*ವಿವೋ ವಿ21 ಕಳೆದ ಏಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಗೆ
*ಇದೀಗ ವಿವೋ ವಿ21 ನಿಯಾನ್ ಸ್ಪಾರ್ಕ್ ಎಡಿಷನ್ ಬಿಡುಗಡೆ
*ಹೇಗಿದೆ ಚಂದದ ಸ್ಮಾರ್ಟ್‌ವಾಚ್ Syska Bolt SW200?
ವಿವೋ ವಿ21 (Vivo V21) ಕಳೆದ ಏಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಗೆ ಬಂತು. ಮೂವತ್ತು ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನುಗಳಲ್ಲೇ ಅತ್ಯುತ್ತಮ ಅನ್ನುವ ಹೆಗ್ಗಳಿಕೆಗೂ ಪಾತ್ರವಾಯಿತು. ಒಳ್ಳೆಯ ರೇಟಿಂಗ್ (Rating) , ಒಳ್ಳೆಯ ರಿವ್ಯೂ ಪಡೆದ ವಿ21 5ಜಿ ಫೋನು (5G Phone) ಎಲ್ಲರ ಗಮನ ಸೆಳೆದರೂ ಯುವಕರಿಗೆ ಅದರ ಬಣ್ಣ (Color) ಅಷ್ಟಾಗಿ ಹಿಡಿಸಿತೋ ಇಲ್ಲವೋ ಎಂಬ ಅನುಮಾನವೂ ವ್ಯಕ್ತವಾಯಿತು. ಹೀಗಾಗಿ ಇದೀಗ ನಿಯಾನ್ ಸ್ಪಾರ್ಕ್ ಎಡಿಷನ್ (Neon Spark edition) ಮಾರುಕಟ್ಟೆಗೆ ಬಂದಿದೆ.
ಇದು ನಿಯಾನ್ ಬಣ್ಣದ ಹೊಳೆಹೊಳೆಯುವ ಫೋನು ಅನ್ನುವುದನ್ನು ಬಿಟ್ಟರೆ ಇದಕ್ಕೂ ಮುಂಚೆ ಬಂದ ವಿ21 5ಜಿಗೂ ಇದಕ್ಕೂ ಹೇಳಿಕೊಳ್ಳಬಹುದಾದ ವ್ಯತ್ಯಾಸವೇನೂ ಇದ್ದಂತಿಲ್ಲ. ಅದೇ ತೆಳುವಾದ ಸುತ್ತೋಣಿ, ನೀರಬಿಂದುವಿನಂತೆ ಕ್ಯಾಮರಾ ಕಣ್ಣು, ಒಂದೇ ಬದಿಯಲ್ಲಿ ವಾಲ್ಯೂಮ್ ಮತ್ತು ಪವರ್ ಬಟನ್, ಮತ್ತೊಂದು ಬದಿ ಖಾಲಿಖಾಲಿ. ಇದರ ಮೂಲ ವರ್ಷನ್ನಿನ ಮೂರು ಬಣ್ಣಗಳ ಜತೆ ಇದೀಗ ನಾಲ್ಕನೇ ಬಣ್ಣ. ಬಣ್ಣ ಬಳಿದದ್ದಕ್ಕೂ ಒಂದು ರಿಲೀಸ್.
Google ನಿಷೇಧಿಸಿರುವ ಈ 7 Android Apps ನಿಮ್ಮ ಫೋನಲ್ಲಿದ್ದರೆ ಈಗಲೇ ತೆಗೆದು ಹಾಕಿ!
ಮಿಕ್ಕಂತೆ ಎಲ್ಲವೂ ಅದೇ ಅಂದ ಮೇಲೆ ವಿವರಿಸುವ ಅಗತ್ಯವಿಲ್ಲ. ಆದರೆ ನಾವು ಬರೆದ ವಿವೋ 21 5ಜಿ ಅವಲೋಕನ ಓದದವರ ಪಾಲಿಗೆ ಕೆಲವು ಮೂಲ ವಿವರ. ಇದರದ್ದು ಆಕ್ಟಾ ಕೋರ್ ಮೀಡಿಯಾಟೆಕ್ 880ಯು ಪ್ರಾಸೆಸರ್, 8 ಜಿಬಿ ರ‌್ಯಾಮ್, 128 ಮತ್ತು 246 ಜಿಬಿ ಸ್ಟೋರೇಜ್‌ಗಳು, ಎರಡು ಸಿಮ್, 5ಜಿ, ಬ್ಲೂಟೂಥ್- ಹೀಗೆ ಎಲ್ಲ ಫೋನಿಗಿರುವ ಎಲ್ಲ ಸವಲತ್ತುಗಳ ಜತೆಗೇ 64 ಮೆಗಾಪಿಕ್ಸೆಲ್ ಕ್ಯಾಮರಾ.
Scammersಯಿಂದ ನಿಮ್ಮ ಆ್ಯಂಡ್ರಾಯ್ಡ್ ಫೋನ್ ರಕ್ಷಿಸಲು ಇಲ್ಲಿವೆ 8 ಸುಲಭ ಉಪಾಯಗಳು!
