5G Network In US: 5ಜಿ ಸೇವೆಯಿಂದ ಬೋಯಿಂಗ್‌ ಮೇಲೆ ಪರಿಣಾಮವಿಲ್ಲ: ವಿಮಾನ ಸೇವೆ ಭಾಗಶಃ ಪುನಾರಂಭ

Kannadaprabha News   | Asianet News
Published : Jan 21, 2022, 09:30 AM IST
5G Network In US: 5ಜಿ ಸೇವೆಯಿಂದ ಬೋಯಿಂಗ್‌ ಮೇಲೆ ಪರಿಣಾಮವಿಲ್ಲ: ವಿಮಾನ ಸೇವೆ ಭಾಗಶಃ ಪುನಾರಂಭ

ಸಾರಾಂಶ

*  ಅಮೆರಿಕದಲ್ಲಿ ಕ್ರಮೇಣ ಸಹಜ ಸ್ಥಿತಿಗೆ ಬರುತ್ತಿರುವ ವಿಮಾನ ಸಂಚಾರ *  ಅಮೆರಿಕ ವಿಮಾನ ನಿಯಂತ್ರಕರ ಪರಿಷ್ಕೃತ ನಿರ್ದೇಶನ *  ಏರ್‌ ಇಂಡಿಯಾ, ಅರಬ್‌ ಎಮಿರೇಟ್ಸ್‌ ಸಂಚಾರ ಶುರು  

ನ್ಯೂಯಾರ್ಕ್/ನವದೆಹಲಿ(ಜ.21):  ಅಮೆರಿಕದಲ್ಲಿ(America) 5ಜಿ ದೂರಸಂಪರ್ಕ ಸೇವೆ(5G Network) ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವ್ಯತ್ಯಯಗೊಂಡಿದ್ದ ಆ ದೇಶದ ವಿಮಾನಯಾನ ಸೇವೆ ಶುಕ್ರವಾರ ಭಾಗಶಃ ಪುನಾರಂಭವಾಗಿದೆ. ಬೋಯಿಂಗ್‌ ಕಂಪನಿಯ ವಿಮಾನ ಸೇರಿ ಕೆಲವು ವರ್ಗದ ವಿಮಾನಗಳಿಗೆ 5ಜಿ ಸೇವೆಯಿಂದ ವ್ಯತ್ಯಯವಾಗುವುದಿಲ್ಲ ಎಂದು ಹೇಳಿದೆ. ಹೀಗಾಗಿ ಭಾರತ(India), ಯುಎಇ(UAE) ಸೇರಿದಂತೆ ಹಲವು ದೇಶಗಳಿಂದ ಅಮೆರಿಕಕ್ಕೆ ವಿಮಾನ ಸಂಚಾರಕ್ಕೆ ಚಾಲನೆ ಸಿಕ್ಕಿದೆ. ಇದರಿಂದಾಗಿ ಅಮೆರಿಕದಲ್ಲಿ ವಿಮಾನ ಸಂಚಾರ ಕ್ರಮೇಣ ಸಹಜ ಸ್ಥಿತಿಗೆ ಬರುತ್ತಿದ್ದು, ಪ್ರಯಾಣಿಕರ ಪರದಾಟ ಕೊನೆಗೊಳ್ಳುವ ನಿರೀಕ್ಷೆ ಎದುರಾಗಿದೆ.

ಏರ್‌ ಇಂಡಿಯಾ, ಯುಎಇ ವಿಮಾನ ಶುರು:

ಅಮೆರಿಕಕ್ಕೆ ತೆರಳುವ 8 ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದ್ದ ಏರ್‌ ಇಂಡಿಯಾ(Air India) ಕಂಪನಿ ಗುರುವಾರದಿಂದ, ಆ ಪೈಕಿ 6 ವಿಮಾನ ಸೇವೆಯನ್ನು ಪುನಾರಂಭಿಸಿದೆ.

6G Mobile Technology: 6ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಚೀನಾ, 2030ಕ್ಕೆ ಸೇವೆಗೆ!

