
ದಿನನಿತ್ಯ ಕೋಟ್ಯಂತರ ಮಂದಿ ತಮ್ಮ ಸ್ಮಾರ್ಟ್ಫೋನ್ ಅನ್ಲಾಕ್ ಮಾಡಲು ಬೆರಳಚ್ಚು ಅಂದರೆ ಫಿಂಗರ್ಪ್ರಿಂಟ್ (Fingerprint) ಬಳಸುತ್ತಾರೆ. ಆದರೆ ಸಾವಿನ ನಂತರ ಫೋನ್ನ ಫಿಂಗರ್ಪ್ರಿಂಟ್ ಸೆನ್ಸರ್ ಬಳಕೆದಾರರ ಬೆರಳನ್ನೇ ಗುರುತಿಸಲು ನಿರಾಕರಿಸುತ್ತದೆ ಎನ್ನುವುದು ತುಂಬಾ ಜನರಿಗೆ ಗೊತ್ತಿಲ್ಲ. ದೇಹದಲ್ಲಿ ಹರಿಯುವ ಸೂಕ್ಷ್ಮ ವಿದ್ಯುತ್ ನಿಂತುಹೋಗುವುದೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಆ ಕಾರಣದಿಂದಲೇ ಫಿಂಗರ್ಪ್ರಿಂಟ್ ಮೂಲಕ ಫೋನ್ ಅನ್ಲಾಕ್ ಆಗುವುದಿಲ್ಲ.
ಇಂದು ಬಹುತೇಕ ಸ್ಮಾರ್ಟ್ಫೋನ್ಗಳಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಇದ್ದು, ಅದರ ಮೂಲಕವೇ ಜನರು ಫೋನ್ ಅನ್ಲಾಕ್ ಮಾಡುತ್ತಾರೆ. ಆದರೆ, ವ್ಯಕ್ತಿಯ ಮರಣದ ನಂತರ ಅದೇ ಫೋನ್ನ ಫಿಂಗರ್ಪ್ರಿಂಟ್ ಸೆನ್ಸರ್ ಆ ವ್ಯಕ್ತಿಯ ಬೆರಳಿನಿಂದಲೇ ಫೋನ್ ಅನ್ನು ಅನ್ಲಾಕ್ ಮಾಡಲು ಸಾಧ್ಯವಿಲ್ಲ. ಇದರ ಹಿಂದೆ ಒಂದು ಕಡೆ ಫಿಂಗರ್ಪ್ರಿಂಟ್ ಸೆನ್ಸರ್ನ ವಿಶೇಷ ವಿನ್ಯಾಸ ಮತ್ತು ಕಾರ್ಯವಿಧಾನವಿದ್ದರೆ, ಮತ್ತೊಂದು ಕಡೆ ಮರಣದ ನಂತರ ಮನುಷ್ಯನ ದೇಹದಲ್ಲಿ ಸಂಭವಿಸುವ ಕೆಲವು ಬದಲಾವಣೆಗಳಿವೆ.
ಫೋನ್ನಲ್ಲಿರುವ ಫಿಂಗರ್ಪ್ರಿಂಟ್ ಸ್ಕ್ಯಾನರ್ ಕೇವಲ ಬೆರಳಚ್ಚಿನ ಚಿತ್ರವನ್ನು ಮಾತ್ರ ಸೆರೆಹಿಡಿಯುವುದಿಲ್ಲ. ಬದಲಿಗೆ ಚರ್ಮದ ಮೇಲಿರುವ ಸೂಕ್ಷ್ಮ ತೇವಾಂಶ (Moisture), ಉಷ್ಣತೆ ಮತ್ತು ದೇಹದೊಳಗೆ ಹರಿಯುತ್ತಿರುವ ಅತ್ಯಂತ ಸೂಕ್ಷ್ಮ ವಿದ್ಯುತ್ ಪ್ರವಾಹವನ್ನೂ (Micro current) ಗ್ರಹಿಸಬಲ್ಲದು. ಸೆನ್ಸರ್ ಮೇಲೆ ನಾವು ಬೆರಳು ಇಟ್ಟ ಬಳಿಕ ಅದು ಜೀವಂತವಾಗಿದೆಯೇ ಅಥವಾ ನಿರ್ಜೀವವಾಗಿದೆಯೇ ಎಂಬುದನ್ನು ಇದೇ ಮೂಲಕ ಫೋನ್ನ ಫಿಂಗರ್ಪ್ರಿಂಟ್ ಸೆನ್ಸರ್ ಗುರುತಿಸುತ್ತದೆ. ಈ ಎಲ್ಲಾ ಮಾಹಿತಿಗಳನ್ನು ಸಂಸ್ಕರಿಸಿದ (Process) ನಂತರವೇ ಫಿಂಗರ್ಪ್ರಿಂಟ್ ಸಹಾಯದಿಂದ ಫೋನ್ ಅನ್ಲಾಕ್ ಆಗುತ್ತದೆ.
