ಟೋಕಿಯೋ ಒಲಿಂಪಿಕ್ಸ್‌: ನಿಯಮ ಉಲ್ಲಂಘಿಸಿದರೆ ಅಥ್ಲೀಟ್‌ಗಳಿಗೆ ನಿಷೇಧ ಶಿಕ್ಷೆ..!

By Suvarna News  |  First Published Jun 16, 2021, 8:39 AM IST

* ಟೋಕಿಯೋ ಒಲಿಂಪಿಕ್ಸ್‌ ಮಾರ್ಗಸೂಚಿ ಪ್ರಕಟಿಸಿದ ಆಯೋಜಕರು

* ನಿಯಮ ಉಲ್ಲಂಘಿಸಿದರೆ ಅಥ್ಲೀಟ್‌ಗಳನ್ನು ಬ್ಯಾನ್ ಮಾಡುವ ಎಚ್ಚರಿಕೆ

* ಜುಲೈ 23ರಿಂದ ಆಗಸ್ಟ್ 08ರ ವರೆಗೆ ನಡೆಯಲಿದೆ ಟೋಕಿಯೋ ಒಲಿಂಪಿಕ್ಸ್


ಟೋಕಿಯೋ(ಜೂ.16): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್‌ ಕ್ರೀಡಾಕೂಟದ ವೇಳೆ ಎಲ್ಲಾ ಅಥ್ಲೀಟ್‌ಗಳಿಗೆ ನಿತ್ಯ ಕೋವಿಡ್‌ ಪರೀಕ್ಷೆ ನಡೆಸುವುದಾಗಿ ಆಯೋಜಕರು ತಿಳಿಸಿದ್ದಾರೆ. ಒಂದು ವೇಳೆ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದರೆ, ಅಥ್ಲೀಟ್‌ಗಳನ್ನು ಕೂಟದಿಂದ ನಿಷೇಧಿಸುವ ಎಚ್ಚರಿಕೆಯನ್ನು ಆಯೋಜಕರು ನೀಡಿದ್ದಾರೆ.

* ಕ್ರೀಡಾಕೂಟಕ್ಕೆ ಆಗಮಿಸಿ ಕ್ರೀಡಾಕೂಟ ಮುಕ್ತಾಯಗೊಂಡು ಜಪಾನ್‌ನಿಂದ ವಾಪಸ್‌ ಹೊರಡುವ ವರೆಗೂ ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎನ್ನುವ ಅಂತಿಮ ಕೈಪಿಡಿಯನ್ನು ಆಯೋಜಕರು ಪ್ರಕಟಿಸಿದ್ದಾರೆ. 

Tap to resize

Latest Videos

* ಕ್ರೀಡಾಪಟುಗಳ ಜೊತೆಗಿರುವ ವ್ಯಕ್ತಿಗಳನ್ನೂ ಸಹ ನಿತ್ಯ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

* ಆಯೋಜಕರು ವ್ಯವಸ್ಥೆ ಮಾಡಿರುವ ವಾಹನಗಳಲ್ಲೇ ಸ್ಪರ್ಧಿಗಳು ಹಾಗೂ ಅವರೊಂದಿಗೆ ಆಗಮಿಸಿರುವ ವ್ಯಕ್ತಿಗಳು ತೆರಳಬೇಕು. ಸಾರ್ವಜನಿಕ ಸಾರಿಗೆಯನ್ನು ಬಳಕೆ ಮಾಡುವಂತಿಲ್ಲ ಎಂದು ಆಯೋಜಕರು ಷರತ್ತು ವಿಧಿಸಿದ್ದಾರೆ.

* ಮಾಧ್ಯಮ ವರದಿಗಾರರು ಪ್ರತಿ 4 ದಿನಗಳಿಗೊಮ್ಮೆ ಕೋವಿಡ್ 19 ಟೆಸ್ಟ್‌ಗೆ ಒಳಗಾಗಬೇಕು.

ಟೋಕಿಯೋ ಒಲಿಂಪಿಕ್ಸ್‌: ಭಾರತ ಪ್ರತಿನಿಧಿಸಲಿರುವ ಏಕೈಕ ವೇಟ್‌ ಲಿಫ್ಟರ್‌ ಮೀರಬಾಯಿ ಚಾನು..!

* ಊಟ ಮಾಡುವಾಗ ಹಾಗೂ ಪಾನೀಯಗಳನ್ನು ಕುಡಿಯುವಾಗ ಹೊರತುಪಡಿಸಿ ಉಳಿದೆಲ್ಲಾ ಸಮಯಗಳಲ್ಲಿ ಅಥ್ಲೀಟ್‌ಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಾಸ್ಕ್ ಧರಿಸಬೇಕು.

ಕೋವಿಡ್ ಭೀತಿ ಈಗಾಗಲೇ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಕಾಡುತ್ತಿದೆ. ಇದೆಲ್ಲದರ ನಡುವೆ ಈಗಾಗಲೇ ಉತ್ತರ ಕೊರಿಯಾ ಕೊರೋನಾ ಕಾರಣದಿಂದ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹಿಂದೆ ಸರಿದಿದೆ. ಇನ್ನು ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 08ರ ವರೆಗೆ ನಡೆಯಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!