ಹಾಕಿ ತಂಡ ಸೆಮೀಸ್‌ ಪ್ರವೇಶಿಸಿದಾಗ ಖುಷಿಯಲ್ಲಿ ಕಣ್ಣೀರಿಟ್ಟ ಕಾಮೆಂಟೇಟರ್ಸ್; ವಿಡಿಯೋ ವೈರಲ್‌

Suvarna News   | Asianet News
Published : Aug 03, 2021, 02:17 PM IST
ಹಾಕಿ ತಂಡ ಸೆಮೀಸ್‌ ಪ್ರವೇಶಿಸಿದಾಗ ಖುಷಿಯಲ್ಲಿ ಕಣ್ಣೀರಿಟ್ಟ ಕಾಮೆಂಟೇಟರ್ಸ್; ವಿಡಿಯೋ ವೈರಲ್‌

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮೀಸ್‌ ಪ್ರವೇಶಿಸಿ ಸಂಭ್ರಮಿಸಿದ್ದ ಭಾರತ ಹಾಕಿ ತಂಡ * 49 ವರ್ಷಗಳ ಬಳಿಕ ಅಂತಿಮ ನಾಲ್ಕರಘಟ್ಟಕ್ಕೇರಿದ ಮನ್‌ಪ್ರೀತ್ ಸಿಂಗ್ * ಖುಷಿಯಲ್ಲಿ ಕಣ್ಣೀರಿಟ್ಟಿದ್ದ ಕಾಮೆಂಟೇಟರ್‌ಗಳು

ಮುಂಬೈ(ಆ.03): ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಬರೋಬ್ಬರಿ 49 ವರ್ಷಗಳ ಬಳಿಕ ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿತ್ತು. ಗ್ರೇಟ್‌ ಬ್ರಿಟನ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿತ್ತು. ಈ ವೇಳೆ ಟಿವಿ ವೀಕ್ಷಣೆ ವಿವರಣೆ ನೀಡುತ್ತಿದ್ದ ಸುನಿಲ್‌ ತನೇಜಾ ಹಾಗೂ ಸಿದ್ಧಾರ್ಥ್‌ ಪಾಂಡೆ ಖುಷಿಯಲ್ಲಿ ಕಣ್ಣೀರಾದ ವಿಡಿಯೋ ವೈರಲ್‌ ಆಗಿದೆ.

ಒಂದು ಕಾಲದಲ್ಲಿ ಒಲಿಂಪಿಕ್ಸ್‌ನಲ್ಲಿ ಹಾಕಿ ರಂಗವನ್ನು ಆಳಿದ್ದ ಭಾರತ ತಂಡವು 1980ರ ಬಳಿಕ ಸೆಮಿಫೈನಲ್‌ ಹಂತಕ್ಕೇರುವಲ್ಲಿ ವಿಫಲವಾಗಿತ್ತು. ಆದರೆ ಗ್ರೇಟ್‌ ಬ್ರಿಟನ್‌ ಎದುರು 3-1 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಖುಷಿಯಲ್ಲಿ ಇಬ್ಬರು ಕಾಮೆಂಟೇಟರ್‌ಗಳು ಅಕ್ಷರಶಃ ಕಣ್ಣೀರಾಗಿದ್ದರು. ಖುಷಿಯಲ್ಲಿ ಕಾಮೆಂಟೇಟರ್‌ಗಳ ಬಾಯಲ್ಲಿ ಮಾತೇ ಹೊರಡಲಿಲ್ಲ. ಆ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟೋಕಿಯೋ 2020: ಭಾರತ ಹಾಕಿ ತಂಡದ ಫೈನಲ್‌ ಕನಸು ಭಗ್ನ..!

ಸದ್ಯ ಸೆಮಿಫೈನಲ್‌ನಲ್ಲಿ ಭಾರತ ಹಾಕಿ ತಂಡವು ಬೆಲ್ಜಿಯಂ ಎದುರು 5-2 ಅಂತರದಲ್ಲಿ ಸೋಲು ಅನುಭವಿಸುವ ಮೂಲಕ ಫೈನಲ್‌ಗೇರುವ ಅವಕಾಶ ಕೈಚೆಲ್ಲಿತು. ಆಗಸ್ಟ್ 05ರಂದು ನಡೆಯಲಿರುವ ಕಂಚಿನ ಪದಕದ ಕಾದಾಟದಲ್ಲಿ ಮನ್‌ಪ್ರೀತ್‌ ಸಿಂಗ್ ಪಡೆ ಆಸ್ಟ್ರೇಲಿಯಾ ಇಲ್ಲವೇ ಜರ್ಮನಿ ತಂಡವನ್ನು ಎದುರಿಸಲಿದೆ.
 

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