ತಕ್ಷಣ ನಿಮ್ಮ Whatsapp ಅಪ್ಡೇಟ್ ಮಾಡಿ, ಇಲ್ಲವೇ ಡೇಟಾ ಕಳವಾಗೋದು ಗ್ಯಾರಂಟಿ

By Web Desk  |  First Published May 14, 2019, 3:22 PM IST

Whatsapp  ಗ್ರಾಹಕರಿಗೆ ಹ್ಯಾಕರ್ಗಳಿಂದ  ಶಾಕಿಂಗ್ ನ್ಯೂಸ್| ಈ ಸುದ್ದಿಯನ್ನು ನಗಣ್ಯ ಮಾಡಿದ್ರೆ ನಿಮ್ಮ ಗೌಪ್ಯ  ದಾಖಲೆ ಕಳುವು| ಇಸ್ರೇಲ್ ಮೂಲದ ಎನ್ಎಸ್ಒ ಕಂಪೆನಿಯಿಂದ ಮಾಹಿತಿ ಕದಿಯುವ ವೈರಸ್ 


Whatsapp ಗ್ರಾಹಕರೇ ಎಚ್ಚರ. ಈ ಕೂಡಲೇ ನಿಮ್ಮ ಅಕೌಂಟ್ ಅಪ್ಡೇಟ್ ಮಾಡಿಕೊಳ್ಳಿ. ಇದನ್ನು ನಗಣ್ಯ ಮಾಡಿದ್ರೆ ನಿಮ್ಮ ಗೌಪ್ಯ  ದಾಖಲೆ ಹ್ಯಾಕರ್ ಗಳ ಕೈ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ Whatsapp ತನ್ನ 150 ಮಿಲಿಯನ್ ಬಳಕೆದಾರರ ಖಾತೆ ಹಾಗೂ ಮಾಹಿತಿಯನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಖಾತೆ ಅಪ್ಡೇಟ್ ಮಾಡುವಂತೆ ಮನವಿ ಮಾಡಿದೆ.

ಆ್ಯಪ್ ನಲ್ಲಿರುವ ದೋಷದ ಬಗ್ಗೆ ಕಳೆದ ತಿಂಗಳಲ್ಲೇ Whatsapp ಕಂಪೆನಿಯ ಗಮನಕ್ಕೆ ಬಂದಿತ್ತು. ಕೂಡಲೇ ಎಚ್ಚೆತ್ತ ಕಂಪೆನಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ ಹಾಗೂ ಅಪ್ಡೇಟ್ ವರ್ಶನ್ ಬಿಡುಗಡೆಗೊಳಿಸಿದೆ. 

Latest Videos

 ಇಸ್ರೇಲ್ ಮೂಲದ ಎನ್ಎಸ್ಒ ಕಂಪೆನಿಯು Whatsapp ಮಾಹಿತಿ ಕದಿಯುವ ಸ್ಪೇವೇರ್ ಅಭಿವೃದ್ಧಿಪಡಿಸಿದೆ. ಇದರಲ್ಲಿ Whatsapp ಆಡಿಯೋ ಕಾಲ್ ಮೂಲಕ ಬಗ್ ನಿಮ್ಮ ಫೋನ್ ಸೇರಿಕೊಳ್ಳುತ್ತದೆ. ಇದು ನಿಮ್ಮ ಮೊಬೈಲ್ ಫೋನ್ ನಲ್ಲಿ ಸ್ಪೈವೇರ್ ಇನ್ಸ್ಟಾಲ್ ಮಾಡುತ್ತದೆ ಹಾಗೂ ನಿಮ್ಮ ಗೌಪ್ಯತೆ ಹಾಗೂ ವೈಯಕ್ತಿಕ ದಾಖಲೆಗಳನ್ನು ಕದಿಯುತ್ತದೆ

click me!