ದೂರದ ಓಟಕ್ಕೆ ಬಿರುಸು ಬೇಟೆಗಾರ; ಹೊಸ ಮರ್ಸಿಡಿಸ್ ಕಾರು ಹೇಗಿದೆ ಗೊತ್ತಾ..?

By Suvarna Web DeskFirst Published Mar 29, 2018, 10:11 PM IST
Highlights

ಈ ಕಾರಿನ ಟೆಸ್ಟ್ ಡ್ರೈವ್‌'ಗೆ ಹೋದ ಪವರ್‌ಡ್ರೈವ್ ಟೀಮಿಗೆ ಇಷ್ಟವಾದದ್ದು ಇದರ ಬಲಾಢ್ಯತೆ. ವೇಗ ಮತ್ತು ರಸ್ತೆಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಗುಣ. ಎಡಗೈ ಬೆರಳಿನ ತುದಿಯಲ್ಲಿ ಟ್ರಾನ್ಸ್‌'ಮಿಷನ್. ಬಲಗಾಲಿನ ಹೆಬ್ಬೆರಳಿನ ತುದಿ ತಾಕಿದರೆ ಸಾಕು, ಮುನ್ನುಗ್ಗುವ ವೇಗ, ಕ್ಷಣಾರ್ಧದಲ್ಲಿ 60 ಕಿಲೋಮೀಟರ್ ವೇಗ ಪಡೆದುಕೊಳ್ಳಬಲ್ಲ ತಾಕತ್ತು ಮತ್ತು ಎಂಥಾ ವೇಗದಿಂದಲೂ ಥಟ್ಟನೆ ನಿಲುಗಡೆಗೆ ಬರಬಲ್ಲ ಸಾಮರ್ಥ್ಯ.

ಒಂದು ಕಾರು ಸ್ಪೋರ್ಟ್ಸ್ ಅನ್ನಿಸಿಕೊಳ್ಳುವುದು ಹೇಗೆ? ಅದರ ಪೇಂಟ್‌'ನಿಂದಾಗಿಯೇ ಅನ್ನುತ್ತಾರೆ ಪಂಡಿತರು. ಕ್ರೋಮ್ ಎಂಬ ಮಾಯಾವಿ ಎಂಥಾ ಕಾರನ್ನು ಕೂಡ ಸೊಗಸಾಗಿ ಕಾಣುವಂತೆ ಮಾಡಬಲ್ಲ. ಹಾಗಂತ ಇಲ್ಲಿ ಯಾವುದೂ ಅತಿಯಲ್ಲ. ಹಾಗಾಗಿಯೇ ಈ ಕಾರನ್ನು ಪ್ರವಾಸಕ್ಕೆ, ಪಾರ್ಟಿಗೆ, ಮೀಟಿಂಗಿಗೆ-ಯಾವ ಜಾಗಕ್ಕೆ ಬೇಕಾದರೂ ಒಯ್ಯಬಹುದು ಅನ್ನುತ್ತಾರೆ ಈ ಕಾರಿನ ವಿಶೇಷಗಳನ್ನು ಬಲ್ಲವರು.

ಡಿಯಾದಲ್ಲಿ ಮೊನ್ನೆ ಮೊನ್ನೆಯ ತನಕ ಬರೀ ಎಎಮ್‌'ಜಿ ಮಾಡೆಲ್ಲುಗಳಷ್ಟೇ ಸಿಗುತ್ತವೆ. ಜಿಎಲ್‌'ಸಿ ಯಾವಾಗ ಬರುತ್ತದಪ್ಪಾ ಎಂದು ಕಾಯುತ್ತಾ ಕೂತವರ ಪಾಲಿಗೆ ಖುಷಿಕೊಟ್ಟದ್ದು ಮರ್ಸಿಡಿಸ್ ಜಿಎಲ್‌'ಸಿ-43. ಇಷ್ಟು ಮೋಹಕವಾದ ಆಫ್‌'ರೋಡ್ ವಾಹನವೊಂದು ಇರಬಹುದು ಅನ್ನುವ ಕಲ್ಪನೆಯೂ ಇರಲಿಕ್ಕೆ ಸಾಧ್ಯವಿಲ್ಲ ಎಂಬಷ್ಟು ಸೊಗಸಾಗಿ ಈ ಕೂಪೆಯನ್ನು ರೂಪಿಸಲಾಗಿದೆ. ಬಹುಶಃ ಒಂದು ಆಫ್‌'ರೋಡ್ ಕಾರು, ಒಳಗೆ ಕೂತವರಿಗೆ ಆಫ್‌'ರೋಡ್ ಅನ್ನಿಸದಷ್ಟು ಸೊಗಸಾದ ಇಂಟೀರಿಯರ್, ವೇಗಕ್ಕೆ ತಕ್ಕ ರಭಸದ ಜೊತೆ ನಿರಾಳವೂ ಸಾಧ್ಯವೆಂದು ತೋರಿಸಿಕೊಟ್ಟ ಕಾರು ಇದು.

