
ಮುಂಬೈ(ಫೆ.28): ಮಾರುಕಟ್ಟೆಗೆ ಲಗ್ಗೆ ಇಡುವ ವೇಳೆ ಆಕರ್ಷಕ ‘ವೆಲ್‌ಕಮ್ ಆರ್’ ಮತ್ತು ಹೊಸ ವರ್ಷದ ಉಚಿತ ಕರೆ ಮತ್ತು ಡಾಟಾ ಆರ್‌ಗಳ ಮೂಲಕ 6 ತಿಂಗಳೊಳಗೆ ರಿಲಾಯನ್ಸ್ ಜಿಯೊ 10ಕೋಟಿಗೂ ಹೆಚ್ಚು ಗ್ರಾಹಕರನ್ನು ತನ್ನದಾಗಿಸಿಕೊಂಡಿದೆ. ಆದರೆ, ಗ್ರಾಹಕರಿಗೆ ಜಿಯೊ ನೆಟ್‌ವರ್ಕ್ ನೀಡಿದ್ದ ಉಚಿತ ಡಾಟಾ ಮತ್ತು ಕರೆಗಳ ಆರ್ ಏಪ್ರಿಲ್ 1ರಿಂದ ರದ್ದುಗೊಳ್ಳಲಿದ್ದು, ಇದರಿಂದ ಜಿಯೊ 5 ಕೋಟಿ ಗ್ರಾಹಕರನ್ನು ಕಳೆದುಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಸ್ತುತ ಜಿಯೊ ನೆಟ್‌ವರ್ಕ್ ಬಳಸುತ್ತಿರುವ ಗ್ರಾಹಕರು ಸಹ ಜಿಯೊ ಪ್ರೈಮ್‌ಗೆ ಸದಸ್ಯತ್ವ ಪಡೆದುಕೊಳ್ಳಬೇಕಿದ್ದು, ಇದಕ್ಕೆ ಎನ್‌ರೋಲ್ ಮಾಡಿಕೊಳ್ಳಲು ಮಾ.31 ಕೊನೆಯ ದಿನವಾಗಿರಲಿದೆ. ಆದರೆ ಈ ವೇಳೆಗೆ ಜಿಯೋ ಕರೆ ಗುಣಮಟ್ಟ ಸುಧಾರಿಸದೇ ಇದ್ದಲ್ಲಿ ಜಿಯೋಗೆ ಗುಡ್‌ಬೈ ಹೇಳುವುದಾಗಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ.50ರಷ್ಟು ಜನ ತಿಳಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.