ಅದು ಫೇಸ್ಬುಕ್ ಆಗಿರಲಿ ಅಥವಾ ಟ್ವಿಟ್ಟರ್ ಅಥವಾ ಇನ್ನಾವುದೇ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆಗಿರಲಿ... ಈ ಸೋಶಿಯಲ್ ಮೀಡಿಯಾಗಳ ಕಥೆ ಅಷ್ಟೇ ಬಿಡಿ ಕಣ್ರೀ.... ಜನ ಇಷ್ಟಪಡುವಂತೆ ಇರ್ಬೇಕು, ಹೊಸ ಲುಕ್ಕು, ಹೊಸ ಫೀಚರು ಕೊಡ್ತಾ ಇರ್ಬೇಕು, ಇಲ್ದಿದ್ರೆ ಜನ ಟಿಶ್ಯೂ ಪೇಪರ್‌ನಂತೆ ಬಳಸಿ ಬಿಸಾಡಿದಂತೆ ಬಿಸಾಕ್ ಬಿಡ್ತಾರೆ!
ಬೆಂಗಳೂರು (ನ.12): ಈ ಸೋಶಿಯಲ್ ಮೀಡಿಯಾ ಆಟದಲ್ಲಿ ಹೊಸ ಆಟಗಾರರು ಬರ್ತಾ ಇರ್ತಾರೆ, ಹೋಗ್ತಾ ಇರ್ತಾರೆ. ಒಂದೊಮ್ಮೆ ಫೇಸ್ಬುಕ್ಕಿನದ್ದೇ ಫುಲ್ ಹವಾ ಇತ್ತು, ಮತ್ತೆ ಟ್ವಿಟ್ಟರ್ ಕೂಡಾ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತಿತ್ತು. ಮತ್ತೆ ಇನ್ಸ್ಟಾಗ್ರಾಂ ಆಯ್ತು, ಟಿಕ್ ಟಾಕ್ ಭಾರೀ ಜೋರಾಗಿ ಬ್ಯಾಟ್ ಬೀಸ್ತಾ ಇದೆ... ಹೀಗೆ ಹೊಸತು ಬಂದಾಗ ಹಳಬರು ಪಕ್ಕ ಸರೀಯೋದು ಸಾಮಾನ್ಯ ಬಿಡಿ.
ಈವರೆಗೆ ಟ್ವಿಟ್ಟರ್‌ಗೆ ಪರ್ಯಾಯವಾದ ಯಾವುದೇ ಇತರ ಪ್ಲಾಟ್ ಫಾರ್ಮ್ ಅಷ್ಟೊಂದು ಜನಪ್ರಿಯವಾಗಿಲ್ಲ. ಆದರೆ ಈಗ ಬಂದಿರುವ ಹೊಸ ಪ್ಲಾಟ್‌ಫಾರ್ಮ್ ಭಾರೀ ಜನಪ್ರಿಯವಾಗುತ್ತಿದೆ.
undefined
ಇದನ್ನೂ ಓದಿ | Fact Check: ವಾಟ್ಸಾಪ್‌ನಲ್ಲಿ 3 ಸರಿ ಚಿಹ್ನೆ ಇದ್ರೆ ಸರ್ಕಾರ ಗೂಢಚರ್ಯೆ ನಡೆಸ್ತಿದೆ ಎಂದರ್ಥ!...
ವಕೀಲರ ಟ್ವೀಟೊಂದು ಹಚ್ಚಿತು ಕಿಚ್ಚು!