ಇದಕ್ಕೆ ಓಐಎಸ್- ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ತಂತ್ರಜ್ಞಾನವೂ ಉಂಟು. ಇದರೊಟ್ಟಿಗೇ ಒಂದು ಅಲ್ಟ್ರಾವೈಡ್ 8 ಎಂಪಿ ಕ್ಯಾಮರಾ, ಮತ್ತೊಂದು 120 ಡಿಗ್ರಿ 2 ಮೆಗಾಪಿಕ್ಸೆಲ್ ಕ್ಯಾಮರಾದ ಬೆಂಬಲವೂ ಉಂಟು. ಫ್ರಂಟ್ ಕ್ಯಾಮರಕ್ಕೆ ಹೆಸರಾದ ವಿವೋ ಇಲ್ಲೂ ರಾಜಿ ಮಾಡಿಕೊಂಡಿಲ್ಲ. 44 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಕ್ಕೆ (Front Camera) ನಿಮ್ಮನ್ನು ಚೆಂದಗೊಳಿಸುವುದು ಕೂಡ ಗೊತ್ತು. ಚಾಕಚಕ್ಯತೆಯಿಂದ ಬಳಸಿದರೆ ಸಿನಿಮಾ ಕೂಡ ಮಾಡಬಹುದು. ಯಾಕೆಂದರೆ 4ಕೆ ವಿಡಿಯೋ ರೆಕಾರ್ಡಿಂಗೂ ಉಂಟು. ಇದರ ಬೆಲೆ ₹29,990 (128ಜಿಬಿ) ಮತ್ತು ₹32,990 (256ಜಿಬಿ). ಆಯ್ದ ಡೆಬಿಟ್ ಕಾರ್ಡುಗಳಲ್ಲಿ (Debit Card) ಕೊಂಡರೆ ₹1250 ರುಪಾಯಿ ಕಡಿತವೂ ಉಂಟಂತೆ. ವಿಚಾರಿಸಿಕೊಂಡು ಮಂದುವರಿಯಿರಿ.
ಚಂದದ ಸ್ಮಾರ್ಟ್‌ವಾಚ್ ಸಿಸ್ಕಾ ಬೋಲ್ಟ್ ಎಸ್‌ಡಬ್ಲ್ಯೂ200
ಸಿಸ್ಕಾ ಕಂಪನಿಯ ಹೊಸ ಸ್ಮಾರ್ಟ್‌ವಾಚಿನ (Smart watch) ಹೆಸರು ಸಿಸ್ಕಾ ಬೋಲ್ಟ್ ಎಸ್‌ಡಬ್ಲ್ಯೂ200 (Syska Bolt SW200). ಆಕರ್ಷಕ ವಿನ್ಯಾಸದ ಈ ವಾಚು 1.28 ಇಂಚಿನ ಹೈ ರೆಸೆಲ್ಯೂಷನ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ತುಂಬಾ ಹಗುರ ಎಂದೆನ್ನಿಸುವ ಈ ವಾಚು ತೂಗುವುದು ಕೇವಲ 55 ಗ್ರಾಮ್‌ಗಳಷ್ಟೇ. ನೀರಿಗೆ ಬಿದ್ದರೂ ನೀರು ತಾಗದ ವಾಟರ್ ರೆಸಿಸ್ಟೆನ್ಸ್ (Water resistance) ವಾಚ್ ಇದು. ಲಿ-ಐಯಾನ್ ಬ್ಯಾಟರಿ ಇದರ ಶಕ್ತಿ. ಸುಮಾರು 10 ದಿನಗಳವರೆಗೆ ಚಾರ್ಜ್ ಹಿಡಿದಿಡುವ ಬ್ಯಾಟರಿ ಅದು. ಹಾರ್ಟ್ ರೇಟ್ ಮಾನಿಟರ್ (Heart Rate Monitor), ಎಸ್‌ಪಿಓ2 ಮಾನಿಟರ್ ಸೇರಿದಂತೆ ಎಲ್ಲಾ ಸ್ಮಾರ್ಟ್‌ಫೋನ್ ಫೀಚರ್‌ಗಳು ಇದರಲ್ಲಿ ಲಭ್ಯವಿದೆ. ಮ್ಯಾಗ್ನೆಟಿಂಗ್ ಚಾರ್ಜಿಂಗ್ ಕೇಬಲ್ ಇದ್ದು, ಚಾಜ್‌ರ್ ಮಾಡುವುದು ಸುಲಭ. ಆಕರ್ಷಕ ಮತ್ತು ಆಧುನಿಕವಾದ ಈ ಸ್ಮಾರ್ಟ್‌ವಾಚ್ ಫ್ಲಿಪ್‌ಕಾರ್ಟ್‌ನಲ್ಲಿ (Flipcart) ಬೆಲೆ ರು.2999ಕ್ಕೆ ದೊರೆಯುತ್ತದೆ.