4ಜಿ ಡೌನ್'ಲೋಡ್ ವೇಗ ಜಿಯೋದಲ್ಲೇ ಹೆಚ್ಚು: ಟ್ರಾಯ್'ನಿಂದ ಫುಲ್ ಮಾರ್ಕ್ಸ್

By Suvarna Web DeskFirst Published Dec 30, 2017, 3:07 PM IST
Highlights

ಡೌನ್'ಲೋಡ್ ವೇಗವನ್ನು ಗ್ರಾಹಕರು ಸಾಮಾಜಿಕ ಮಾಧ್ಯಮಗಳ ಅಥವಾ ಇಮೇಲ್ ಮೂಲಕ ವಿಡಿಯೋ ಅಥವಾ ಫೋಟೊವನ್ನು ಅಪ್'ಲೋಡ್ ಅಥವಾ ಡೌನ್'ಲೋಡ್ ಮಾಡುವ ವೇಗದೊಂದಿಗೆ ಇಲ್ಲವೆ ಇಂಟರ್'ನೆಟ್ ಬಳಕೆಯೊಂದಿಗೆ ನಿರ್ಧರಿಸಲಾಗುತ್ತದೆ.           

ನವದೆಹಲಿ(ಡಿ.30): ಅತೀ ವೇಗವಾಗಿ ಗ್ರಾಹಕರನ್ನು ಸೆಳೆದ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋಗೆ ಟ್ರಾಯ್ ಬೆನ್ನು ತಟ್ಟಿದೆ. ಅಕ್ಟೋಬರ್'ನಲ್ಲಿ ಜಿಯೋದ ಡೌನ್ ಲೋಡ್ ವೇಗ ಅತೀ ಹೆಚ್ಚಿದ್ದು ಸ್ಪೀಡ್ 21.1 ಎಂಬಿಪಿಎಸ್ ಇತ್ತು ಎಂದು ಟೆಲಿಕಾಂ ಪ್ರಾಧಿಕಾರ ತಿಳಿಸಿದೆ.

2ನೇ ಸ್ಥಾನದಲ್ಲಿ ವೊಡಾಪೋನ್ ಕಂಪನಿಯಿದ್ದು ಅಕ್ಟೋಬರ್'ನಲ್ಲಿ ಗ್ರಾಹಕರ ವೇಗ 9.9 ಎಂಬಿಪಿಎಸ್ ಇದ್ದರೆ,ಏರ್'ಟೆಲ್ 9.3 ಹಾಗೂ ಐಡಿಯಾ 8.1 ಇತ್ತು ಎಂದು ಟ್ರಾಯ್ ವರದಿ ನೀಡಿದೆ. ಸೆಪ್ಟೆಂಬರ್'ನಲ್ಲಿ ಜಿಯೋ ದಾಖಲೆ ವೇಗ ನೀಡಿದ್ದು ಪ್ರತಿ ಸೆಕೆಂಡ್'ಗೆ 21.9 ನೀಡಿದೆ.

ಡೌನ್'ಲೋಡ್ ವೇಗವನ್ನು ಗ್ರಾಹಕರು ಸಾಮಾಜಿಕ ಮಾಧ್ಯಮಗಳ ಅಥವಾ ಇಮೇಲ್ ಮೂಲಕ ವಿಡಿಯೋ ಅಥವಾ ಫೋಟೊವನ್ನು ಅಪ್'ಲೋಡ್ ಅಥವಾ ಡೌನ್'ಲೋಡ್ ಮಾಡುವ ವೇಗದೊಂದಿಗೆ ಇಲ್ಲವೆ ಇಂಟರ್'ನೆಟ್ ಬಳಕೆಯೊಂದಿಗೆ ನಿರ್ಧರಿಸಲಾಗುತ್ತದೆ.           

ನಿತ್ಯದ ಸರಾಸರಿ ವೇಗವೂ 19.6ರಿಂದ 25.2 ಎಂಬಿಪಿಎಸ್ ಇದೆ. ಇನ್ನುಳಿದಂತೆ ವೊಡಾಫೋನ್ 6.8 ರಿಂದ 9.3, ಐಡಿಯಾ 8.6 ರಿಂದ 9.8 ಹಾಗೂ ಏರ್'ಟೆಲ್ 4.9 ರಿಂದ 8.7 ಇದೆ ಎಂದು ಅಂಕಿಅಂಶಗಳಲ್ಲಿ ತಿಳಿಸಿದೆ.

click me!