‘ಒಲಿಂಪಿಕ್ಸ್‌ ಕೂಟ ಮತ್ತೆ ಮುಂದೂ​ಡಲು ಸಾಧ್ಯ​ವಿಲ್ಲ​’

By Suvarna News  |  First Published May 22, 2020, 2:37 PM IST

ಕೊರೋನಾ ಭೀತಿಯಿಂದಾಗಿ ಈಗಾಗಲೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷ ಮುಂದೂಡಲ್ಪಟ್ಟಿದೆ. ಮುಂದಿನ ವರ್ಷವೂ ಪರಿಸ್ಥಿತಿ ಹೀಗೆ ಇದ್ದರೆ ಏನು? ಎನ್ನುವ ಕುತೂಹಲಕ್ಕೆ ಅಂತಾ​ರಾ​ಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಮುಖ್ಯಸ್ಥ ತೆರೆ ಎಳೆದಿದ್ದಾರೆ. ಏನಂದ್ರು ನೀವೇ ನೋಡಿ...


ಟೋಕಿ​ಯೋ(ಮೇ.22)​: ಈ ವರ್ಷ ನಡೆ​ಯ​ಬೇ​ಕಿದ್ದ ಒಲಿಂಪಿಕ್ಸ್‌ ಕ್ರೀಡಾ​ಕೂಟವನ್ನು 2021ಕ್ಕೆ ಮುಂದೂ​ಡ​ಲಾ​ಗಿದ್ದು, ಮತ್ತೊಮ್ಮೆ ಕ್ರೀಡಾ​ಕೂಟವನ್ನು ಮುಂದೂ​ಡಲು ಸಾಧ್ಯ​ವಿಲ್ಲ ಎಂದು ಅಂತಾ​ರಾ​ಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಮುಖ್ಯಸ್ಥ ಥಾಮಸ್‌ ಬ್ಯಾಚ್‌ ಸ್ಪಷ್ಟ​ಪ​ಡಿ​ಸಿ​ದ್ದಾರೆ. 

ಮತ್ತೆ ಮುಂದೂ​ಡ​ಬೇ​ಕಾದ ಪ್ರಸಂಗ ಎದು​ರಾ​ದರೆ, ಕ್ರೀಡಾ​ಕೂಟವನ್ನು ರದ್ದು​ಗೊ​ಳಿ​ಸು​ವು​ದೊಂದೇ ಆಯ್ಕೆ ಎಂದು ಅವರು ತಿಳಿ​ಸಿ​ದ್ದಾರೆ. ಕೊರೋನಾ ಸೋಂಕು ವಿಶ್ವ​ದೆ​ಲ್ಲೆಡೆ ವ್ಯಾಪ​ಕ​ವಾಗಿ ಹರ​ಡುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾ​ಕೂಟವನ್ನು 2021ರ ಜುಲೈಗೆ ಮುಂದೂ​ಡ​ಲಾ​ಗಿತ್ತು. ‘ಒಲಿಂಪಿಕ್ಸ್‌ ಮುಂದೂ​ಡ​ಲ್ಪಟ್ಟ ಕಾರಣ, 2021ರಲ್ಲಿ ನಡೆ​ಯ​ಬೇ​ಕಿದ್ದ ಹಲವು ಕ್ರೀಡಾ​ಕೂಟಗಳಿಗೆ ಸಮಸ್ಯೆ ಎದು​ರಾ​ಗಿದೆ. ಪ್ರತಿ ವರ್ಷ ಟೂರ್ನಿ​ಗ​ಳನ್ನು ಮುಂದೂ​ಡಲು ಸಾಧ್ಯ​ವಿಲ್ಲ’ ಎಂದು ಬ್ಯಾಚ್‌ ಹೇಳಿ​ದ್ದಾರೆ.

Tap to resize

Latest Videos

ಕೊರೋನಾ ಹೀಗೇ ಮುಂದುವರಿದರೆ ಒಲಿಂಪಿಕ್ಸ್‌ ಕೂಟ ರದ್ದು..!

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ ವರ್ಷದ ಜುಲೈ 24ರಿಂದ ಆಗಸ್ಟ್ 09ರವರೆಗೆ ಜಪಾನ್‌ನ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಕೆಲ ದೇಶಗಳು ಕ್ರೀಡಾಕೂಟದಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತಪಡಿಸಿದ್ದರಿಂದ, ಕ್ರೀಡಾಕೂಟವನ್ನು ಒಂದು ವರ್ಷ ಮುಂದೂಡಲಾಗಿದೆ. ನೂತನ ವೇಳಾಪಟ್ಟಿಯಂತೆ 2021ರ ಜುಲೈ 23ರಿಂದ ಆಗಸ್ಟ್ 08ರವರೆಗೆ ಕ್ರೀಡಾಕೂಟ ಜರುಗಲಿದೆ. 

ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ವೈರಸ್ ಜಪಾನ್‌ ಮೇಲೂ ತನ್ನ ವಕ್ರದೃಷ್ಠಿ ಬೀರಿದೆ. ಇದುವರೆಗೆ ಜಪಾನ್‌ನಲ್ಲಿ 17 ಸಾವಿರಕ್ಕೂ ಅಧಿಕ ಮಂದಿ ಕೋವಿಡ್‌ 19ಗೆ ತುತ್ತಾಗಿದ್ದು, 797 ಜನ ಕೊನೆಯುಸಿರೆಳೆದಿದ್ದಾರೆ. 
 

click me!