ಬಾಹ್ಯಾಕಾಶದಲ್ಲಿ ಚಂದ್ರೋದಯ, ಚಂದ್ರಾಸ್ತ ಹೇಗೆ ಕಾಣುತ್ತೆ? ಭಾರತದ ಗಗನಯಾತ್ರಿಯ ರಿಯಲ್ ಟೈಮ್ ವಿಡಿಯೋ

Published : Nov 26, 2026, 06:42 PM IST
What Does the Moon Look Like from Space

ಸಾರಾಂಶ

ಬಾಹ್ಯಾಕಾಶದಲ್ಲಿ ಚಂದ್ರನ ಉದಯ ಹಾಗೂ ಚಂದ್ರಾಸ್ತ ಹೇಗೆ ಕಾಣುತ್ತೆ, ಈ ಕುರಿತು ರಿಯಲ್ ಟೈಮ್ ಅದ್ಭುತ ವಿಡಿಯೋವನ್ನು ಭಾರತೀಯ ಮೂಲದ ಗಗನಯಾತ್ರಿ ಹಂಚಿಕೊಂಡಿದ್ದಾರೆ. ಈ ದೃಶ್ಯ ಅಚ್ಚರಿಗೊಳಿಸುತ್ತದೆ

ಭೂಮಿಯಿಂದ ನಾವು ಚಂದ್ರನ ಉದಯ ಹಾಗೂ ಚಂದ್ರಾಸ್ತವನ್ನು ನೋಡಿದ್ದೇವೆ. ಅತೀ ಎತ್ತರ ಪ್ರದೇಶದಲ್ಲಿ ನಿಂತು, ಸಮುದ್ರದ ತೀರದಲ್ಲಿ ನಿಂತು ನೋಡಿದ್ದೇವೆ. ಆದರೆ ಬಾಹ್ಯಾಕಾಶದಲ್ಲಿ ಚಂದ್ರನ ಉದಯ ಹಾಗೂ ಚಂದ್ರಾಸ್ತ ಹೇಗೆ ಕಾಣುತ್ತದೆ. ಭೂಮಿಗಿಂತ ಅತ್ಯಂತ ಭಿನ್ನವಾಗಿ ಕಾಣುವ ಈ ಚಂದ್ರೋದಯ ಹಾಗೂ ಚಂದ್ರಾಸ್ತದ ಅದ್ಭುತ ದೃಶ್ಯವನ್ನು ಭಾರತೀಯ ಮೂಲಕ ನಾನಸಾ ಗಗನಯಾತ್ರಿ ಅನಿಲ್ ಮೆನನ್ ಹಂಚಿಕೊಂಡಿದ್ದಾರೆ. ವಿಶೆಷ ಅಂದರೆ ರಿಯಲ್ ಟೈಮ್ ವಿಡಿಯೋ ಇದಾಗಿದ್ದು, ಆಗಸದ ಕೌತುಕ ಹೆಚ್ಚಿಸಿದೆ.

ಬದಲಾಗುತ್ತೆ ಚಂದ್ರನ ಆಕಾರ

ಅನಿಲ್ ಮೆನನ್ ಈ ವಿಡಿಯೋಗಳನ್ನು ತಮ್ಮ ಅಧಿಕೃತ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆ ಹಿಡಿದ ಈ ವಿಡಿಯೋ ಹಲವ ಕುತೂಹಲ ಹೆಚ್ಚಿಸಲಿದೆ. ಎರಡು ವಿಡಿಯೋಗಳನ್ನು ನೀಡಿದ್ದಾರೆ. ಈ ಪೈಕಿ ಒಂದು ವಿಡಿಯೋ ಚಂದ್ರ ಭೂಮಿಯ ದಿಗಂತದಲ್ಲಿ ನಿಧಾನವಾಗಿ ಗೋಚರಿಸುವುದು ಸ್ಪಷ್ಟವಾಗಿ ಸೆರೆ ಹಿಡಿದಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಚಂದ್ರ ದಿಗಂತದಾಚೆ ಮರೆಯಾಗುವ ದೃಶ್ಯವಿದೆ. ವಿಶೇಷ ಅಂದರೆ ಚಂದ್ರನ ಆಕಾರವೇ ಬದಲಾಗಿ ಗೋಚರಿಸುತ್ತದೆ. ಭೂಮಿಯ ವಾತಾವರಣದ ಪ್ರಭಾವದಿಂದ ಚಂದ್ರ ಚಪ್ಪಟೆಯಂತೆ ಗೋಚರಿಸುತ್ತದೆ.

