
ನವದೆಹಲಿ : ಆಧುನಿಕ ತಂತ್ರಜ್ಞಾನವು ಎಷ್ಟು ಮಾನವನಿಗೆ ಅನುಕೂಲ ಕಾರಿಯಾಗಿದೆಯೋ ಅದರಲ್ಲಿ ಕೆಲವೊಂದು ತಂತ್ರಜ್ಞಾನವು ಅಷ್ಟೇ ಪ್ರಮಾಣದಲ್ಲಿ ಕೆಲ ಸಮಯದಲ್ಲಿ ಅನಾನುಕೂಲಕಾರಿಯೂ ಕೂಡ ಆಗಿದೆ.
ಅದರಲ್ಲಿ ವಾಟ್ಸಾಪ್ ಎನ್ನುವ ಮೆಸೇಜಿಂಗ್ App ನ್ನು ಇದೀಗ ಕೋಟ್ಯಂತರ ಮಂದಿ ಬಳಕೆ ಮಾಡುತ್ತಿದ್ದಾರೆ. ವಾಟ್ಸಾಪ್ ಮೂಲಕ ನೀವು ಯಾವುದೇ ರೀತಿಯಾದ ಮಾಹಿತಿಯನ್ನು ಕೂಡ ಹಂಚಿಕೊಳ್ಳಬಹುದಾಗಿದೆ. ವಿಡಿಯೋ ಕಳಿಸುವುದು. ಮೆಸೇಜ್ ಕಳಿಸುವುದು. ಕರೆ ಮಾಡುವ ಸೌಲಭ್ಯವನ್ನೂ ಕೂಡ ವಾಟ್ಸಾಪ್’ನಲ್ಲಿ ನೀಡಲಾಗಿದೆ.
ಇದರಲ್ಲಿ ಕೆಲವೊಂದು ಖಾಸಗಿ ಮಾಹಿತಿಯನ್ನು ಗೌಪ್ಯವಾಗಿಡಲೂ ಸಹ ಕಂಪನಿ ಅವಕಾಶವನ್ನು ನೀಡಿದೆ. ಅದರಲ್ಲಿ ಲಾಸ್ಟ್ ಸೀನ್ ಆಫ್ ಮಾಡುವ ಸೌಲಭ್ಯವೂ ಕೂಡ ಒಂದಾಗಿದೆ.
ಆದರೆ ಕೆಲವೊಂದು App ಮೂಲಕ ನಿಮ್ಮ ಗೆಳೆಯರು ನಿಮ್ಮ ಮೇಲೆ ಗೂಢಚರ್ಯೆ ಮಾಡಬಹುದಾಗಿದೆ. ಅಂತಹ App ಗಳು ಕೂಡ ಇಂದು ಲಭ್ಯವಿದೆ. ಚಾಟ್ ವಾಚ್ ಎನ್ನುವ App ಮೂಲಕ ನಿಮ್ಮ ವಾಟ್ಸಾಪ್ ಮೇಲೆ ನಿಮ್ಮ ಗೆಳೆಯರು ಕಣ್ಣಿಡಬಹುದಾಗಿದೆ. ನೀವು ಯಾವ ಸಮಯದಲ್ಲಿ ಆನ್’ಲೈನ್’ನಲ್ಲಿದ್ದಿರಿ. ನೀವು ಎಷ್ಟು ಸಮಯ ವಾಟ್ಸಾಪ್’ನಲ್ಲಿ ಕಳೆಯುತ್ತೀರಿ ಈ ರೀತಿಯಾದ ಅನೇಕ ಮಾಹಿತಿಯನ್ನು ಈ App ನೀಡುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.