#Cheer4India: ಸಮುದ್ರದಲ್ಲಿ ಅಭ್ಯಾಸ ಆರಂಭಿಸಿದ ವಿಷ್ಣು ಶರವಣನ್

By Suvarna NewsFirst Published Jul 16, 2021, 4:15 PM IST
Highlights

* ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನ ಸಮುದ್ರದಲ್ಲಿ ಅಭ್ಯಾಸ ಆರಂಭಿಸಿದ ಸೇಯ್ಲರ್ ವಿಷ್ಣು ಶರವಣನ್‌

* ಅಭ್ಯಾಸ ನಡೆಸುತ್ತಿರುವ ಫೋಟೋವೊಂದು ವೈರಲ್ ಆಗಿದೆ.

* ವಿಷ್ಣು ಭಾರತ ನೌಕಾದಳದ ಸಿಬ್ಬಂದಿಯಾಗಿದ್ದಾರೆ. 

ಟೋಕಿಯೋ(ಜು.16): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಆರಂಭಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಭಾರತೀಯ ಕ್ರೀಡಾಪಟುಗಳಲ್ಲಿ ಉತ್ಸಾಹ ಕೂಡಾ ಇಮ್ಮಡಿಯಾಗಲಾರಂಭಿಸಿದೆ. ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆ ಎನಿಸಿರುವ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚು ಸಂಖ್ಯೆಯ ಅಂದರೆ 126 ಕ್ರೀಡಾಪಟುಗಳು ಈ ಬಾರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೆದ್ದೇ ತೀರಬೇಕೆಂಬ ಉತ್ಸಾಹದಲ್ಲಿ ಕ್ರೀಡಾಪಟುಗಳು ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಇದೆಲ್ಲದರ ನಡುವೆ ಭಾರತದ ಸೇಯ್ಲರ್ ವಿಷ್ಣು ಶರವಣನ್‌ ಅವರು ಟೋಕಿಯೋದ ಸಮುದ್ರದಲ್ಲಿ ಅಭ್ಯಾಸ ಆರಂಭಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಷ್ಣು ಶರವಣನ್ ತಮ್ಮ ದೋಣಿಯಲ್ಲಿ ಭಾರತದ ಧ್ವಜದ ಚಿಹ್ನೆಯನ್ನು ಅಂಟಿಸಿಕೊಂಡು ಅಭ್ಯಾಸ ಮಾಡುತ್ತಿದ್ದು, ಕೋಟ್ಯಾಂತರ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ಟೋಕಿಯೋ ಒಲಿಂಪಿಕ್ಸ್‌: ಈ 10 ಭಾರತೀಯ ಅಥ್ಲೀಟ್‌ಗಳು ಪದಕ ಗೆಲ್ಲಬಹುದು..!

ಟೋಕಿಯೋ ಒಲಿಂಪಿಕ್ಸ್‌ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ವಿಷ್ಣು ಶರವಣನ್ ವಿಶೇಷ ಆಸಕ್ತಿವಹಿಸಿ ಅಭ್ಯಾಸ ಮಾಡುತ್ತಿದ್ದಾರೆ. ಅವರು ತಮ್ಮ ಅಭ್ಯಾಸದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಯಾರು ಈ ವಿಷ್ಣು ಶರವಣನ್‌..?

ಭಾರತದ ಸೇಯ್ಲರ್ ವಿಷ್ಣು ಶರವಣನ್‌ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಷ್ಣು ಮುಸ್ಸಾನ್‌ ಓಪನ್‌ ಚಾಂಪಿಯನ್‌ಶಿಪ್‌ ಮೂಲಕ ನಾಲ್ವರು ಭಾರತೀಯ ಸೇಯ್ಲರ್‌ಗಳೊಂದಿಗೆ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಸರಿ ಸುಮಾರು 6.2 ಅಡಿ ಎತ್ತರವಿರುವ ವಿಷ್ಣು ಶರವಣನ್ ಭಾರತ ನೌಕಾದಳದಲ್ಲಿ ಅತಿ ಎತ್ತರವಿರುವ ನಾವಿಕರಲ್ಲಿ ಒಬ್ಬರು ಎನಿಸಿದ್ದಾರೆ.  

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಚೀಯರ್ ಅಪ್‌ ಮಾಡಿ, ಪ್ರತಿದಿನ ಭಾರತೀಯ ಒಲಿಂಪಿಕ್ಸ್‌ ಜೆರ್ಸಿ ಪಡೆಯಿರಿ. ಒಲಿಂಪಿಕ್ಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.

click me!