*ತಿಂಗಳಿಗೆ ಸರಾಸರಿ 2 ಮಿಲಿಯನ್ ಖಾತೆಗಳ ನಿಷೇಧ
*ಎನ್‌ಕ್ರಿಪ್ಟ್ ಮಾಡದ ಮಾಹಿತಿಯನ್ನು ಅವಲಂಬಿಸಿ ಕ್ರಮ
*ಅಕ್ಟೋಬರ್‌ನಲ್ಲಿ 500 ಕುಂದುಕೊರತೆಯ ವರದಿಗಳು
ನವದೆಹಲಿ(ಡಿ. 02): ಫೇಸ್‌ಬುಕ್-ಮೆಟಾ (Facebook- Meta) ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ (WhatsApp) ಮೇ ಮಧ್ಯದಿಂದ ತಿಂಗಳಿಗೆ ಸರಾಸರಿ 2 ಮಿಲಿಯನ್ ಖಾತೆಗಳನ್ನು ನಿಷೇಧಿಸುತ್ತಾ ಬಂದಿದೆ. ಅಕ್ಟೋಬರ್ 2021 ರಲ್ಲಿ WhatsApp ಭಾರತದಲ್ಲಿ 2 ಮಿಲಿಯನ್ ಖಾತೆಗಳನ್ನು ನಿಷೇಧಿಸಿದೆ. ಸೆಪ್ಟೆಂಬರ್‌ನಲ್ಲಿ 2.2 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ ಖಾತೆಗಳನ್ನು ನಿಷೇಧಿಸಿತ್ತು. ವಾಟ್ಸಪ್ ಪ್ಲಾಟ್‌ಫಾರ್ಮ್‌ನಲ್ಲಿನ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ (End to End Encryption) ಆಗಿವೆ. ಆದರೆ ಇದು ಬಳಕೆದಾರರ ವರದಿಗಳು, ಪ್ರೊಫೈಲ್ ಫೋಟೋಗಳು, ಗುಂಪು ಫೋಟೋಗಳು ಸೇರಿದಂತೆ ಲಭ್ಯವಿರುವ ಎನ್‌ಕ್ರಿಪ್ಟ್ ಮಾಡದ ಮಾಹಿತಿಯನ್ನು ಅವಲಂಬಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿ ತಿಳಿಸಿದೆ. ಜತೆಗೆ ಅದರ ಪ್ಲಾಟ್‌ಫಾರ್ಮ್‌ನಲ್ಲಿ ದುರ್ಬಳಕೆಯನ್ನು ಪತ್ತೆಹಚ್ಚಲು ಮತ್ತು ತಡೆಯಲು ವಿವಿಧ ರಿಪೋರ್ಟ್ ಮತ್ತು ಸುಧಾರಿತ AI ಪರಿಕರಗಳು (AI tools) ಮತ್ತು ಸಂಪನ್ಮೂಲಗಳು ಬಳಸಿದೆ ಎಂದು ಅದು ಹೇಳಿದೆ.
ಜುಲೈನಿಂದ ಪ್ರತಿ ತಿಂಗಳ compliance reports!
undefined
ಇತ್ತಿಚೀನ ವರದಿಯಲ್ಲಿ ಬಳಕೆದಾರರಿಂದ 500 ಕುಂದುಕೊರತೆಯ ವರದಿಗಳನ್ನು ಸ್ವೀಕರಿಸಿದೆ ಎಂದು ಕಂಪನಿ ತಿಳಿಸಿದೆ. ಕಳೆದ ತಿಂಗಳು ಈ ಸಂಖ್ಯೆ 560 ಆಗಿತ್ತು. WhatsApp ಫೋನ್ ಸಂಖ್ಯೆಯ ಮೊದಲ +91 ಕೋಡ್ ಮೂಲಕ ಭಾರತೀಯ ಖಾತೆಯನ್ನು ಗುರುತಿಸುತ್ತದೆ ಎಂದು ಹೇಳಿದೆ. IT (Intermediary Guidelines and Digital Media Ethics Code) ನಿಯಮಗಳು, 2021 ಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಜುಲೈನಿಂದ ಈ ಮಾಸಿಕ ವರದಿಗಳನ್ನು ಪ್ರಕಟಿಸುತ್ತಿದೆ. ನಿಯಮಗಳ ಪ್ರಕಾರ, ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ) ಪ್ರತಿ ತಿಂಗಳು ಅನುಸರಣೆ ವರದಿಗಳನ್ನು (compliance reports) ಪ್ರಕಟಿಸಬೇಕು.
Google best apps 2021: ಗೂಗಲ್ ಪ್ರಕಾರ 2021ರ ಬೆಸ್ಟ್ ಆಪ್ ಯಾವುದು ಗೊತ್ತಾ?
