
ನವದೆಹಲಿ(ಅ.23): ಕಡಿಮೆ ಬೆಲೆಯಲ್ಲಿ ಹಲವು ಸೌಲಭ್ಯಗಳನ್ನು ಒಳಗೊಂಡ ಅದ್ದೂರಿಯಾಗಿ ಉದ್ಘಾಟನೆಗೊಂಡ ಜಿಯೋಫೋನ್'ಗೆ ಆರಂಭದಲ್ಲೇ ವಿಘ್ನ ಉಂಟಾಗಿದೆ.
ಕಂಪನಿಯೂ ದೀಪಾವಳಿ ಹಬ್ಬಕ್ಕಾಗಿ ಪೂರ್ವ ಮುಂಗಡ ಮಾಡಿಕೊಂಡವರಿಗಾಗಿ ವಿತರಣೆ ಆರಂಭಿಸಿದೆ. ಕಾಶ್ಮೀರದಲ್ಲಿ ಜಿಯೋ ಫೋನ್ ಖರೀದಿಸಿದ ಗ್ರಾಹಕನೊಬ್ಬ ಚಾರ್ಜಿಂಗ್ ಮಾಡುತ್ತಿರುವ ವೇಳೆ ಸ್ಫೋಟವುಂಟಾಗಿದೆ. ಸ್ಫೋಟದಿಂದಾಗಿ ಮೊಬೈಲ್ ಪೂರ್ಣ ಸುಟ್ಟು ಹೋಗಿದೆ.
ಆದರೆ ಜಿಯೋ ಸಂಸ್ಥೆಯ ಪ್ರಕಾರ ಚಾರ್ಜಿಂಗ್ ಮಾಡುವ ವೇಳೆ ಆಗಿರುವುದಿಲ್ಲ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ. ಮೊಬೈಲ್ ಬ್ಯಾಟರಿಯ ಶಾಖದ ಮೂಲವು ಬೇರೆ ಯಾವುದೋ ಅಥವಾ ಬಾಹ್ಯವಾಗಿ ಪ್ರಚೋದಿತವಾಗಿರುವ ಸಾಧ್ಯತೆಯಿದೆ' ಎಂದು ತಿಳಿಸಿದೆ.
ಜಿಯೋ ಫೋನನ್ನು ಉನ್ನತ ಮಟ್ಟದ ತಾಂತ್ರಿಕತೆಯಿಂದ ವಿನ್ಯಾಸ ಪಡಿಸಿ ತಯಾರಿಸಲಾಗಿದೆ. ಗ್ರಾಹಕರಿಗೆ ವಿತರಿಸಲಾಗಿರುವ ಪ್ರತಿಯೊಂದು ಫೋನನ್ನು ಪರಿಷ್ಕರಿಸಿ ನೀಡಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಮೊಬೈಲ್ ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿರುವ ಸಾಧ್ಯತೆಯಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.