ಟ್ರಾಫಿಕ್ ಎಷ್ಟಿದೆ ಎಂಬುದನ್ನು ಗೂಗಲ್ ಮ್ಯಾಪ್ಸ್ ಅಷ್ಟು ನಿಖರವಾಗಿ ಹೇಗೆ ತಿಳಿಸುತ್ತದೆ? ಇಲ್ಲಿದೆ ಸೀಕ್ರೆಟ್

By Suvarna Web DeskFirst Published Mar 3, 2017, 1:46 PM IST
Highlights

ಯಾವ್ಯಾವ ರಸ್ತೆಯಲ್ಲಿ ಎಷ್ಟೆಷ್ಟು ಟ್ರಾಫಿಕ್ ಇದೆ ಎಂಬುದು ಸೇರಿದಂತೆ ಸಾಕಷ್ಟು ಮಾಹಿತಿ ಗೂಗಲ್ ಮ್ಯಾಪ್ಸ್'ನಲ್ಲಿ ಸಿಕ್ಕುತ್ತದೆ. ಗೂಗಲ್'ನ ಸೆಟಿಲೈಟ್ ಮೂಲಕ ಇವೆಲ್ಲಾ ಸಿಗುತ್ತದೆ ಎಂದಂದುಕೊಂಡಿದ್ದರೆ ಅದು ಅರ್ಧಸತ್ಯ ಮಾತ್ರ.

ಬೆಂಗಳೂರು(ಮಾ. 03): ಯಾವುದೇ ಪ್ರದೇಶವನ್ನು ಹುಡುಕಬೇಕೆಂದರೆ ನಮಗೆ ಥಟ್ಟನೆ ನೆನಪಿಗೆ ಬರುವುದು ಗೂಗರ್ ಮ್ಯಾಪ್ಸ್. ಅಪರಿಚಿತ ಸ್ಥಳದಲ್ಲಿ ಪ್ರಯಾಣ ಮಾಡುವಾಗ ಗೂಗಲ್ ಮ್ಯಾಪ್ಸ್ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಇದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ದಾರಿ ಯಾವ್ಯಾವು ಎಂಬುದನ್ನು ರಿಯಲ್-ಟೈಮ್'ನಲ್ಲಿ ನೋಡಬಹುದು. ಯಾವ್ಯಾವ ರಸ್ತೆಯಲ್ಲಿ ಎಷ್ಟೆಷ್ಟು ಟ್ರಾಫಿಕ್ ಇದೆ ಎಂಬುದು ಸೇರಿದಂತೆ ಸಾಕಷ್ಟು ಮಾಹಿತಿ ಗೂಗಲ್ ಮ್ಯಾಪ್ಸ್'ನಲ್ಲಿ ಸಿಕ್ಕುತ್ತದೆ. ಗೂಗಲ್'ನ ಸೆಟಿಲೈಟ್ ಮೂಲಕ ಇವೆಲ್ಲಾ ಸಿಗುತ್ತದೆ ಎಂದಂದುಕೊಂಡಿದ್ದರೆ ಅದು ಅರ್ಧಸತ್ಯ ಮಾತ್ರ. ಗೂಗಲ್ ಮ್ಯಾಪ್ಸ್ ವಿವಿಧ ಮೂಲಗಳ ನೆರವು ಪಡೆದು ಆ ಮಾಹಿತಿ ಸಂಗ್ರಹಿಸಿ ತಮ್ಮ ಯೂಸರ್ಸ್'ಗೆ ನೀಡುತ್ತದೆ.

ಆದರೆ, ಎಲ್ಲರಿಗೂ ಅಚ್ಚರಿ ಮೂಡಿಸುವುದು ನಗರದ ಸಂಚಾರ ದಟ್ಟಣೆಯ ಮಾಹಿತಿಯನ್ನು ಗೂಗಲ್ ಮ್ಯಾಪ್ಸ್ ರಿಯಲ್-ಟೈಮ್'ನಲ್ಲಿ ಹೇಗೆ ಕೊಡುತ್ತದೆ ಎಂಬುದು. ಸರಕಾರದ ಸಾರಿಗೆ ಇಲಾಖೆ ಹಾಗೂ ಖಾಸಗಿ ಡೇಟಾ ಪ್ರೊವೈಡರ್'ಗಳೊಂದಿಗೆ ಗೂಗಲ್ ಹೊಂದಾಣಿಕೆ ಮಾಡಿಕೊಂಡು, ಅವುಗಳಿಂದ ಒಂದಷ್ಟು ಮಾಹಿತಿ ಪಡೆಯುತ್ತದೆ. ಆದರೆ, ಟ್ರಾಫಿಕ್ ದಟ್ಟಣೆಯಂಥ ಸಂಕೀರ್ಣ ಮಾಹಿತಿಯನ್ನು ಪಡೆಯಲು ಗೂಗಲ್ ಅವಲಂಬಿಸಿರುವುದು ಸ್ಮಾರ್ಟ್'ಫೋನ್ ಬಳಕೆದಾರರನ್ನೇ. ಗೂಗಲ್ ಮ್ಯಾಪ್ಸ್ ಆ್ಯಪನ್ನು ಹೆಚ್ಚೆಚ್ಚು ಜನರು ಬಳಸಿದಂತೆಲ್ಲಾ ರಿಯಲ್'ಟೈಮ್ ಟ್ರಾಫಿಕ್ ಮಾಹಿತಿ ಬಹಳ ನಿಖರವಾಗಿ ಸಿಗುತ್ತದೆ. ನಾವು ಗೂಗಲ್ ಮ್ಯಾಪ್ಸ್ ಆನ್ ಮಾಡಿಕೊಂಡು ಟ್ರಾಫಿಕ್'ನಲ್ಲಿ ಪ್ರಯಾಣಿಸಿದಾಗ, ಅಲ್ಲಿ ನಮ್ಮ ವಾಹನ ನಿಲ್ಲುವ ಹೊತ್ತು, ಸಾಗುವ ವೇಗ ಇತ್ಯಾದಿ ಮಾಹಿತಿ ಆಟೋಮ್ಯಾಟಿಕ್ಕಾಗಿ ಗೂಗಲ್'ಗೆ ರವಾನೆಯಾಗುತ್ತದೆ. ಅಂಥ ರಸ್ತೆಯಲ್ಲಿ ಇಷ್ಟು ದಟ್ಟಣೆಯಿದೆ, ಇಂಥ ಕಡೆ ಯಾವುದೇ ಟ್ರಾಫಿಕ್ ಇಲ್ಲ ಎಂದು ಗೂಗಲ್ ಮ್ಯಾಪ್ಸ್ ಅಂದಾಜಿಸುತ್ತದೆ. ಹೆಚ್ಚೆಚ್ಚು ಜನರು ಗೂಗಲ್ ಮ್ಯಾಪ್ಸ್ ಬಳಸಿದರೆ ಇನ್ನಷ್ಟು ವಿಸ್ತೃತ ಹಾಗೂ ನಿಖರ ಮಾಹಿತಿಯನ್ನು ಪಡೆಯಲು ಸಾಧ್ಯ.

click me!