ಇದು ಎಲ್ಲಾ ಶುರುವಾಗಿದ್ದು, ಸುಪ್ರೀಂ ಕೋರ್ಟ್ ಹಿರಿಯ ವಕೀಲ ಸಂಜಯ್ ಹೆಗ್ಡೆ ಟ್ವಿಟ್ಟರ್ ಕಂಪನಿಗೆ ಕಳುಹಿಸಿದ ಲೀಗಲ್ ನೋಟಿಸ್ ಮೂಲಕ! ಎರಡು ಬಾರಿ ಬ್ಲಾಕ್ ಆಗಿರುವ ಸಂಜಯ್ ಹೆಗ್ಡೆ ಖಾತೆಯನ್ನು ಮತ್ತೆ ರಿಸ್ಟೋರ್ ಮಾಡಕ್ಕೆ ಆಗಲ್ಲ ಎಂದು ಟ್ವಿಟ್ಟರ್ ಹೇಳಿತ್ತು.
ಅದಕ್ಕೆ ಲೀಗಲ್ ನೋಟಿಸ್ ಮೂಲಕ ಪ್ರತಿಕ್ರಿಯಿಸಿದ ಅವರು, ಪರ್ಯಾಯ ಪ್ಲಾಟ್‌ಫಾರ್ಮ್ ಮಾಸ್ಟೊಡಾನ್‌ಗೆ ವಲಸೆ ಹೋಗೋ ಹೊರತು ಹೊರತು ನನ್ನ ಬೇರೆ ದಾರಿ ಇಲ್ಲ ಎಂದಿದ್ದರು..
ಅಷ್ಟೇ ಬಿಡಿ, ಸಂಜಯ್ ಹೆಗ್ಡೆ ಬೆಂಬಲಕ್ಕೆ ನಿಂತ ಟ್ವಿಟ್ಟರ್ ಬಳಕೆದಾರರು, ಮಾಸ್ಟೊಡಾನ್ ನಲ್ಲಿ ಖಾತೆ ತೆರೆಯಲು ಶುರು ಮಾಡಿದ್ರು. ಅಲ್ಲಿಂದ ಶುರುವಾಯ್ತು ಈ ಮಾಸ್ಟೊಡಾನ್ ಜನಪ್ರಿಯತೆ.
ಇದನ್ನೂ ಓದಿ | ಮೊಬೈಲ್ ಇಂಟರ್ನೆಟ್ ಸ್ಪೀಡ್ ಚಾರ್ಟ್ ಪ್ರಕಟ; ಬಳಕೆದಾರನ ಪ್ರೀತಿಗೆ ಯಾರು ಪಾತ್ರ?...
ಏನಿದು ಮಾಸ್ಟೊಡಾನ್ ?
ಮಾಸ್ಟಡಾನ್ ಓಪನ್-ಸೋರ್ಸ್ ಸೋಶಿಯಲ್ ನೆಟ್ವರ್ಕಿಂಗ್ ಸೇವೆ. ಇಲ್ಲಿ ಬಳಕೆದಾರರು ತಮ್ಮದೇ ಆದ ಕಮ್ಯೂನಿಟಿಯನ್ನು ರಚಿಸಬಹುದು ಅಥವಾ ಈಗಾಗಲೇ ಇರೋ ಕಮ್ಯೂನಿಟಿಗೆ ಸೇರಬಹುದು.
ಸ್ವಲ್ಪ ಮಟ್ಟಿಗೆ ಟ್ವಿಟ್ಟರನ್ನೇ ಹೋಲುವ ಮಾಸ್ಟೊಡಾನ್ ಸೆಟಪ್ ಸ್ವಲ್ಪ ಭಿನ್ನವಾಗಿದೆ. ‘ಕಮ್ಯೂನಿಟಿಗಳು’ ಮೂಲತ:ವಾಗಿ ಒಂದಕ್ಕೊಂದು ಬೆಸೆದುಕೊಂಡಿರುವ ಸರ್ವರ್‌ಗಳು. ಒಂದು ಕಮ್ಯೂನಿಟಿಯ ಬಳಕೆದಾರರು ಬೇರೆ ಕಮ್ಯೂನಿಟಿ ಬಳಕೆದಾರರೊಂದಿಗೆ ಮುಕ್ತವಾಗಿ ಸಂಪರ್ಕ ಸಾಧಿಸಬಹುದು. ಇದರ ಒಟ್ಟು ತಾಂತ್ರಿಕ ವ್ಯವಸ್ಥೆಯು ವೀಕೇಂದ್ರಿಕೃತವಾಗಿರುವುದರಿಂದ, ಯಾವುದೇ ರೀತಿಯ ಆರ್ಥಿಕ, ತಾಂತ್ರಿಕ ಅಥವಾ ಸರ್ಕಾರಿ ಹಸ್ತಕ್ಷೇಪ ಸುಲಭವಲ್ಲ.