ಒಂದು ಕಾರು ಸ್ಪೋರ್ಟ್ಸ್ ಅನ್ನಿಸಿಕೊಳ್ಳುವುದು ಹೇಗೆ? ಅದರ ಪೇಂಟ್‌ನಿಂದಾಗಿಯೇ ಅನ್ನುತ್ತಾರೆ ಪಂಡಿತರು. ಕ್ರೋಮ್ ಎಂಬ ಮಾಯಾವಿ ಎಂಥಾ ಕಾರನ್ನು ಕೂಡ ಸೊಗಸಾಗಿ ಕಾಣುವಂತೆ ಮಾಡಬಲ್ಲ. ಹಾಗಂತ ಇಲ್ಲಿ ಯಾವುದೂ ಅತಿಯಲ್ಲ. ಹಾಗಾಗಿಯೇ ಈ ಕಾರನ್ನು ಪ್ರವಾಸಕ್ಕೆ, ಪಾರ್ಟಿಗೆ, ಮೀಟಿಂಗಿಗೆ- ಯಾವ ಜಾಗಕ್ಕೆ ಬೇಕಾದರೂ ಒಯ್ಯಬಹುದು ಅನ್ನುತ್ತಾರೆ ಈ ಕಾರಿನ ವಿಶೇಷಗಳನ್ನು ಹೇಳುವವರು. ನಮಗೆ ಅದೆಲ್ಲ ಹೊಸದು ಬಿಡಿ. ಭಾರತದಲ್ಲಿ ಮದುವೆಗೂ ಮಸಣಕೂ ಒಂದೇ ಕಾರು. ಒಂದು ಕಾರನ್ನು ಹೇಗೆ ವರ್ಣಿಸಬಹುದು ಎಂದು ಹೇಳುವುದು ಕಷ್ಟ. ಈಗೀಗ ಕಾರಿನ ಹೆಡ್‌'ಲೈಟುಗಳ ಆಕಾರ ಯಾವುದು, ಅದರ ಬೆಳಕು ಎಂಥದ್ದು, ಬೆಳ್ಳಗಿದೆಯೋ ಹಳದಿಯಿದೆಯೋ, ಎಕ್ಸ್‌'ಹಾಸ್ಟ್ ಪೈಪಿನ ಶೇಪು ಹೇಗಿದೆ- ಎಂಬುದರಿಂದ ವಿವರಣೆ ಶುರುವಾಗುತ್ತದೆ. ಅದೆಲ್ಲವನ್ನು ಇಂಚಿಂಚಾಗಿ ಗಮನಿಸುವವರು ಇದ್ದಾರೋ ಎಂದು ಕೇಳಬೇಡಿ. ಹಾಗೆ ವಿವರಿಸುವ ಮಂದಿಗೆ ಕಾರೆಂಬುದು ಕೇವಲ ಕಾರಲ್ಲ, ಅದೊಂದು ಮಹಾಕಾವ್ಯ. ಕಾವ್ಯದ ಸೌಂದರ್ಯವನ್ನು ವಿವರಿಸುವಷ್ಟೇ ಎಚ್ಚರಿಕೆಯಿಂದ ಕಾರಿನ ಅಂಗಾಂಗಗಳನ್ನೂ ವರ್ಣಿಸಲಾಗುತ್ತದೆ.

