ಜಿಯೋ'ಗೆ ವಿರುದ್ಧವಾಗಿ ಹೊಸ ಆಫರ್ ಘೋಷಿಸಿದ ಏರ್'ಟೆಲ್

By Suvarna Web DeskFirst Published Feb 28, 2017, 5:51 AM IST
Highlights

ಮೊದಲ ಸಂಚಲನವನ್ನು ಸೃಷ್ಟಿಸಿದ್ದು ರಿಲಯನ್ಸ್ ಜಿಯೊ. 6 ತಿಂಗಳು ತನ್ನೆಲ್ಲ ಗ್ರಾಹಕರಿಗೆ ಉಚಿತ ಇಂಟರ್'ನೆಟ್. ಕರೆ ಸೇರಿದಂತೆ ಹಲವು ಆಫರ್'ಗಳನ್ನು ನೀಡಿತ್ತು. ಅಲ್ಲದೆ ಈ ಉಚಿತ ಸೇವೆಯಿಂದ ಜಿಯೋ'ಗೆ 10 ಕೋಟಿಗೂ ಹೆಚ್ಚು ಚೆಂದಾದಾರರಾಗಿದ್ದರು. ಜಿಯೋ ನೀಡಿದ ಬಂಪರ್ ಆಫರ್'ನಿಂದ ಹಲವು ಮೊಬೈಲ್ ಸೇವಾ ಕಂಪನಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿತ್ತು

ನವದೆಹಲಿ(ಫೆ.28): ಭಾರತದ ಸಂಚಾರಿ ದೂರವಾಣಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೊಸ ಕ್ರಾಂತಿಗಳು ಶುರುವಾಗುತ್ತಿದೆ. ಪ್ರತಿಯೊಂದು ಮೊಬೈಲ್ ಸೇವಾ ಕಂಪನಿಗಳು ಗ್ರಾಹಕರನ್ನು ತನ್ನತ್ತ ಸೆಳೆಯುವ ಸಲುವಾಗಿ ಹಲವು ಉಚಿತ ಆಫರ್'ಗಳನ್ನು ಜಾರಿಗೊಳಿಸುತ್ತಿವೆ.

ಮೊದಲ ಸಂಚಲನವನ್ನು ಸೃಷ್ಟಿಸಿದ್ದು ರಿಲಯನ್ಸ್ ಜಿಯೊ. 6 ತಿಂಗಳು ತನ್ನೆಲ್ಲ ಗ್ರಾಹಕರಿಗೆ ಉಚಿತ ಇಂಟರ್'ನೆಟ್. ಕರೆ ಸೇರಿದಂತೆ ಹಲವು ಆಫರ್'ಗಳನ್ನು ನೀಡಿತ್ತು. ಅಲ್ಲದೆ ಈ ಉಚಿತ ಸೇವೆಯಿಂದ ಜಿಯೋ'ಗೆ 10 ಕೋಟಿಗೂ ಹೆಚ್ಚು ಚೆಂದಾದಾರರಾಗಿದ್ದರು. ಜಿಯೋ ನೀಡಿದ ಬಂಪರ್ ಆಫರ್'ನಿಂದ ಹಲವು ಮೊಬೈಲ್ ಸೇವಾ ಕಂಪನಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿತ್ತು.

Latest Videos

ನಂತರಾನಂತರದಲ್ಲಿ ಬೇರೆ ಕಂಪನಿಗಳು ಕೂಡ ಕೆಲವೊಂದು ಉಚಿತ ಆಫರ್'ಗಳನ್ನು ನೀಡಲು ಶುರು ಮಾಡಿದರು. ಆದರೆ ಜಿಯೋ ನೀಡಿದ ಬಂಪರ್ ಆಫರ್ ಮುಂದೆ ಅವರ ಕೆಲವೊಂದು ಉಚಿತ ಸೇವೆಗಳು ನಗಣ್ಯವಾಗಿತ್ತು.

ಈಗ ಏರ್'ಟೆಲ್ ಕೂಡ ಜಿಯೋ'ಗೆ ಸ್ಪರ್ಧಿಯಾಗಿ ಹೊಸ ಆಫರ್ ಘೋಷಿಸಿದ್ದು, ಏಪ್ರಿಲ್ ಒಂದರಿಂದ ದೇಶದ ಯಾವುದೇ ನಗರದಿಂದ ಮಾಡುವ ಕರೆಗಳಿಗೆ ರೋಮಿಂಗ್ ಶುಲ್ಕಗಳು ಇರುವುದಿಲ್ಲ. ಅಲ್ಲದೆ ಇದು ಇಂಟರ್'ನೆಟ್ ಡಾಟಾ ಹಾಗೂ ಎಸ್'ಎಂಎಸ್'ಗಳಿಗೂ ಅನ್ವಯವಾಗುತ್ತದೆ.

ಏರ್'ಟೆಲ್ ಕಳೆದ ವರ್ಷದ ಸೆಪ್ಟಂಬರ್'ನಿಂದ ಅಮೆರಿಕಾ, ಇಂಗ್ಲೆಂಡ್, ಸಿಂಗಾಪುರ ಸೇರಿದಂತೆ ಕೆಲವು ರಾಷ್ಟ್ರಗಳ ಅಂತರ ರಾಷ್ಟ್ರೀಯ ಕರೆಗಳಿಗೆ  ಉಚಿತ ರೋಮಿಂಗ್ ವ್ಯವಸ್ಥೆ ಕಲ್ಪಿಸಿದೆ. ಈ ಡಿಜಿಟಲ್ ಕ್ರಾಂತಿಯ ಪರಿಣಾಮವಾಗಿ ಮುಂದೊಂದು ದಿನ ಎಲ್ಲ ಗ್ರಾಹಕರಿಗೆ ಉಚಿತ ಇಂಟರ್'ನೆಟ್, ಕರೆ ಮುಂತಾದ ಸೌಲಭ್ಯಗಳನ್ನು ನೀಡಿದರೂ ಆಶ್ಚರ್ಯವಿಲ್ಲ.

click me!