ವಾಟ್ಸಾಪ್ ಹೊರತರಲಿರುವ ಹೊಸ ಫೀಚರ್'ನಿಂದ ಸ್ಕೈಪ್'ಗೆ ಟೆನ್ಷನ್?

Published : Oct 23, 2017, 06:42 PM ISTUpdated : Apr 11, 2018, 01:13 PM IST
ವಾಟ್ಸಾಪ್ ಹೊರತರಲಿರುವ ಹೊಸ ಫೀಚರ್'ನಿಂದ ಸ್ಕೈಪ್'ಗೆ ಟೆನ್ಷನ್?

ಸಾರಾಂಶ

* ವಾಟ್ಸಾಪ್'ನಿಂದ ಶೀಘ್ರದಲ್ಲೇ ಗ್ರೂಪ್ ವಿಡಿಯೋ ಚಾಟ್ ಫೀಚರ್ * ಗ್ರೂಪ್ ಚಾಟ್'ಗೆ ಖ್ಯಾತವಾಗಿರುವ ಸ್ಕೈಪ್ ಆ್ಯಪ್'ಗೆ ವಾಟ್ಸಾಪ್ ಸೆಡ್ಡು? * ಇನ್ನೊಂದು ವರ್ಷದೊಳಗೆ ವಾಟ್ಸಾಪ್'ನಲ್ಲಿ ಗ್ರೂಪ್ ವಿಡಿಯೋ ಕಾಲ್

ಬೆಂಗಳೂರು(ಅ. 23): ಕಾಲಕಾಲಕ್ಕೆ ಬದಲಾಗಲು ಆಗಾಗ್ಗೆ ಹೊಸ ಫೀಚರ್'ಗಳನ್ನು ಸೇರಿಸಿಕೊಳ್ಳುತ್ತಾ ಬಂದಿರುವ ವಾಟ್ಸಾಪ್ ಸದ್ಯದಲ್ಲೇ ಇನ್ನೊಂದು ಫೀಚರ್ ಹೊರತರುತ್ತಿದೆ. ಕೆಲ ದಿನಗಳ ಹಿಂದಷ್ಟೇ ಫೇಸ್ಬುಕ್ ಸಂಸ್ಥೆಯು ಮೆಸೆಂಜರ್'ನಲ್ಲಿ ಗ್ರೂಪ್ ಕಾಲ್ ಮಾಡುವ ಫೀಚರ್ ಸೇರಿಸಿದಂತೆ ಈಗ ವಾಟ್ಸಾಪ್ ಕೂಡ ಗ್ರೂಪ್ ಕಾಲ್'ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಇದಾದರೆ, ಇನ್ಮುಂದೆ ವಾಟ್ಸಾಪ್ ಗ್ರೂಪ್'ಗಳಲ್ಲಿ ಎಲ್ಲರೂ ಕೂಡ ವಿಡಿಯೋ ಚಾಟ್ ಮಾಡಬಹುದಾಗಿದೆ. ಆದರೆ, ವಾಟ್ಸಾಪ್ ಸಂಸ್ಥೆಯಿಂದ ಈ ಬಗ್ಗೆ ಅಧಿಕೃತ ಪ್ರಕಟಣೆ ಬಂದಿಲ್ಲ. ಯಾವಾಗಿನಿಂದ ಈ ಹೊಸ ಫೀಚರ್ ಲೋಕಾರ್ಪಣೆಯಾಗುತ್ತದೆ ಎಂಬ ಸುಳಿವೂ ಸಿಕ್ಕಿಲ್ಲ.

ಸದ್ಯಕ್ಕೆ ಗ್ರೂಪ್ ಚಾಟ್'ಗೆ ಸ್ಕೈಪ್ ಬಹಳ ಜನಪ್ರಿಯ ಆ್ಯಪ್ ಆಗಿದೆ. ಸ್ನೇಹಿತರ ಆನ್'ಲೈನ್ ಗೆಟ್'ಟುಗೆದರ್, ಬ್ಯುಸಿನೆಸ್ ಮೀಟಿಂಗ್ ಮೊದಲಾದವಕ್ಕೆ ಗ್ರೂಪ್ ಚಾಟ್ ಬಹಳ ಉಪಯುಕ್ತ. ಫೇಸ್ಬುಕ್ ಮೆಸೆಂಜರ್ ಈಗಾಗಲೇ ಈ ಫೀಚರ್'ನ್ನು ಅಳವಡಿಸಿಕೊಂಡಿದೆ. ಈಗ ಮುಂದಿನ ಸರದಿ ವಾಟ್ಸಾಪ್'ನದ್ದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Animal Facts: ಪ್ರಾಣಿಗಳ ಕುರಿತು ಈ ರಹಸ್ಯ ಮಾಹಿತಿ ಕೇಳಿದ್ರೆ ಶಾಕ್ ಆಗೋದು ಖಚಿತಾ!
ಬಾಹ್ಯಾಕಾಶದಲ್ಲೂ ಆರೋಗ್ಯ ತುರ್ತುಪರಿಸ್ಥಿತಿ : ತುರ್ತು ಕಾರ್ಯಾಚರಣೆ