ಎಲ್ಲಿಂದ, ಹೇಗೆ ಶುರು?
ಮಾಸ್ಟೊಡಾನ್ ಖಾತೆ ತೆರೆಯಬೇಕಾದರೆ ಅದರ ವೆಬ್‌ಸೈಟ್ಗೆ ಹೋಗಿ 'Get Started' ಮೇಲೆ ಕ್ಲಿಕ್ ಮಾಡಿ. ಅದು ನಿಮಗೆ ‘Sign Up’ ಪುಟಕ್ಕೆ ಕೊಂಡೊಯ್ಯುತ್ತದೆ.
ಇಲ್ಲಿ ನಿಮಗೆ ಕಮ್ಯೂನಿಟಿ ರಚಿಸುವ ಅಥವಾ ಈಗಾಗಲೇ ರಚಿಸಲಾಗಿರುವ ಕಮ್ಯೂನಿಟಿಗೆ ಸೇರುವ ಆಯ್ಕೆ ಸಿಗುತ್ತದೆ. @mastodon.social ಅವುಗಳ ಪೈಕಿ ಈಗ ಭಾರೀ ಜನಪ್ರಿಯವಾಗಿರುವ ಕಮ್ಯೂನಿಟಿ.
ಇದನ್ನೂ ಓದಿ | ಜಿಯೋ ತಂದಿದೆ ಹೊಸ ಟ್ಯಾರಿಫ್ ಪ್ಲಾನ್; 'ಆಲ್-ಇನ್-ಒನ್'ನಿಂದ ಇನ್ಮುಂದಿಲ್ಲ ಕನ್ಫ್ಯೂಶನ್!...
ನೀವ್ಯಾವ ಕಮ್ಯೂನಿಟಿಯಲ್ಲಿದ್ದರೂ, ಬೇರೆ ಕಮ್ಯೂನಿಟಿಯ ಯಾರನ್ನೂ ಬೇಕಾದ್ರೂ ಫಾಲೋ ಮಾಡ್ಬಹುದು ಅಥವಾ ಸಂಭಾಷಣೆ ನಡೆಸಬಹುದು.
Join ಆಯ್ಕೆಯನ್ನು ಕ್ಲಿಕ್ ಮಾಡಿದಾಗ ನಿಮ್ಮ ಮುಂದೆ Sign in ಫಾರ್ಮ್ ತೆರೆದುಕೊಳ್ಳುತ್ತೆ. ನಿಮ್ಮ ಇ-ಮೇಲ್ ಐಡಿ ದಾಖಲಿಸಿ, ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಹಾಕಿದರೆ ನಿಮ್ಮ ಖಾತೆ ರೆಡಿ.
ಮಾಸ್ಟೊಡಾನ್ ಇಂಟರ್ಫೇಸ್ ಟ್ವೀಟ್ಟರ್‌ಗೆ ಹೋಲುತ್ತದೆ. ಅಷ್ಟೇ ಅಲ್ಲ, ಇದರಲ್ಲೂ ಟ್ವಿಟರ್ ತರಹ ಅಕ್ಷರಗಳಿಗೆ ಲಿಮಿಟ್ ಇದೆ. ಇಲ್ಲಿ ನಿಮ್ಮ ಒಂದು ಪೋಸ್ಟ್ 500 ಕ್ಯಾರೆಕ್ಟರ್ ಗಳನ್ನು ಹೊಂದಬಹುದು.