
ನವದೆಹಲಿ (ಫೆ.28): ವಾಟ್ಸಾಪ್ ಸ್ಟೇಟಸ್ ಫೀಚರ್ ಬದಲಾವಣೆಯು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಈ ಫೀಚರ್ ಸ್ನಾಪ್ ಚಾಟ್ ಫೀಚರ್ ಗೆ ಬಹುತೇಕ ತಾಳೆಯಾಗುತ್ತಿದ್ದು ಆದರೆ ವಾಟ್ಸಾಪ್ ಬಳಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ.
ಇನ್ಸ್ಟಾ ಗ್ರಾಂ ಮತ್ತು ಸ್ನಾಪ್ ಚಾಟ್ ಫೀಚರ್ ರನ್ನು ನಕಲು ಮಾಡಿರುವುದರ ಬಗ್ಗೆ ಸಾಕಷ್ಟು ಬಳಕೆದಾರರು ಕಂಪನಿಗೆ ದೂರು ನೀಡಿದ್ದಾರೆ. ಟೆಕ್ಸ್ಟ್ ಆಧಾರಿತ ಸ್ಟೇಟಸ್ ನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಬಳಕೆದಾರರ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಹಳೆಯ ಸ್ಟೇಟಸ್ ಫೀಚರನ್ನೇ ತರಲು ಕೆಲಸ ಮಾಡುತ್ತಿದೆ. ಟೆಕ್ಸ್ಟ್ ಆಧಾರಿತ ಸ್ಟೇಟಸ್ ಮತ್ತು ಆಡಿಯೋ/ವಿಡಿಯೋ ಆಧಾರಿತ ಸ್ಟೇಟಸ್ ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದು ಬಳಕೆದಾರರಿಗೆ ಬಿಟ್ಟಿದ್ದು!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.