ಕಂಪನಿಗಳು ಸ್ವೀಕರಿಸಿದ ದೂರುಗಳ ವಿವರಗಳು ಮತ್ತು ಅದರ ಮೇಲೆ ತೆಗೆದುಕೊಂಡ ಕ್ರಮಗಳನ್ನು ನಮೂದಿಸಬೇಕು. ಸಂಶೋಧನಾ ಸಂಸ್ಥೆ ಸ್ಟ್ಯಾಟಿಸ್ಟಾ ಅಂದಾಜಿನ ಪ್ರಕಾರ WhatsApp ತನ್ನ ಅತಿದೊಡ್ಡ ಮಾರುಕಟ್ಟೆಯಾದ ಭಾರತದಲ್ಲಿ 487 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ವಾಟ್ಸಪ್‌ನ ಇತ್ತಿಚೀನ ವರದಿಯಲ್ಲಿ (ಇದುವರೆಗಿನ ಐದನೆಯ ವರದಿ) ಅಕ್ಟೋಬರ್ ತಿಂಗಳಲ್ಲಿ ಖಾತೆಯ ಸಪೋರ್ಟ್ (account support) (146), ನಿಷೇಧ ಮೇಲ್ಮನವಿ (248), ಇತರ ಸಪೋರ್ಟ್ (42), ಪ್ರೋಡಕ್ಟ್ ಸಪೋರ್ಟ್ (53 ಪ್ರತಿ) ಮತ್ತು ಸುರಕ್ಷತೆ (11) ಸೇರಿದಂತೆ 500 ಬಳಕೆದಾರರ ವರದಿಗಳನ್ನು ದೂರುಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ.
ತಿಂಗಳಿಗೆ ಸುಮಾರು 8 ಮಿಲಿಯನ್ ಖಾತೆ ನಿಷೇಧ!
ಇವುಗಳಲ್ಲಿ, 18 ಖಾತೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ, ಅಂದರೆ ಅವುಗಳನ್ನು ನಿಷೇಧಿಸಲಾಗಿದೆ ಅಥವಾ ದೂರಿನ ಪರಿಣಾಮವಾಗಿ ಹಿಂದೆ ನಿಷೇಧಿಸಲಾದ ಖಾತೆಯನ್ನು ಮರುಸ್ಥಾಪಿಸಲಾಗಿದೆ. ಅಲ್ಲದೆ, ಬಳಕೆದಾರರಿಗೆ ತಮ್ಮ ಖಾತೆಯನ್ನು ಪ್ರವೇಶಿಸಲು ಅಥವಾ ಕೆಲವು ವೈಶಿಷ್ಟ್ಯಗಳನ್ನು ಬಳಸಲು ಸಹಾಯದ ಅಗತ್ಯವಿದ್ದರೆ, ನಿಷೇಧಿತ ಖಾತೆಯನ್ನು ಮರುಸ್ಥಾಪಿಸಲು ಬಳಕೆದಾರರು ವಿನಂತಿಸಿದ್ದರೆ ಅಥವಾ ವರದಿಯಾದ ಖಾತೆಯು ಭಾರತದ ಕಾನೂನುಗಳನ್ನು ಅಥವಾ WhatsApp ನ ಸೇವಾ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂಬುದು ಖಚಿತಪಟ್ಟರೆ ಆ ಖಾತೆಗಳ ಮೇಲೂ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ.
Twitter new photo rules: ಹೊಸ CEO, ಹೊಸ ರೂಲ್ಸ್, ಫೋಟೊ ಸಂಬಂಧ ಹಲವು ನಿಬಂಧನೆ
ನೋಂದಣಿ ಮಾಡುವಾಗ, ಸಂದೇಶ ಕಳುಹಿಸುವ ಸಮಯದಲ್ಲಿ ಮತ್ತು ನಕಾರಾತ್ಮಕ ಫೀಡ್‌ಬ್ಯಾಕ್ ಬಂದಾಗ ಈ ಮೂರು ಹಂತಗಳಲ್ಲಿ WhatsApp ನಿಂದನೆಯನ್ನು (Abuse) ಪತ್ತೆಹಚ್ಚಲು ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ನಿಯೋಜಿಸುತ್ತದೆ ಎಂದು ಹೇಳಿದ. ಸ್ವಯಂಚಾಲಿತ (Automatic) ಅಥವಾ ಬೃಹತ್ ಸಂದೇಶ ಕಳುಹಿಸುವಿಕೆ ಅಥವಾ ಸ್ಪ್ಯಾಮ್‌ನ (Spam) ಅನಧಿಕೃತ ಬಳಕೆಯಿಂದಾಗಿ ಈ ಹಿಂದೆ, 95 ಪ್ರತಿಶತಕ್ಕಿಂತಲೂ ಹೆಚ್ಚಿನ ಖಾತೆಗಳನ್ನು ನಿಷೇಧಿಸಲಾಗಿತ್ತು ಎಂದು ಸಂಸ್ಥೆಯು ಹೇಳಿಕೆ ನೀಡಿತ್ತು. WhatsApp ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಯನ್ನು ತಡೆಯಲು ಜಾಗತಿಕ ಸರಾಸರಿ ತಿಂಗಳಿಗೆ ಸುಮಾರು 8 ಮಿಲಿಯನ್ ಖಾತೆಗಳನ್ನು ನಿಷೇಧಿಸುತ್ತದೆ.