100 ಸಿಸಿಗೆ 2 ಸೀಟುಗಳಿದ್ದರೆ ವಾಹನ ನೋಂದಣಿ ಮಾಡಲ್ಲ: ಸಾರಿಗೆ ಇಲಾಖೆಯಿಂದ ಆದೇಶ

By Suvarna Web DeskFirst Published Oct 23, 2017, 5:42 PM IST
Highlights

ಇನ್ನು ಮುಂದೆ ನೂತನ 100 ಸಿಸಿ ಹಾಗೂ ಅದಕ್ಕಿಂತ ಕಡಿಮೆಯಿರುವ ಸ್ಕೂಟಿ, ಮೊಪೆಡ್ ರೀತಿಯ ವಾಹನಗಳಿಗೆ 2 ಸೀಟುಗಳನ್ನು ಅಳವಡಿಸಿದರೆ ನೋಂದಣಿಯನ್ನು ಮಾಡಲಾಗುವುದಿಲ್ಲ.

ಬೆಂಗಳೂರು(ಅ.23): ಇನ್ನು ಮುಂದೆ 100 ಸಿಸಿ ಬೈಕ್'ಗಳಲ್ಲಿ ಇಬ್ಬರೂ ಕೂರುವಂತಿಲ್ಲ. ಹಿಂಬದಿ ಸೀಟು ಅಳವಡಿಸಿದರೆ ವಾಹನ ನೋಂದಣಿ ಮಾಡುವುದಿಲ್ಲ ಎಂದು ಸಾರಿಗೆ ಇಲಾಖೆ ಆದೇಶ ಪ್ರಕಟಿಸಿದೆ.

ವಾಹನದ ಹಿಂಬದಿ ಸೀಟಿನಲ್ಲಿ ಕೂರುವವರೆ ಹೆಚ್ಚು ಅಪಘಾತಕ್ಕೀಡಾಗುತ್ತಿದ್ದಾರೆ ಎಂದು ಸಂಚಾರಿ ಪೊಲೀಸರು ಸರ್ಕಾರಕ್ಕೆ ವರದಿ ನೀಡಿದ್ದರು. ಕೆಲವು ದಿನಗಳ ಹಿಂದೆ ಮೂವರು ಸಾವನ್ನಪ್ಪಿದ್ದರು. 100 ಸಿಸಿ ಅಥವಾ ಅದಕ್ಕಿಂತ ಕಡಿಮೆಯಿರುವ  ವಾಹನಗಳಲ್ಲೇ ಹೆಚ್ಚು ಅಪಘಾತವಾಗುತ್ತಿರುವುದರಿಂದ ಸರ್ಕಾರ ಕರ್ನಾಟಕ ಮೋಟಾರು ಕಾಯ್ದೆಯಡಿ ಹೊಸ ನಿಯಮ ಜಾರಿಗೊಳಿಸಿ ನೂತನ ಆದೇಶ ಹೊರಡಿಸಿದೆ.

ಇನ್ನು ಮುಂದೆ ನೂತನ 100 ಸಿಸಿ ಹಾಗೂ ಅದಕ್ಕಿಂತ ಕಡಿಮೆಯಿರುವ ಸ್ಕೂಟಿ, ಮೊಪೆಡ್ ರೀತಿಯ ವಾಹನಗಳಿಗೆ 2 ಸೀಟುಗಳನ್ನು ಅಳವಡಿಸಿದರೆ ನೋಂದಣಿಯನ್ನು ಮಾಡಲಾಗುವುದಿಲ್ಲ.  ಹೊಸ ಕಾನೂನು ಹಳೆಯ ವಾಹನಗಳಿಗೆ ಅನ್ವಯವಾಗುವುದಿಲ್ಲ. ಹೊಸದಾಗಿ ಖರೀದಿಸುವವರಿಗೆ ಮಾತ್ರ ಅನ್ವಯವಾಗುತ್ತದೆ.  ಈ ಹಿಂದೆ 2015ರಲ್ಲಿ ಹಿಂಬದಿ ಸೀಟುಗಳಿದ್ದರೆ ವಾಹನ ನೋಂದಣಿ ಮಾಡದಂತೆ  ಆರ್'ಟಿಒಗೆ  ಹೈಕೋರ್ಟ್'ಗೆ ಸೂಚನೆ ನೀಡಿತ್ತು. ಒಂದು ವೇಳೆ ಹಳೆಯ 100 ಅಥವಾ ಅದಕ್ಕಿಂತ ಕಡಿಮೆಯಿರುವ ವಾಹನಗಳಲ್ಲಿ ಹಿಂಬದಿ ಸೀಟುಗಳಿದ್ದರೆ ಕುಳಿತುಕೊಳ್ಳುವಂತಿಲ್ಲ.

click me!