
ಮುಂಬೈ : ಕಳೆದ ವರ್ಷ ಆರಂಭವಾದ ರಿಲಯನ್ಸ್ ಜಿಯೋ ಇದೀಗ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಆಫರ್ ನೀಡುತ್ತಿದೆ. ಇಂದಿಗೆ ಜಿಯೋ ಪ್ರೈಮ್ ಮೆಂಬರ್ಶಿಪ್ ಮುಕ್ತಾಯವಾಗುತ್ತಿದೆ.
ಆದರೆ ಈ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ ಮತ್ತೆ ಒಂದು ವರ್ಷಗಳ ಕಾಲ ಜಿಯೋ ತನ್ನ ಸೇವೆಯನ್ನು ಮುಂದುವರಿಸುತ್ತಿದೆ. ಇದಕ್ಕೆ ಯಾವುದೇ ರೀತಿಯಾದ ಹೆಚ್ಚುವರಿ ಹಣವನ್ನು ನೀವು ಕಟ್ಟಬೇಕಾದ ಅಗತ್ಯವಿಲ್ಲ. ಜಿಯೋ ಮೆಂಬರ್’ಗಳು ಅದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದೆ.
ಜಿಯೋ ಸೇವೆ ಮುಂದುವರಿಸುವುದಾದಲ್ಲಿ ನೀವು ಮಾಡಬೇಕಾದದು ಇಷ್ಟೆ
ಮೈ ಜಿಯೋ App ಡೌನ್ ಲೋಡ್ ಮಾಡಿಕೊಂಡು ಮುಂದಿನ 12 ತಿಂಗಳು ಸೇವೆಯನ್ನು ಮುಂದುವರಿಸುವ ಆಸಕ್ತಿ ಇರುವುದಾಗಿ ನೀವು ವಿಚಾರ ಹಂಚಿಕೊಳ್ಳಬೇಕು. ಆಗ ನೀವು ಮತ್ತೆ ಒಂದು ವರ್ಷಗಳ ಕಾಲ ಪ್ರೈಮ್ ಮೆಂಬರ್ಶಿಪ್ ಪಡೆಯುತ್ತೀರಿ.
ಇನ್ನು ನೀವು 2018ರ ಏಪ್ರಿಲ್ ಬಳಿಕ ನೀವು ಜಿಯೋ ಗ್ರಾಹಕರಾಗಿದ್ದಲ್ಲಿ 99 ರು. ರಿಚಾರ್ಜ್ ಮಾಡಿಸಿಕೊಳ್ಳುವ ಮೂಲಕ ಮೆಂಬರ್ಶಿಪ್ ಪಡೆಯಬಹುದಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.