ಇಂದಿನಿಂದ ಬೆಂಗಳೂರು ಟೆಕ್‌ ಶೃಂಗ

By Kannadaprabha NewsFirst Published Nov 17, 2021, 6:11 AM IST
Highlights
  • ಬಹು ನಿರೀಕ್ಷಿತ ಬೆಂಗಳೂರು ತಂತ್ರಜ್ಞಾನ ಶೃಂಗ (ಬಿಟಿಎಸ್‌)ದ 24ನೇ ವರ್ಷದ ಸಮಾವೇಶ
  • ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಹೈಬ್ರಿಡ್‌ ಮಾದರಿಯಲ್ಲಿ ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಈ ಸಮಾವೇಶ

 ಬೆಂಗಳೂರು (ನ.17):  ಬಹು ನಿರೀಕ್ಷಿತ ಬೆಂಗಳೂರು ತಂತ್ರಜ್ಞಾನ ಶೃಂಗ (BTS)ದ 24ನೇ ವರ್ಷದ ಸಮಾವೇಶ ಬುಧವಾರದಿಂದ ಆರಂಭವಾಗಲಿದೆ. ನಗರದ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ (hotel) ಹೈಬ್ರಿಡ್‌ ಮಾದರಿಯಲ್ಲಿ ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಈ ಸಮಾವೇಶಕ್ಕೆ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು (venkaiaha naidu) ಚಾಲನೆ ನೀಡಲಿದ್ದಾರೆ.

‘ಡ್ರೈವಿಂಗ್‌ ದಿ ನೆಕ್ಸ್ಟ್‌’ ಘೋಷ ವಾಕ್ಯದಡಿ ನಡೆಯಲಿರುವ ಬಿಟಿಎಸ್‌-2021ರಲ್ಲಿ (BTS 2021) 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ಯುಎಇ (UAE), ಐರೋಪ್ಯ ಒಕ್ಕೂಟ, ವಿಯೆಟ್ನಾಂ ಮತ್ತು ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದು, ಇಸ್ರೇಲ… ಪ್ರಧಾನಿ ನಫ್ತಾಲಿ ಬೆನಟ್‌ ಮತ್ತು ಆಸ್ಪ್ರೇಲಿಯಾದ ಪ್ರಧಾನಿ ಸ್ಕಾಟ್‌ ಮಾರಿಸನ್‌ ಸೇರಿದಂತೆ ಹಲವು ಗಣ್ಯರು ವರ್ಚುವಲ… ರೂಪದಲ್ಲಿ ಭಾಗವಹಿಸಲಿದ್ದಾರೆ. ಜಾಗತಿಕ ಮಟ್ಟದ 300ಕ್ಕೂ ಹೆಚ್ಚು ಕಂಪನಿಗಳು ಮತ್ತು 5 ಸಾವಿರಕ್ಕೂ ಹೆಚ್ಚು ನವೋದ್ಯಮಗಳು, ವಾಣಿಜ್ಯ ವಲಯದ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವರ್ಚುವಲ್ ರೂಪದಲ್ಲಿ 5 ಲಕ್ಷಕ್ಕೂ ಹೆಚ್ಚು ಆಸಕ್ತರು ಈ ಶೃಂಗದಲ್ಲಿ ಭಾಗವಹಿಸಲಿದ್ದಾರೆ ಎಂದು ಐಟಿ-ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಮೊದಲ ಬಾರಿಗೆ ಭಾರತೀಯ ನಾವೀನ್ಯತಾ ಮೈತ್ರಿಕೂಟ (ಜಿಐಎ) ಎಂಬ ಪರಿಕಲ್ಪನೆ ಅಳವಡಿಸಿಕೊಳ್ಳಲಾಗಿದ್ದು, ಇದರ ಭಾಗವಾಗಿ ಜರ್ಮನಿ, ಜಪಾನ್‌, ಫಿನ್ಲೆಂಡ್‌, ಲಿಥುವೇನಿಯಾ, ಸ್ವೀಡನ್‌, ಸ್ವಿಜರ್ಲೆಂಡ್‌ ಮುಂತಾದ ದೇಶಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ.

75ಕ್ಕೂ ಹೆಚ್ಚು ಗೋಷ್ಠಿಗಳು, 7 ಸಂವಾದ:

ಬಿಟಿಎಸ್‌-2021ರ ಅಂಗವಾಗಿ ನಾಲ್ಕು ವೇದಿಕೆಗಳಲ್ಲಿ ಒಟ್ಟು 75 ಗೋಷ್ಠಿಗಳನ್ನು ಮತ್ತು 7 ಸಂವಾದಗಳನ್ನು ಏರ್ಪಡಿಸಲಾಗಿದೆ. ಇವುಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಮೂಲಕ ನಾವೀನ್ಯತೆಯ ಬೆಳವಣಿಗೆ, ಫಿನ್‌ಟೆಕ್‌ ಭವಿಷ್ಯದ ಹೆಜ್ಜೆಗಳು, ಕೃಷಿ, ಜೀವವಿಜ್ಞಾನ ಸಂಶೋಧನೆ, ಮಹಿಳಾ ಉದ್ಯಮಶೀಲತೆಯ ಸವಾಲುಗಳು, ಶೈಕ್ಷಣಿಕ ತಂತ್ರಜ್ಞಾನ, ಮುಂದಿನ ತಲೆಮಾರಿನ ವೈದ್ಯಕೀಯ ತಂತ್ರಜ್ಞಾನ, ವಂಶವಾಹಿ ಆಧಾರಿತ ಔಷಧಿಗಳು, ಜೀನ್‌ ಎಡಿಟಿಂಗ್‌, ಸೆಮಿಕಂಡಕ್ಟರ್‌, ಕ್ಯಾನ್ಸರ್‌ ಚಿಕಿತ್ಸೆ, ಸೆಲ… ಥೆರಪಿ, ಸೈಬರ್‌ ಸೆಕ್ಯುರಿಟಿ, ವೈಮಾಂತರಿಕ್ಷ ಮುಂತಾದ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಜೈಶಂಕರ್‌, ಚೇತನ್‌ ಭಗತ್‌ ಉಪನ್ಯಾಸ:

