ಹೊಸ ಫೀಚರ್ ಪರಿಚಯಿಸಿದ ವ್ಯಾಟ್ಸಪ್ : ಇನ್ನಷ್ಟು ಮಾಹಿತಿ ಲಭ್ಯ

By Suvarna Web DeskFirst Published Mar 4, 2017, 11:32 AM IST
Highlights

ವ್ಯಾಟ್ಸಪ್'ನ 2.17.86 ವರ್ಶನ್'ನಲ್ಲಿ ನೂತನ ಟ್ಯಾಬ್ ಲಭ್ಯವಿದ್ದು,

ವ್ಯಾಟ್ಸಪ್ ನೂತನ ಫೀಚರ್'ಅನ್ನು ಪರಿಚಯಿಸಿದೆ.ಕೆಲ ದಿನಗಳ ಹಿಂದಷ್ಟೆ ತಾತ್ಕಾಲಿಕ ವಿಡಿಯೊ ಸ್ಟೇಟಸ್ ಫೀಚರ್'ಅನ್ನು ಪರಿಚಯಿಸಿತ್ತು. ಈಗ 'ಸೈಜ್' ಎಂಬ ಟ್ಯಾಬ್ ಆರಂಭಿಸಿದೆ.

ವ್ಯಾಟ್ಸಪ್'ನ 2.17.86 ವರ್ಶನ್'ನಲ್ಲಿ ನೂತನ ಟ್ಯಾಬ್ ಲಭ್ಯವಿದ್ದು, ಈ ಫೀಚರ್'ನಿಂದ ಚಾಟ್ ಬಗ್ಗೆ ಮಾಹಿತಿ ಸಿಗಲಿದೆ. ಅಲ್ಲದೆ ಯಾವ ಚಾಟ್, ವಿಡಿಯೋ, ಜಿಎಫ್'ಎಕ್ಸ್ ಬಗ್ಗೆ ಮಾಹಿತಿ ನೀಡಲಿದೆ. ಈ ಸೌಲಭ್ಯ ವಿಂಡೋಸ್ 10 ಹಾಗೂ ವಿಂಡೋಸ್ ಫೋನ್ 8.1 ವರ್ಶನ್'ನಲ್ಲೂ ಅಪ್'ಡೇಟ್ ಮೂಲಕ ಪಡೆದುಕೊಳ್ಳಬಹುದು. ನೀವು ಕಳುಹಿಸಿದ ಪ್ರತಿ ಸಂದೇಶದ ಮೇಲೆ ಕ್ಲಿಕ್ ಮಾಡಿದರೆ ಅದರಲ್ಲಿ ಎಷ್ಟು ಪದಗಳಿವೆ, ಫೋಟೊಗಳೆಷ್ಟು ಎಷ್ಟು ಜನರಿಗೆ ಶೇರ್'ಆಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ.

ವಿಡಿಯೋ'ಗಳ ಬಗ್ಗೆ ಕೂಡ ಮಾಹಿತಿ ಸಿಗಲಿದ್ದು, ಅದು ಕೂಡ ಎಷ್ಟು ಜನಕ್ಕೆ ಶೇರ್ ಆಗಿದೆ ಎಂಬುದರ ವಿವರ ದೊರೆಯುತ್ತದೆ. ಈ ಫೀಚರ್'ನಿಂದ  ಹೆಚ್ಚು ಜಾಗವನ್ನು ಆಕ್ರಮಿಸಿದ ಚಾಟ್'ಗಳನ್ನು ಡೆಲಿಟ್ ಮಾಡಿ ಫೋನ್ ಸ್ಥಳವನ್ನು ಸುಲಭ ಮಾಡಿಕೊಳ್ಳಬಹುದು.    

click me!