ಸರ್ಕಾರ ನೆರವಿಗೆ ಬರದಿದ್ರೆ ಭಾರತದಲ್ಲಿ ನಮ್ಮ ಅಸ್ತಿತ್ವ ಅನುಮಾನ:ವೊಡಾಫೋನ್

By Kannadaprabha News  |  First Published Nov 13, 2019, 9:00 AM IST

ವೊಡಾಫೋನ್ ಕೇಂದ್ರ ಸರ್ಕಾರಕ್ಕೆ 45.000 ಕೋಟಿ ರು. ಶುಲ್ಕ ಪಾವತಿಸಬೇಕು | ಆರ್ಥಿಕ ಸಂಕಷ್ಟದಲ್ಲಿ ವೊಡಾಫೋನ್ | ಎಜಿಎಆರ್ ಶುಲ್ಕದಲ್ಲಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ 1.4 ಲಕ್ಷ ಕೋಟಿ ರು. ಪಾವತಿಸಬೇಕು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ.  


ನವದೆಹಲಿ (ನ. 13): ಸುಪ್ರೀಂಕೋರ್ಟ್ ಆದೇಶದಿಂದಾಗಿ ಕೇಂದ್ರ ಸರ್ಕಾರಕ್ಕೆ ಸುಮಾರು 45.000 ಕೋಟಿ ರು. ಶುಲ್ಕ ಪಾವ ತಿಸುವ ಅನಿವಾರ್ಯತೆಗೆ ಸಿಲುಕಿರುವ ವೊಡಾಪೋನ್ - ಐಡಿಯಾ ಇಂಡಿಯಾ, ಈ ಹೊರೆಯಿಂದ ಸರ್ಕಾರ ನಮ್ಮನ್ನು ಪಾರು ಮಾಡದೇ ಹೋದಲ್ಲಿ, ಭವಿಷ್ಯದಲ್ಲಿ ಭಾರತದಲ್ಲಿ ನಮ್ಮ ಇರುವಿಕೆ ಅನುಮಾನ ಎಂದು ಹೇಳಿದೆ.

ಸೋಶಿಯಲ್ ಮೀಡಿಯಾ ಲೋಕಕ್ಕೆ ಕಾಲಿಟ್ಟ ಹೊಸ ಡಾನ್! ಮಾಸ್ಟೋಡಾನ್

Tap to resize

Latest Videos

undefined

ಕಂಪನಿಯ ಅರ್ಧವಾರ್ಷಿಕ ವರದಿ ಬಿಡುಗಡೆ ಮಾಡಿ ಮಾತನಾಡಿದ ಕಂಪನಿಯ ಸಿಇಒ ನಿಕ್ ರೀಡ್, ಸ್ಪರ್ಧಾತ್ಮಕ ಮಾರುಕಟ್ಟೆಯಿಂದಾಗಿ ಐಡಿಯಾ ಜೊತೆಗಿನ ನಮ್ಮ ಪಾಲುದಾರಿಕೆಯ ಕಂಪನಿ ಭಾರೀ ನಷ್ಟದಲ್ಲಿದೆ. 6 ತಿಂಗಳಲ್ಲಿ ಈ ಪಾಲುದಾರಿಕೆಯ ವಿಐಎಲ್ ಸಂಸ್ಥೆ 15000 ಕೋಟಿ ರು.ನಷ್ಟ ಅನುಭವಿಸಿದೆ. ಇದರ ನಡುವೆಯೇ ಎಜಿಎಆರ್ ಶುಲ್ಕದಲ್ಲಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ೧.೪ ಲಕ್ಷ ಕೋಟಿ ರು. ಪಾವತಿಸಬೇಕು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಹಣ ವ್ಯವಹಾರಕ್ಕೆ ಡಿಜಿಟಲ್ ಬಲ; ದೇಶವೆಲ್ಲಾ UPI ಮಯ!

ಈ ಪೈಕಿ ಮೂರನೇ ಒಂದು ಭಾಗದ ಹಣವನ್ನು ನಾವು ಪಾವತಿ ಸಬೇಕಾಗಿ ಬರಲಿದೆ. ಇದು ನಮ್ಮ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಜೊತೆಗೆ ವಿಐಎಲ್‌ಗೆ, ವೊಡಾಫೋನ್ ಯಾವುದೇ ಹಣಕಾಸಿನ ನೆರವನ್ನು ನೀಡುವ ಬಾಧ್ಯತೆ ಹೊಂದಿಲ್ಲ. ಪರಿಣಾಮ ವಿಐಎಲ್‌ನ ಬುಕ್ ವ್ಯಾಲ್ಯೂ ಅನ್ನು ಶೂನ್ಯಕ್ಕೆ ಇಳಿಸಲಾಗಿದೆ ಎಂದು ಹೇಳಿದ್ದಾರೆ.

 

click me!