ಶೃಂಗದಲ್ಲಿನ ವಿವಿಧ ಗೋಷ್ಠಿಗಳನ್ನು ಉದ್ದೇಶಿಸಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಆಸ್ಪ್ರೇಲಿಯಾದ ವಿದೇಶಾಂಗ ಸಚಿವ ಮಾರಿಸ್‌ ಪೇನ್‌, ಇಸ್ರೋ ಅಧ್ಯಕ್ಷ ಕೆ.ಶಿವನ್‌, ಭಾರತ (india) ಮೂಲದ ನೊಬೆಲ… ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್‌, ಹೆಸರಾಂತ ಲೇಖಕ ಚೇತನ್‌ ಭಗತ್‌, ಜಗದ್ವಿಖ್ಯಾತ ಕ್ಯಾನ್ಸರ್‌ ವೈದ್ಯ-ವಿಜ್ಞಾನಿ ಡಾ.ಸಿದ್ಧಾರ್ಥ ಮುಖರ್ಜಿ, ವಿಶ್ವ ಆರ್ಥಿಕ ವೇದಿಕೆಯ ಸ್ಥಾಪಕ ಪ್ರೊ

ಕ್ಲಾಸ್‌ ಶ್ವಾಬ್‌, ಮೈಕ್ರೋಸಾಫ್ಟ್‌ ಇಂಡಿಯಾದ ಮುಖ್ಯಸ್ಥ ಅನಂತ್‌ ಮಹೇಶ್ವರಿ, ಆ್ಯಪಲ… ಇಂಕ್‌ ಸಮೂಹದ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಹ್ಮಣ್ಯಂ, ಕ್ರಿಂಡೈಲ… ಕಂಪನಿಯ ಸಿಇಒ ಮಾರ್ಟಿನ್‌ ಶ್ರೋಟರ್‌, ಟೆಲ್ಸಾ$್ಟ್ರ ಕಂಪನಿಯ ಪಾಲುದಾರ ಗ್ಯಾವೆನ್‌ ಸ್ಟ್ಯಾಂಡನ್‌ ಮುಂತಾದವರು ಮಾತನಾಡಲಿದ್ದಾರೆ.

‘ಬೆಂಗಳೂರು ನೆಕ್ಸ್ಟ್‌’ ಗೋಷ್ಠಿಯಲ್ಲಿ ಆರ್‌ಸಿ:

ತಂತ್ರಜ್ಞಾನದಲ್ಲಿ ಪಾರಮ್ಯ ಹೊಂದಿರುವ ಬೆಂಗಳೂರಿನ ಸಾಧನೆಯನ್ನು ಮತ್ತಷ್ಟುವಿಸ್ತರಿಸುವ ಗುರಿಯಿಂದ ಶೃಂಗದಲ್ಲಿ ಪ್ರತ್ಯೇಕವಾಗಿ ‘ಬೆಂಗಳೂರು ನೆಕ್ಸ್ಟ್‌’ ನಾವೀನ್ಯತೆ ಮತ್ತು ನಾಯಕತ್ವ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಈ ಗೋಷ್ಠಿಗಳಲ್ಲಿ ಕೇಂದ್ರ ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌, ಬಾಷ್‌ ಕಂಪನಿ ಸಿಇಒ ದತ್ತಾತ್ರಿ ಸಾಲಗಾಮೆ ಮುಂತಾದವರು ಭಾಗವಹಿಸಲಿದ್ದಾರೆ. ಐಟಿ ವಿಷನ್‌ ಗ್ರೂಪ್‌ ಮುಖ್ಯಸ್ಥ ಕ್ರಿಸ್‌ ಗೋಪಾಲಕೃಷ್ಣನ್‌ ಸಂವಾದ ನಡೆಸಿ ಕೊಡಲಿದ್ದಾರೆ.

ವರ್ಚುವಲ್ ವೀಕ್ಷಣೆ, ನೋಂದಣಿಗೆ ಅವಕಾಶ:  ಬಿಟಿಎಸ್‌-2021ರಲ್ಲಿ ವರ್ಚುಯಲ್ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, 320ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿವೆ. ಇವುಗಳ ಪೈಕಿ ರಾಜ್ಯ ಸರಕಾರದ ‘ಎಲಿವೇಟ್‌’ ಯೋಜನೆಯಡಿ ಆಯ್ಕೆಯಾಗಿರುವ 100 ಮಳಿಗೆಗಳಿರಲಿವೆ.  

click me!