ಎಟಿಎಂ ಕಾರ್ಡ್ ವಿಚಾರದಲ್ಲಿ ನಾವು ಮೋಸ ಹೋಗುವ 5 ಮಾರ್ಗಗಳು

By Suvarna Web DeskFirst Published Oct 20, 2016, 4:00 PM IST
Highlights

ನಿಮ್ಮ ಯಾವುದೇ ಎಟಿಎಂ ಕಾರ್ಡ್ ಕಳೆದುಕೊಂಡರೂ ಕೂಡಲೇ ಬ್ಯಾಂಕ್’ಗೆ ಸಂಪರ್ಕ ಮಾಡಿ ಆ ಕಾರ್ಡನ್ನು ಬ್ಲಾಕ್ ಮಾಡಿಸಬೇಕು. ಇಲ್ಲದಿದ್ದರೆ, ಆ ಕಾರ್ಡ್ ಯಾವುದಾದರೂ ವಂಚಕನ ಕೈಗೆ ಸಿಕ್ಕರೆ ದುರ್ಬಳಕೆಯಾಗುವ ಸಾಧ್ಯತೆ ಇರುತ್ತದೆ.

ಬ್ಯಾಂಕ್ ಗ್ರಾಹಕರು ಎಟಿಎಂ ಕಾರ್ಡ್ ಬಳಸುವುದು ಸರ್ವೇ ಸಾಮಾನ್ಯ. ಬಹುತೇಕ ಪ್ರತಿಯೊಬ್ಬ ಖಾತೆದಾರರ ಬಳಿ ಕಾರ್ಡ್ ಇದ್ದೇ ಇರುತ್ತದೆ. ನಮ್ಮ ಖಾತೆಯ ಸಂಪೂರ್ಣ ಹಣದ ಕಂಟ್ರೋಲ್ ಈ ಪುಟ್ಟ ಕಾರ್ಡ್’ನಲ್ಲಿರುತ್ತದೆ. ಇಂತಿರುವಾಗ ವಂಚಕರು ಈ ಕಾರ್ಡನ್ನು ದುರ್ಬಳಕೆ ಮಾಡಿಕೊಳ್ಳಲು ಹಾತೊರೆಯುತ್ತಲೇ ಇರುತ್ತಾರೆ. ನಾವು ಮೋಸ ಹೋಗಬಹುದಾದ ಕೆಲ ದಾರಿಗಳು ಇಲ್ಲಿವೆ.

1) ಡೆಬಿಟ್ ಕಾರ್ಡ್ ಕಳೆದುಹೋದಾಗ:
ನೀವು ನಿಮ್ಮ ಯಾವುದೇ ಎಟಿಎಂ ಕಾರ್ಡ್ ಕಳೆದುಕೊಂಡರೂ ಕೂಡಲೇ ಬ್ಯಾಂಕ್’ಗೆ ಸಂಪರ್ಕ ಮಾಡಿ ಆ ಕಾರ್ಡನ್ನು ಬ್ಲಾಕ್ ಮಾಡಿಸಬೇಕು. ಇಲ್ಲದಿದ್ದರೆ, ಆ ಕಾರ್ಡ್ ಯಾವುದಾದರೂ ವಂಚಕನ ಕೈಗೆ ಸಿಕ್ಕರೆ ದುರ್ಬಳಕೆಯಾಗುವ ಸಾಧ್ಯತೆ ಇರುತ್ತದೆ.

2) ಬ್ಯಾಂಕ್ ಮಾಹಿತಿ ಕೇಳುತ್ತಾರೆ:
ಇತ್ತೀಚೆಗೆ ವಂಚಕರು ಫೋನ್ ಕಾಲ್ ಮೂಲಕ ನಿಮ್ಮ ಖಾಸಗಿ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿರುವ ಪ್ರಕರಣಗಳು ಸಾಕಷ್ಟು ನಡೆದಿವೆ... ಹುಷಾರ್. ನಿಮ್ಮ ಮನೆಯ ವಿಳಾಸವನ್ನು ನೀವು ನೀಡಿದರೆ ಪ್ರಮಾದವಾಗುತ್ತದೆ. ವಂಚಕನು ಬ್ಯಾಂಕನ್ನು ಸಂಪರ್ಕಿಸಿ ಕಾರ್ಡ್ ಕಳೆದುಹೋಗಿದೆ, ವಿಳಾಸವೂ ಬದಲಾಗಿದೆ ಎಂದು ಹೇಳಿ ಹೊಸ ಕಾರ್ಡ್’ಗಾಗಿ ಅರ್ಜಿ ಸಲ್ಲಿಸುತ್ತಾರೆ. ಬ್ಯಾಂಕ್’ನವರು ಯಾವುದೇ ಅನುಮಾನ ಪಡದೇ ಹೊಸ ಕಾರ್ಡನ್ನು ಹೊಸ ವಿಳಾಸಕ್ಕೆ ಕಳುಹಿಸಿಕೊಡುತ್ತಾರೆ. ಅಲ್ಲಿಗೆ ನಿಮ್ಮ ಅಕೌಂಟ್’ನ ಜುಟ್ಟು ಬೇರೊಬ್ಬರಿಗೆ ಸಿಕ್ಕಂತಾಗುತ್ತದೆ.