ಈ ಕಾರಿನ ಟೆಸ್ಟ್ ಡ್ರೈವ್‌'ಗೆ ಹೋದ ಪವರ್‌ಡ್ರೈವ್ ಟೀಮಿಗೆ ಇಷ್ಟವಾದದ್ದು ಇದರ ಬಲಾಢ್ಯತೆ. ವೇಗ ಮತ್ತು ರಸ್ತೆಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಗುಣ. ಎಡಗೈ ಬೆರಳಿನ ತುದಿಯಲ್ಲಿ ಟ್ರಾನ್ಸ್‌'ಮಿಷನ್. ಬಲಗಾಲಿನ ಹೆಬ್ಬೆರಳಿನ ತುದಿ ತಾಕಿದರೆ ಸಾಕು, ಮುನ್ನುಗ್ಗುವ ವೇಗ, ಕ್ಷಣಾರ್ಧದಲ್ಲಿ 60 ಕಿಲೋಮೀಟರ್ ವೇಗ ಪಡೆದುಕೊಳ್ಳಬಲ್ಲ ತಾಕತ್ತು ಮತ್ತು ಎಂಥಾ ವೇಗದಿಂದಲೂ ಥಟ್ಟನೆ ನಿಲುಗಡೆಗೆ ಬರಬಲ್ಲ ಸಾಮರ್ಥ್ಯ.

ವೇಗದ ಕಾರುಗಳಿಗೆ ಓಡುವ ಶಕ್ತಿಗಿಂತ ನಿಲ್ಲುವ ಶಕ್ತಿಯೇ ಹೆಚ್ಚಿಗಿರಬೇಕಾದದ್ದು ಅಗತ್ಯ. ಅದು ಈ ಕಾರಲ್ಲಿದೆ ಅನ್ನುವುದು ಖುಷಿ. ಈ ಕಾರಿನ ಸ್ಟೀರಿಂಗ್ ವೀಲ್ ಹಿಡಿತಕ್ಕೆ ಹೊಂದುವಂತಿದೆ. ಕಾರು ನಿಲ್ಲಿಸಿದ ತಕ್ಷಣ ಅದು ಕೊಂಚ ಮೇಲಕ್ಕೆದ್ದು ಗೌರವ ಸೂಚಿಸುತ್ತದೆ. ಕೊಂಚ ದೊಡ್ಡ ಹೊಟ್ಟೆಯವರಿಗೆ ಇಳಿಯುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಆದರೆ ಈ ಕಾರಿನೊಳಗೆ ಏರುವುದು ಮತ್ತು ಇಳಿಯುವುದು ಅಂಥ ಸುಲಭದ ಸಂಗತಿಯೇನಲ್ಲ. ಅದಕ್ಕೊಂದಷ್ಟು ವಿಶೇಷವಾದ ತಯಾರಿ ಮತ್ತು ತರಬೇತಿ ಬೇಕು. ಆದರೆ ಒಮ್ಮೆ ಒಳಗೆ ಕೂತರೆ ಇಳಿಯುವುದೇ ಬೇಡ ಅನ್ನಿಸುವಷ್ಟು ಸೊಗಸಾದ ಅಗಲವಾದ ಮನುಷ್ಯರ ಬೆನ್ನಿಗೆ ಹೇಳಿಮಾಡಿಸಿದಂತೆ ಸೀಟುಗಳು. ಎಷ್ಟು ಬೇಕೋ ಅಷ್ಟು ಗಟ್ಟಿ, ಎಷ್ಟು ಬೇಕೋ ಅಷ್ಟು ಮೃದು. ತಾಯಿ ಮಗುವನ್ನು ಅವುಚಿ ಹಿಡಿದಷ್ಟೇ ಹಿತ. ಪ್ರಯಾಣ ಹೇಗಿತ್ತು ಅಂತ ಕೇಳಿದರೆ ಬಹಳ ಚೆನ್ನಾಗಿತ್ತು ಅಂತ ಧೈರ್ಯವಾಗಿ ಹೇಳಬಹುದೇ ಎಂಬ ಪ್ರಶ್ನೆ ಮೂಡುವುದಕ್ಕೆ ಕಾರಣ ರಸ್ತೆಯೋ ಕಾರೋ ಸ್ಪಷ್ಟವಿಲ್ಲ. ಆದರೆ ರಸ್ತೆಯುದ್ದಕ್ಕೂ ವಿನಾಕಾರಣ ಹಾಕಲಾದ ಹಂಪ್ ಗಳಿಗೆ ಸಿಕ್ಕಾಗೆಲ್ಲ ಕಿವಿಗೆ ದಡ್ ದಡ್ ಎಂಬ ಸದ್ದು ಅಪ್ಪಳಿಸುತ್ತಲೇ ಇತ್ತು. ಆ ಮಟ್ಟಿಗೆ ಕಾರು ಶುಷ್ಕ ಮತ್ತು ಹಟಮಾರಿ. ವೇಗ ಸಿದ್ಧಿಸಿಕೊಳ್ಳಬಹುದು ಆದರೆ ವೇಗವನ್ನು ನಿಭಾಯಿಸುವುದು ಕೊಂಚ ಕಷ್ಟವೇ. ಆ ಮಟ್ಟಿಗೆ ಇದು ಹೇಳಿಕೇಳಿ ಆಫ್‌'ರೋಡ್ ವಾಹನ. ನಿಧಾನವೇ ಪ್ರಧಾನ, ಗಾಂಭೀರ್ಯವೇ ಸಲ್ಲಕ್ಷಣ.

