salil parekh ಇಸ್ಫೋಸಿಸ್‌ ಮುಖ್ಯಸ್ಥರಾಗಿ ಮರುನೇಮಕಗೊಂಡ ಸಲೀಲ್ ಪರೇಖ್ ಯಾರು?

Published : May 23, 2022, 12:02 AM IST
salil parekh ಇಸ್ಫೋಸಿಸ್‌ ಮುಖ್ಯಸ್ಥರಾಗಿ ಮರುನೇಮಕಗೊಂಡ ಸಲೀಲ್ ಪರೇಖ್ ಯಾರು?

ಸಾರಾಂಶ

ಐಟಿ ಸೇವಾ ವಲಯಲ್ಲಿ ಸುಮಾರು 30 ವರ್ಷಗಳ ಅನುಭವ 2021ರಲ್ಲಿ 12 ತಿಂಗಳ ವೇತನ 49.68 ಕೋಟಿ ರೂಪಾಯಿ ಸಲೀಲ್ ಪರೇಖ್ 2ನೇ ಅವಧಿಗೆ ಮರುನೇಮಕ 

ಬೆಂಗಳೂರು(ಮೇ.22): ದೇಶದ 2ನೇ ಅತಿದೊಡ್ಡ ತಂತ್ರಜ್ಞಾನ ಕಂಪನಿ ಇಸ್ಫೋಸಿಸ್‌ ಲಿಮಿಟೆಡ್‌ ಸಲೀಲ್‌ ಪಾರೇಖ್‌ ಅವರನ್ನು ಮುಂದಿನ 5 ವರ್ಷದ ಅವಧಿಗೆ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗಿ ಮುಂದುವರಿಸಲಾಗಿದೆ.

ಸಲೀಲ್‌ ಪಾರೇಖ್‌ ಅವರು 2018ರ ಜನವರಿಯಿಂದ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಷೇರುದಾರರ ಅನುಮೋದನೆಯೊಂದಿಗೆ ಅವರನ್ನು 2ನೇ ಅವಧಿಗೆ ಮರುನೇಮಕ ಮಾಡಲಾಗಿದೆ.

ಮುಂದಿನ 5 ವರ್ಷ ಇನ್ಫೋಸಿಸ್ ಮುಖ್ಯಸ್ಥರಾಗಿ ಸಲೀಲ್ ಪರೇಖ್ ಮರುನೇಮಕ

‘ಸಲೀಲ್‌ ಪಾರೇಖ್‌ ಅವರು ನಿರ್ದೇಶಕ ಮಂಡಳಿಯ ಜೊತೆ ಯಾವುದೇ ಸಂಬಂಧ ಹೊಂದಿಲ್ಲ. ಕಾಲಕಾಲಕ್ಕೆ ಹೊರಡಿಸಿದ ಸುತ್ತೋಲೆಗಳು ಸೇರಿದಂತೆ, ಅನ್ವಯವಾಗುವ ಕಾನೂನುಗಳ ಅಡಿ ಸಿಇಒ ಮತ್ತು ಎಂಡಿ ಆಗಿ ನೇಮಕವಾಗುವ ಎಲ್ಲಾ ಮಾನದಂಡಗಳನ್ನು ಪೂರೈಸಿದ್ದಾರೆ’ ಎಂದು ಇಸ್ಫೋಸಿಸ್‌ ಹೇಳಿದೆ.

ಪಾರೇಖ್‌ ಅವರು ಐಟಿ ಸೇವಾ ವಲಯಲ್ಲಿ ಸುಮಾರು 30 ವರ್ಷಗಳ ಅನುಭವ ಹೊಂದಿದ್ದಾರೆ. ಉದ್ಯಮಗಳಿಗೆ ಡಿಜಿಟಲ್‌ ರೂಪಾಂತರ ನೀಡುವಲ್ಲಿ, ವ್ಯಾಪಾರದ ತಿರುವುಗಳನ್ನು ಕಾರ್ಯಗತಗೊಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಯಾರು ಈ ಸಲೀಲ್ ಪರೇಖ್
2018ರಲ್ಲಿ ಇನ್ಫೋಸಿಸ್‌ನ ಮದ್ಯಂತರ CEO ಆಗಿದ್ದ ಪ್ರವೀಣ್ ರಾವ್ ಸ್ಥಾನಕ್ಕೆ ಸಲೀಲ್ ಪರೇಖ್ ಆಯ್ಕೆಯಾದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಯಿಂದ ಎರೋನಾಟಿಕಲ್ ಎಂಜಿನಿಯರ್ ಪದವಿ ಪಡೆದಿರುವ ಪರೇಖ್ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಹಾಗೂ ಮೆಕಾನಿಕಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಇನ್ಫಿ ಸುಧಾಮೂರ್ತಿ ರಾಷ್ಟ್ರಪತಿಯಾಗಬೇಕೆಂದು ಹಂಪಿಯ ವಿರೂಪಾಕ್ಷನಿಗೆ ಪೂಜೆ

ಕೇಪ್‌ಜೆಮಿನಿ ಅಂತಾರಾಷ್ಟ್ರೀಯ ಐಟಿ ಕಂಪನಿಯಲ್ಲೂ ಪರೇಖ್ ಸೇವೆ ಸಲ್ಲಿಸಿದ್ದಾರೆ. 25 ವರ್ಷ ಫ್ರೆಂಚ್ ಬಹುರಾಷ್ಟ್ರೀಯ ಕಂಪನಿ ಕೇಪ್‌ಜೆಮಿನಿಯಲ್ಲಿ ಸೇವೆ ಸಲ್ಲಿಸಿದ್ದಾರೆ. 