3) ಡೂಪ್ಲಿಕೇಟ್ ಮಾಡುತ್ತಾರೆ:
ನೀವು ಶಾಪಿಂಗ್’ಗೆ ಕಾರ್ಡ್ ಬಳಸುವಾಗ ಹುಷಾರಾಗಿರಿ. ಕಾರ್ಡ್ ಉಜ್ಜುವ ಮೆಷೀನ್ ಬಳಿ ಬೇರಾವುದಾದರೂ ಅನುಮಾನಾಸ್ಪದ ವಸ್ತುಗಳಿವೆಯೇ ಎಂದು ಗಮನಿಸಿ. ಯಾಕೆಂದರೆ ಕಾರ್ಡ್ ಸ್ಕಿಮಿಂಗ್ ಯಂತ್ರಗಳ ಮೂಲಕ ನಿಮ್ಮ ಎಟಿಎಂ ಕಾರ್ಡ್’ನ ಸಂಪೂರ್ಣ ವಿವರವನ್ನು ಸ್ಕ್ಯಾನ್ ಮಾಡಿ ನಕಲಿ ಕಾರ್ಡ್ ತಯಾರಿಸಬಹುದು. ಹುಷಾರ್..!

4) ಡೆಲಿವರಿಯೇ ಆಗದಿದ್ದಾಗ:
ನೀವು ಹೊಸ ಎಟಿಎಂ ಕಾರ್ಡ್’ಗೆ ಅರ್ಜಿ ಗುಜರಾಯಿಸಿ ಕಾಯುತ್ತಾ ಇರುತ್ತೀರಿ. ಹಲವು ದಿನಗಳಾದರೂ ನೀವು ನೀಡಿದ ವಿಳಾಸಕ್ಕೆ ಪೋಸ್ಟ್ ಮೂಲಕ ಕಾರ್ಡ್ ಬಂದೇ ಇಲ್ಲವೇ. ಆಗ ಅದು ಇನ್ಯಾವುದೋ ಅಪರಿಚಿತರ ಕೈಗೆ ಸಿಕ್ಕಿರುವ ಅಪಾಯವಿರುತ್ತದೆ. ಕೂಡಲೇ ಬ್ಯಾಂಕ್ ಸಂಪರ್ಕಿಸಿ.

5) ಬ್ಯಾಂಕ್ ಉದ್ಯೋಗಿಗಳಿಂದ ಮೋಸ:
ಎಲ್ಲ ಗ್ರಾಹಕರ ಮಾಹಿತಿ ಬ್ಯಾಂಕ್’ನ ಡಾಟಾಬೇಸ್’ನಲ್ಲಿ ಸಂಗ್ರಹವಾಗಿರುತ್ತದೆ. ಇದು ಬ್ಯಾಂಕ್’ನ ಕೆಲ ಉದ್ಯೋಗಿಗಳಿಗೆ ಲಭ್ಯವಿರುತ್ತದೆ. ಈ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಹಣದಾಸೆಗೆ ಬಿದ್ದು ಬ್ಯಾಂಕ್ ಉದ್ಯೋಗಿಯೇನಾದರೂ ಈ ಮಾಹಿತಿಯನ್ನು ವಂಚಕರಿಗೆ ನೀಡಿಬಿಟ್ಟರೆ ಗ್ರಾಹಕರ ಹಣ ಗೋವಿಂದಾ..!

(ಮಾಹಿತಿ: ನ್ಯೂಸ್18)

click me!