‘ಇ-ಯುಗ’ದ ಉಪಕರಣಗಳು ಹಾಗೇನೆ; ಇವುಗಳು ಸಮರ್ಪಕವಾಗಿ ಕೆಲಸ ಮಾಡಬೇಕಾದರೆ ಬರೇ ಹಾರ್ಡ್‌ವೇರ್ ಮಾತ್ರವಲ್ಲ, ಸಾಫ್ಟ್‌ವೇರ್‌ಗಳು ಕೂಡಾ ಸರಿಯಾಗಿಯೇ ಇರಬೇಕು. ಅವುಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಾಕು, ಸಮಸ್ಯೆಗಳು ಶುರುವಾಗುತ್ತವೆ.
ಕಳೆದ ವರ್ಷ ಚೀನಾದ ಜನಪ್ರಿಯ OnePlus ಮೊಬೈಲ್ ಕಂಪನಿಯು, OnePlus 6T ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿತ್ತು.
OnePlus 6Tನ 3700mAh ಸಾಮರ್ಥ್ಯದ ಬ್ಯಾಟರಿಯು ಸಾಮಾನ್ಯವಾಗಿ ಇಡೀ ದಿನ ಬಾಳಿಕೆ ಬರುತ್ತದೆ. ಆದರೆ, ಕೆಲದಿನಗಳಿಂದ ಈ ಬ್ಯಾಟರಿ ವಿಚಿತ್ರವಾಗಿ ವರ್ತಿಸುತ್ತಿರುವ ಬಗ್ಗೆ ಬಳಕೆದಾರರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ... ಮೊಬೈಲ್ ಪ್ರಿಯರ ನಿದ್ದೆಗೆಡಿಸಿರುವ Xiaomi Redmi Note 7!
ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಳಲನ್ನು ಬಳಕೆದಾರರು ತೋಡಿಕೊಂಡಿದ್ದು, ಒಂದು ಇಡೀ ದಿನ ಬಾಳಿಕೆ ಬರುತ್ತಿದ್ದ ಬ್ಯಾಟರಿ, ದಿಢೀರ್ ಆಗಿ ಕೆಲವೇ ಗಂಟೆಗಳಿಗೆ ಸೀಮಿತವಾಗಿ ಬಿಟ್ಟಿದೆ, ಎಂದು ಬರೆದುಕೊಂಡಿದ್ದಾರೆ. ಕೆಲವರು, ಫೋನ್ ಬಹಳ ಬಿಸಿಯಾಗುತ್ತಿತ್ತು, ಫ್ಯಾಕ್ಟರಿ ರಿಸೆಟ್ ಮಾಡಿದ ಬಳಿಕ ಸರಿಯಾಗಿದೆ ಎಂದು ಕೆಲವರು ಹೇಳಿದ್ದಾರೆ.
ಈ ಬಗ್ಗೆ ಬಿಜಿಆರ್.ಇನ್ ಸವಿವರವಾಗಿ ವರದಿ ಮಾಡಿದ್ದು, ಬಳಕೆದಾರರ ಪ್ರತಿಕ್ರಿಯೆಗಳನ್ನು ದಾಖಲಿಸಿದೆ.
ಬ್ಯಾಗ್ರೌಂಡ್ ನಲ್ಲಿ ಕಾರ್ಯಾಚರಿಸುತ್ತಿರುವ ಆ್ಯಪ್‌ಗಳನ್ನು ನಿಲ್ಲಿಸಿದರೂ, ಕ್ಯಾಷ್ ಕ್ಲಿಯರ್ ಮಾಡಿದರೂ, ಲೇಟೆಸ್ಟ್ ಸಾಫ್ಟ್‌ವೇರ್ ಅಪ್ಡೇಟ್ ಮಾಡಿಕೊಂಡರೂ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ಇನ್ನೂ ಹಲವರು ದೂರಿದ್ದಾರೆ.
ಇದನ್ನೂ ಓದಿ: ನಾವೂ ಯಾರಿಗೂ ಕಮ್ಮಿಯಿಲ್ಲ; ಜಿಯೋಗೆ ಬಿಎಸ್‌ಎನ್‌ಎಲ್ ಸೆಡ್ಡು!
ಆದರೆ, ಯಾವ ಬಗ್‌ನಿಂದಾಗಿ ಈ ರೀತಿಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ದೊರತಿಲ್ಲ. ಈ ಬಗ್ಗೆ ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಸಮಸ್ಯೆ ಯಾರಿಗಾದರೂ ಎದುರಾಗಿದ್ದರೆ, ಫ್ಯಾಕ್ಟರಿ ರಿಸೆಟ್ ಮಾಡಿಕೊಂಡು ಪ್ರಯತ್ನಿಸಬಹುದು ಅಥವಾ OnePlus ಕಂಪನಿಯು ಈ ಬಗ್ಗೆ ಪ್ರತಿಕ್ರಿಯಿಸುವವರೆಗೆ ಕಾಯಬಹುದು.