ಸಲೀಲ್ ಪರೇಖ್ ವೇತನ
ಸಲೀಲ್ ಪರೇಖ್ ಇದೀಗ ಇಸ್ಫೋಸಿಸ್‌ ಮುಖ್ಯಸ್ಥರಾಗಿ ಮರುನೇಮಕಗೊಂಡಿದ್ದಾರೆ. ಇದೀಗ ಮತ್ತೆ ಪರೇಖ್ ವೇತನ ಹೆಚ್ಚಾಗಲಿದೆ. 2021ರಲ್ಲಿ ಸಲೀಲ್ ಪರೇಖ್ ವಾರ್ಷಿಕ ಸ್ಯಾಲರಿ ಬರೋಬ್ಬರಿ 49.68 ಕೋಟಿ ರೂಪಾಯಿ. 2020ರಲ್ಲಿ ಪರೇಖ್ 12 ತಿಂಗಳ ಸ್ಯಾಲರಿ 34.27 ಕೋಟಿ ರೂಪಾಯಿ ಆಗಿತ್ತು. 2021ರ ಸಾಲಿನಲ್ಲಿ ಶೇಕಡಾ 45 ರಷ್ಚು ವೇತನ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಪರೇಖ್ ವೇತನ ಹೆಚ್ಚಾಗಲಿದೆ. ಮೂಲಗಳ ಪ್ರಕಾರ ವಾರ್ಷಿಕ ಸ್ಯಾಲರಿ 65 ಕೋಟಿ ಮೀರಲಿದೆ ಎನ್ನುತ್ತಿದೆ ವರದಿಗಳು.

ಕಳೆದ 4 ವರ್ಷಗಳಿಂದ ಇಸ್ಫೋಸಿಸ್‌ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಪರೇಖ್ ಇದೀಗ ಮಾರ್ಚ್ 31, 2027ರ ವರೆಗೆ ಕಂಪನಿ ಸಿಇಒ ಆಗಿ ಸೇವೆ ಸಲ್ಲಿಸಲಿದ್ದಾರೆ.

ಪರೇಖ್ ಮೇಲಿನ ಆರೋಪ:
ಲಾಭ ಹೆಚ್ಚಿಸಿಕೊಳ್ಳಲು ಬೆಂಗಳೂರಿನ ಹೆಸರಾಂತ ಮಾಹಿತಿ ತಂತ್ರಜ್ಞಾನ ಕಂಪನಿ ‘ಇಸ್ಫೋಸಿಸ್‌’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸಲೀಲ್‌ ಪಾರೇಖ್‌ ಹಾಗೂ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಓ) ನೀಲಾಂಜನ್‌ ರಾಯ್‌ ಅವರು ‘ನೀತಿ ಬಾಹಿರ ವಿಧಾನ’ ಅನುಸರಿಸಿದ್ದಾರೆ’ ಎಂದು ಕಂಪನಿಯ ಮುಖಸ್ಥರಿಗೆ ಕೆಲ ಅನಾಮಧೇಯ ಉದ್ಯೋಗಿಗಳು ಪತ್ರ ಬರೆದಿದ್ದರು. ಈ ಪತ್ರದಲ್ಲಿ ಪರೇಖ್ ಜನಾಂಗಿಯ ನಿಂದನೆ ಮಾಡಿದ್ದಾರೆ ಅನ್ನೋ ಆರೋಪ ಮಾಡಲಾಗಿತ್ತು.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಐಫೋನ್‌-17 ಖರೀದಿಗೆ ಬಂಪರ್‌ ಡಿಸ್ಕೌಂಟ್‌.. ಬರೀ ಇಷ್ಟೇ ಹಣದಲ್ಲಿ ಸಿಗಲಿದೆ ಸ್ಮಾರ್ಟ್‌ಫೋನ್‌
Morphing Wing: ಹಾರಾಡುವಾಗಲೇ ಕ್ಷಣ ಮಾತ್ರದಲ್ಲಿ ಬದಲಾಗುತ್ತೆ ಫೈಟರ್‌ ಜೆಟ್‌ ಶೇಪ್‌, ಹೊಸ ಟೆಕ್ನಾಲಜಿ ಪರೀಕ್ಷಿಸಿದ ಡಿಆರ್‌ಡಿಓ