ಎರಡು ವಿಡಿಯೋ ಪೋಸ್ಟ್

ವಿಡಿಯೋಗಳನ್ನು ಯಾವುದೇ ಎಡಿಟ್ ಮಾಡದೇ ಪೋಸ್ಟ ಮಾಡಿದ್ದಾರೆ. ಇಷ್ಟೇ ಅಲ್ಲ ಬರಿಗಣ್ಣಿನಿಂದ ನೋಡಿದರೂ ಇದೇ ರೀತಿ ಕಾಣುತ್ತದೆ. ಯಾವುದೇ ಲೆನ್ಸ್ ಅವಶ್ಯಕತೆ ಇಲ್ಲ ಎಂದು ಅನಿಲ್ ಮೆನನ್ ಸ್ಪಷ್ಟಪಡಿಸಿದ್ದಾರೆ. ಕ್ಯಾಮೆರಾದಲ್ಲಿ ಸೆರೆ ಹಿಡಿಯುವಾಗ ಕೊಂಚ ಝೂಮ್ ಮಾಡಿದರೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದಿದ್ದಾರೆ.

ಬಾಹ್ಯಾಕಾಶದಲ್ಲಿ ಚಂದ್ರನ ಉದಯ ಹಾಗೂ ಚಂದ್ರಾಸ್ತ ಭೂಮಿಗಿಂತ ಭಿನ್ನವಾಗಿದೆ. ಪ್ರಮುಖವಾಗಿ ಚಂದ್ರನ ಆಕಾರವೇ ಬದಲಾಗಿ ಕಾಣುತ್ತದೆ. ಜೊತೆಗೆ ಚಂದ್ರಾಸ್ತದ ವೇಳೆ ಚಂದ್ರನ ಮರೆಯಾಗುವ ಅದ್ಭುತ ದೃಶ್ಯ ನೋಡಲು ಸಾಧ್ಯವಿದೆ. ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕ್ಯುಪೋಲಾದಿಂದ ಚಂತದ್ರನ ವಿಡಿಯೋ, ಫೋಟೋ ತೆಗೆಯುವ ಅನುಭವ ಕುರಿತು ಅನಿಲ್ ಮೆನನ್ ಹೇಳಿಕೊಂಡಿದ್ದಾರೆ. ಈ ವಿಡಿಯೋಗೆ ಹಲವು ಭಾರಿ ಮೆಚ್ಚುಗೆ ಸೂಚಿಸಿದ್ದಾರೆ. ಬಾಹ್ಯಾಕಾಶ ನಿಲ್ದಾಣದಿಂದ ಭೂಮಿ ಹೇಗೆ ಕಾಣುತ್ತಿದೆ,ಸೂರ್ಯನ ಬೆಳಕು ಸೇರಿದಂತೆ ಹಲವು ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಆದರೆ ರಿಯಲ್ ಟೈಮ್ ವಿಡಿಯೋ ಮೂಲಕ ಚಂದ್ರೋದಯ ಹಾಗೂ ಚಂದ್ರಾಸ್ತ ಅದ್ಭುತ ದೃಶ್ಯಗಳು ನಮಗೆ ಲಭ್ಯವಾಗಿದೆ ಎಂದು ಹಲವರು ಕಮೆಂಟ್ಸ್ ಮಾಡಿದ್ದಾರೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿರುವ ಗನನಯಾತ್ರಿ ಅನಿಲ್ ಮೆನನ್. ಭಾರತೀಯ ಮೂಲದ ಅನಿಲ್ ಮೆನನ್, ಅಮೆರಿಕದಲ್ಲಿ ಹುಟ್ಟಿ ಬೆಳೆದವರು. ಅನಿಲ್ ಮೆನನ್ ತಂದೆ ಭಾರತೀಯರಾಗಿದ್ದರೆ, ತಾಯಿ ಉಕ್ರೇನಿಯನ್.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಕಾಂಪೌಂಡ್ ಗೋಡೆ ಅಗೆಯುವಾಗ 400 ವರ್ಷ ಹಳೇ ಪುರಾತನ ಆಕೃತ್ತಿಗಳು ಪತ್ತೆ, ಇತಿಹಾಸ ಅನಾವರಣ
7 ವರ್ಷಗಳ ಕಾಲ ಸಣ್ಣ ನಕ್ಷತ್ರವನ್ನು ನುಂಗಿದ ದೈತ್ಯ ತಾರೆ! ನಾಸಾ ವಿಜ್ಞಾನಿಗಳನ್ನೇ ಬೆರಗುಗೊಳಿಸಿದ ಅಪರೂಪದ ಘಟನೆಯಿದು!