ಈ ಕಾರು ಕೊಳ್ಳಬಹುದೇ ಎಂಬ ಪ್ರಶ್ನೆಗೆ ನಿಮ್ಮ ನಿಮ್ಮ ಬಜೆಟ್ಟೇ ಉತ್ತರ. ಅದರಾಚೆಗೂ ಪ್ರಶ್ನೆಗಳಿದ್ದರೆ ಇದು ಒಳ್ಳೆಯ ಆಯ್ಕೆ ಎಂಬ ಬಗ್ಗೆ ಅನುಮಾನ ಬೇಕಿಲ್ಲ. ಇದರ ಪ್ರತಿಸ್ಪರ್ಧಿ ಬಿಎಂಡಬ್ಲು, ಆಡಿ ಕಾರುಗಳಲ್ಲಿ ಸಿಗಬಹುದೇ ಹೊರತು, ಮರ್ಸಿಡಿಸ್‌'ನಲ್ಲಿ ಇದನ್ನು ಹೋಲುವ ಕಾರುಗಳಿಲ್ಲ. ಎಂಟರ್‌'ಟೇನ್‌'ಮೆಂಟು, ನೇವಿಗೇಷನ್- ಇವುಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡರೆ ಯಾವ ಕೊರತೆಯೂ ಕಾಣಿಸದು. ಆದರೂ 80 ಲಕ್ಷದ ದುಬಾರಿ ಬೆಲೆ ನಿಮ್ಮೆದುರಿಗೆ ಕೊಂಚ ಅಗಾಧವಾಗಿ ಕಾಣಿಸೀತು. ನಾಲ್ಕೈದು ದಿನ ಉಳಿಯುವುದಕ್ಕೆ ಬೇಕಾದಷ್ಟು ಲಗೇಜು ಒಯ್ಯುವಷ್ಟು ಬೂಟ್‌'ಸ್ಪೇಸು ದೊಡ್ಡದಾಗಿದೆಯಾ ಅನ್ನುವುದೊಂದು ಪ್ರಶ್ನೆ. ಒಮ್ಮೊಮ್ಮೆ ರೆಬೆಲ್‌ಸ್ಟಾರ್ ಥರ, ಮತ್ತೊಮ್ಮೆ ನಿಧಾನಿಯಂತೆ, ಕೆಲವೊಮ್ಮೆ ಹಳೆಯ ಕಾಲದ ಶೂರನಂತೆ, ಮತ್ತೊಮ್ಮೆ ಯೋಗಿಯಂತೆ ಕಾಣಿಸುವ ಈ ಹೊಸ ಜಿಎಲ್‌'ಸಿ 43ಯ ಜೊತೆಗೆ ಕ್ರಮೇಣ ಬಾಂಧವ್ಯ ಬೆಳೆದೀತೇನೋ? ಒಂದು ಕತೆಯ ಹಾಗೆ!

click me!