ವಾಟ್ಸಪ್‌ನಲ್ಲಿ ಪೋರ್ನ್ ಹಾವಳಿ! ಕಾದಿದೆ ಗ್ರಹಚಾರ!

By Web DeskFirst Published Dec 21, 2018, 12:18 PM IST
Highlights

ವದಂತಿಗಳು ಮತ್ತು ಸುಳ್ಳುಸುದ್ದಿಗಳೇ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಪ್‌ಗೆ ತಲೆನೋವಾಗಿತ್ತು. ಆದರೆ ಈ ನಡುವೆ ಪೋರ್ನ್ ಕಂಟೆಟ್, ವಿಶೇಷವಾಗಿ ಚೈಲ್ಡ್ ಪೋರ್ನ್ ಹಾವಳಿ ವಾಟ್ಸಪ್‌ಗೆ ಸಂಕಟ ತಂದಿದೆ. 
 

ಬಹುತೇಕ ಎಲ್ಲಾ ದೇಶಗಳಲ್ಲೂ, ಹಾಗೂ ಎಲ್ಲಾ ಸೋಶಿಯಲ್ ಮೀಡಿಯಾ ಮತ್ತು ಆ್ಯಪ್ ಸರ್ವಿಸಸ್‌ಗಳಲ್ಲಿ ‘ಚೈಲ್ಡ್ ಪೋರ್ನ್’ಗೆ ನಿಷೇಧವಿದೆ. ಚೈಲ್ಡ್ ಪೋರ್ನ್‌ಗೆ ಶೂನ್ಯ ಸಹಿಷ್ಣುತೆ ಹೊಂದಿದೆ. ಆದರೆ, ಫೇಸ್ಬುಕ್ ಒಡೆತನ ವಾಟ್ಸಪ್ ಇದೀಗ ಚೈಲ್ಡ್ ಪೋರ್ನ್ ಕಂಟೆಟ್‌ಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂಬ ಆರೊಪ ಕೇಳಿಬಂದಿದೆ.

ವಾಟ್ಸಪ್‌ನ ಕಠಿಣ ನಿಯಮಗಳ ಹೊರತಾಗಿಯೂ ಚೈಲ್ಡ್‌ ಪೋರ್ನ್‌ಗೆ ಸಂಬಂಧಿಸಿದ ನಿಷಿದ್ಧ ಫೋಟೋ/ವಿಡಿಯೋಗಳಂತಹ ಕಂಟೆಂಟ್‌ಗಳನ್ನು ಹರಿಯಬಿಡಲಾಗುತ್ತಿದೆ, ಎಂದು ಆನ್‌ಲೈನ್ ಸುರಕ್ಷತೆ ಕ್ಷೇತ್ರದಲ್ಲಿ ಕೆಲಸ ಮಾಡುವ ಇಸ್ರೇಲ್‌ನ ನೆಟಿವೈ ರೆಶೆಟ್ ಮತ್ತು ಸ್ಕ್ರೀನ್ ಸೇವರ್ಜ್ ಕಂಪನಿಗಳು ಹೇಳಿದೆ.

ಇದನ್ನೂ ಓದಿ: OnePlusನ ಮೊದಲ 5G ಸ್ಮಾರ್ಟ್‌ಫೋನ್ ಫೋಟೋ ಲೀಕ್! ಹೀಗಿದೆ 'OnePlus 7'

ಕಂಪನಿಯು ಈ ಬಗ್ಗೆ ಬಹಳ ಜಾಗರೂಕವಾಗಿದ್ದು, ಆಧುನಿಕ ತಂತ್ರಜ್ಞಾನ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ, ನಿಷಿದ್ಧವಾದ ಕಂಟೆಟ್‌ಗಳನ್ನು ತೆಗೆದು ಹಾಕುತ್ತಿದೆ, ಮತ್ತು ಅದರಲ್ಲಿ ತೊಡಗಿರುವ ಗ್ರೂಪ್‌ಗಳನ್ನು ನಿಷೇಧಿಸುತ್ತಿದೆ, ಎಂದು ವಾಟ್ಸಪ್ ಸ್ಪಷ್ಟೀಕರಿಸಿದೆ. 

ಭಾರತದಲ್ಲಿಯೂ, ಚೈಲ್ಡ್‌ ಪೋರ್ನ್ ಚಿತ್ರಗಳನ್ನು ಪಸರಿಸುವವರ ಖಾತೆಗಳಿಗೆ ನಿಷೇಧ ಹೇರುವುದಾಗಿ ವಾಟ್ಸಪ್ ಇತ್ತೀಚೆಗೆ ಘೋಷಿಸಿತ್ತು. ಮಕ್ಕಳ ಅಶ್ಲೀಲ ಚಿತ್ರಗಳು ನೀಚತನದ್ದು. ಅದಕ್ಕೆ ವಾಟ್ಸಪ್ನಲ್ಲಿ ಜಾಗವಿಲ್ಲ. ಇಂತಹ ಪ್ರಕರಣಗಳನ್ನು ತನಿಖೆ ನಡೆಸಲು ಕಾನೂನುಬದ್ಧವಾಗಿ ತನಿಖಾ ಸಂಸ್ಥೆಗಳಿಂದ ಕೋರಿಕೆ ಬಂದರೆ ಅದನ್ನು ಪರಿಗಣಿಸುತ್ತೇವೆ ಎಂದು ಕೂಡಾ ಕಂಪನಿ ತಿಳಿಸಿತ್ತು.

ಇದನ್ನೂ ಓದಿ: ವಾಟ್ಸಪ್ ಹೊಸ ಫೀಚರ್; ಇನ್ಮುಂದೆ ಎಲ್ಲವೂ ಇಲ್ಲೇ, ಹೋಗಬೇಕಿಲ್ಲ ಬೇರೆಲ್ಲೂ!

ಒಬ್ಬ ವ್ಯಕ್ತಿ ಮತ್ತೊಬ್ಬರಿಗೆ ಯಾವ ಸಂದೇಶ ಕಳುಹಿಸುತ್ತಾನೆ ಎಂಬುದನ್ನು ನೋಡಲು ಆಗಲ್ಲ. ಬಳಕೆದಾರರು ನಿರ್ದಿಷ್ಟ ಖಾತೆ ನಿಷೇಧಿಸುವಂತೆ ಕೋರಿಕೆ ಇಟ್ಟರೆ ಆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಾಟ್ಸಪ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವರದಿಯೊಂದರ ಪ್ರಕಾರ ವಾಟ್ಸಪ್ ಇತ್ತೀಚೆಗಿನ ದಿನಗಳಲ್ಲಿ, ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುವ ಸುಮಾರು 130000 ಖಾತೆಗಳನ್ನು ನಿಷೇಧಿಸಿದೆ.

ಅತ್ಯಾಚಾರ, ಮಕ್ಕಳ ಅಶ್ಲೀಲ ವಿಡಿಯೋ ಹಾಗೂ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಕೇಂದ್ರ ಸರ್ಕಾರ ಹಾಗೂ ಗೂಗಲ್‌, ಮೈಕ್ರೋಸಾಫ್ಟ್‌, ಫೇಸ್‌ಬುಕ್‌ನಂತಹ ಇಂಟರ್ನೆಟ್‌ ಕಂಪನಿಗಳು ಒಮ್ಮತ ವ್ಯಕ್ತಪಡಿಸಿವೆ ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್‌ ಹೇಳಿತ್ತು. 

click me!