ಜೀವಂತ ವ್ಯಕ್ತಿಯ ದೇಹದಲ್ಲಿ ರಕ್ತ ನಿರಂತರವಾಗಿ ಹರಿಯುತ್ತಿರುತ್ತದೆ ಮತ್ತು ಚರ್ಮದಲ್ಲಿ ಸ್ವಲ್ಪ ಪ್ರಮಾಣದ ಕರೆಂಟ್ ಹಾಗೂ ತೇವಾಂಶ ಇರುತ್ತದೆ. ಮರಣದ ಕೆಲವೇ ಹೊತ್ತಿನಲ್ಲಿ ಹೃದಯ ಬಡಿತ ನಿಂತುಹೋಗಿ, ಬೆರಳುಗಳ ತೇವಾಂಶ ಒಣಗಿದಾಗ ಚರ್ಮದ ಮೇಲಿರುವ ಸೂಕ್ಷ್ಮ ಕರೆಂಟ್ ಕೂಡ ಇಲ್ಲವಾಗುತ್ತದೆ. ಫಿಂಗರ್ಪ್ರಿಂಟ್ ಸೆನ್ಸರ್ ಸರಿಯಾಗಿ ಕಾರ್ಯನಿರ್ವಹಿಸಲು ಈ ಕರೆಂಟ್ ಅತ್ಯಗತ್ಯ. ಇದಲ್ಲದೆ, ಮರಣದ ನಂತರ ಚರ್ಮವು ಸಂಕುಚಿತಗೊಳ್ಳುತ್ತದೆ (Shrinks) ಮತ್ತು ಫಿಂಗರ್ಪ್ರಿಂಟ್ ರಚನೆಯಲ್ಲೂ ಸ್ವಲ್ಪ ವ್ಯತ್ಯಾಸ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೇಹವು ಜೀವಂತವಾಗಿದೆಯೇ ಇಲ್ಲವೇ ಎಂಬುದನ್ನು ಸೆನ್ಸರ್ ಗ್ರಹಿಸಲು ಸಾಧ್ಯವಾಗದೆ, ಬೆರಳನ್ನು ಅಮಾನ್ಯವೆಂದು ಪರಿಗಣಿಸಿ ಫೋನ್ ಅನ್ಲಾಕ್ ಮಾಡಲು ನಿರಾಕರಿಸುತ್ತದೆ.
