಳಿಗೆ ರಕ್ಷಣೆ ಒದಗಿಸುವುದು ಆತಿಥ್ಯ ವಹಿಸಿರುವ ಜಪಾನ್‌ಗೆ ಅತಿದೊಡ್ಡ ಸವಾಲು ಎನಿಸಿದೆ.

ಒಲಿಂಪಿಕ್ಸ್ ಯುದ್ಧದ ಸಂದರ್ಭದಲ್ಲಿ ಮಾತ್ರ ರದ್ದಾಗಿವೆ. ಇನ್ನು 1980 ಹಾಗೂ 1984ರ ಓಲಿಂಪಿಕ್ಸ್ ಕ್ರೀಡಾಕೂಟವನ್ನು ಕೆಲವು ರಾಷ್ಟ್ರಗಳು ಬಹಿಷ್ಕರಿಸಿದ್ದವು. ಇದಾದ ಬಳಿಕ ವಿಶ್ವದ ಅತಿದೊಡ್ಡ ಕ್ರೀಡಾಕೂಟ ಯಾವುದೇ ಅಡೆತಡೆಯಿಲ್ಲದೇ ಸಾಗಿದೆ.
 

click me!