ಯಾವುದೇ ಅಹಿತಕರ ಘಟನೆ ನಡೆದಾಗ ಕುಟುಂಬಸ್ಥರಿಗೆ ಫೋನ್ ಹಾಗೂ ಅದರಲ್ಲಿರುವ ಪ್ರಮುಖ ಫೋಟೋಗಳು, ದಾಖಲೆಗಳು ಮತ್ತು ಇತರ ಡೇಟಾ ಸುಲಭವಾಗಿ ಸಿಗಬೇಕೆಂದರೆ ತಂತ್ರಜ್ಞಾನ ಕಂಪನಿಗಳು ವಿಶೇಷ ಸೌಲಭ್ಯಗಳನ್ನು ನೀಡಿವೆ
ಲೆಗಸಿ ಕಾಂಟ್ಯಾಕ್ಟ್ (Legacy Contact): ಐಫೋನ್ ಬಳಸುವವರು ತಮ್ಮ Apple ID ನಲ್ಲಿ 'Legacy Contact' ಸೌಲಭ್ಯವನ್ನು ಸೇರಿಸಬಹುದು. ಇದರಲ್ಲಿ ಕುಟುಂಬದ ಅಥವಾ ಪರಿಚಯದ ವಿಶ್ವಾಸಾರ್ಹ ಸದಸ್ಯರ ಹೆಸರನ್ನು ನಮೂದಿಸಬಹುದು. ಅಗತ್ಯವಿದ್ದಾಗ ಆ ವ್ಯಕ್ತಿ ಮರಣ ಪ್ರಮಾಣಪತ್ರ (Death Certificate) ಮತ್ತು ವಿಶೇಷ ಕೋಡ್ (Access Key) ಬಳಸಿ ನಿಮ್ಮ ಐಕ್ಲೌಡ್ (iCloud) ಡೇಟಾವನ್ನು ಪಡೆಯಬಹುದು.
ಆಪಲ್ನ ಲೆಗಸಿ ಕಾಂಟ್ಯಾಕ್ಟ್ ಮಾದರಿಯಲ್ಲೇ ಗೂಗಲ್ ಸಹ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ವಿಶೇಷ ವ್ಯವಸ್ಥೆಯನ್ನು ಒದಗಿಸುತ್ತದೆ:
ಇನ್ಆಕ್ಟಿವ್ ಅಕೌಂಟ್ ಮ್ಯಾನೇಜರ್ (Inactive Account Manager): ಗೂಗಲ್ ಆಂಡ್ರಾಯ್ಡ್ ಬಳಕೆದಾರರಿಗೆ 'Inactive Account Manager' ಎಂಬ ಫೀಚರ್ ನೀಡುತ್ತದೆ. ಇದರ ಸೆಟ್ಟಿಂಗ್ನಲ್ಲಿ ನಿಮ್ಮ ಖಾತೆಯು ನಿಗದಿತ ಅವಧಿಯವರೆಗೆ ಬಳಕೆಯಾಗದೆ ಇದ್ದಾಗ, ನೀವು ಆಯ್ಕೆ ಮಾಡಿದ ವ್ಯಕ್ತಿಗೆ ಇ-ಮೇಲ್ ಕಳುಹಿಸುವಂತೆ ಮತ್ತು ನಿಮ್ಮ ಫೋಟೋಗಳು, ಇ-ಮೇಲ್ ಅಥವಾ ಗೂಗಲ್ ಡ್ರೈವ್ ಡೇಟಾವನ್ನು ಡೌನ್ಲೋಡ್ ಮಾಡಿಕೊಳ್ಳಲು ಅನುಮತಿ ನೀಡುವಂತೆ ಮೊದಲೇ ನಿಗದಿಪಡಿಸಬಹುದು.
ಸುರಕ್ಷತಾ ನಿಯಮ ಮತ್ತು ಮುನ್ನೆಚ್ಚರಿಕೆ: ಭದ್ರತಾ ನಿಯಮಗಳ ಕಾರಣದಿಂದಾಗಿ ಕಂಪನಿಗಳು ನೇರವಾಗಿ ಫೋನ್ನ ಲಾಕ್ ಅಥವಾ ಪಾಸ್ವರ್ಡ್ ಮುರಿಯಲು ಅವಕಾಶ ನೀಡುವುದಿಲ್ಲ. ಹೀಗಾಗಿ, ಮುಂಚಿತವಾಗಿಯೇ ನಂಬಿಕಸ್ಥ ವ್ಯಕ್ತಿಯನ್ನು ತಮ್ಮ ಡಿಜಿಟಲ್ ನಾಮಿನಿ (Digital Nominee) ಆಗಿ ನೇಮಿಸಿ ಇಟ್ಟುಕೊಳ್ಳುವುದು ಸೂಕ್ತ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.