‘5ಜಿ ಸೇವೆಯಿಂದ ವಿಮಾನ ಇಳಿಸಲು ಹಾಗೂ ಟೇಕಾಫ್‌ ಮಾಡಲು ಸಮಸ್ಯೆಯಾಗಲಿದೆ’ ಎಂದು ಅಮೆರಿಕದ ವೈಮಾನಿಕ ನಿಯಂತ್ರಣ ಸಂಸ್ಥೆ ಬುಧವಾರ ಹೇಳಿತ್ತು. ಆದರೆ ಗುರುವಾರ ಪರಿಷ್ಕೃತ ನಿರ್ದೇಶನ ನೀಡಿದ ಅದು, ‘ಬೋಯಿಂಗ್‌ ಕಂಪನಿಯ ಬಿ777 ಸೇರಿ ಕೆಲವು ವರ್ಗದ ವಿಮಾನಗಳಲ್ಲಿ ಅಳವಡಿಸಲಾಗಿರುವ ಆಲ್ಟಿಮೀಟರ್‌ (ಎತ್ತರ ನಿರ್ಧಾರಕ) ಉಪಕರಣಗಳ ಮೇಲೆ 5ಜಿ ಸೇವೆ ಯಾವುದೇ ಪ್ರಭಾವ ಬೀರುವುದಿಲ್ಲ’ ಎಂದು ಸ್ಪಷ್ಟಪಡಿಸಿತ್ತು. ಇದರ ಜತೆಗೆ ಬೋಯಿಂಗ್‌ ಕಂಪನಿ ಕೂಡ ಬಿ777 ವಿಮಾನ ಹಾರಾಟಕ್ಕೆ ಅನುಮತಿ ನೀಡಿತು ಎಂದು ಏರ್‌ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಈ ನಡುವೆ ಬೋಯಿಂಗ್‌ 777 ಹಾಗೂ ಏರ್‌ಬಸ್‌ ಎ 380ಯಂತಹ ವಿಮಾನಗಳನ್ನು ಮಾತ್ರವೇ ಹೊಂದಿರುವ ಎಮಿರೇಟ್ಸ್‌ ಕೂಡ ಅಮೆರಿಕ ಹಾಗೂ ಅಮೆರಿಕದಿಂದ ಸಂಚಾರ ಆರಂಭಿಸಿದೆ

5ಜಿ ಎಫೆಕ್ಟ್: ಅಮೆರಿಕದಲ್ಲಿ ಸಹಸ್ರಾರು ವಿಮಾನ ರದ್ದು

ನವದೆಹಲಿ: ಅಮೆರಿಕದಲ್ಲಿ 5ಜಿ ಸೇವೆ ಆರಂಭ ಹಿನ್ನೆಲೆಯಲ್ಲಿ ಜ.18ರಂದು ಅಮೆರಿಕಕ್ಕೆ ತೆರಳಬೇಕಿದ್ದ ಮತ್ತು ಅಲ್ಲಿಂದ ಹೊರಡಬೇಕಿದ್ದ 8 ವಿಮಾನಗಳನ್ನು ಏರ್‌ ಇಂಡಿಯಾ ರದ್ದುಗೊಳಿಸಿತ್ತು. ದೆಹಲಿ-ಜೆಎಫ್‌ಕೆ- ದೆಹಲಿ, ದೆಹಲಿ- ಸ್ಯಾನ್‌ಫ್ರಾನ್ಸಿಸ್ಕೋ, ದೆಹಲಿ-ಶಿಕಾಗೋ-ದೆಹಲಿ, ಮುಂಬೈ-ನೆವಾರ್ಕ್- ಮುಂಬೈ ವಿಮಾನದ ಸಂಚಾರ ರದ್ದುಪಡಿಸಲಾಗಿದೆ. ಆದರೆ ದೆಹಲಿ- ವಾಷಿಂಗ್ಟನ್‌ ನಡುವಿನ ಸಂಚಾರ ನಿಗದಿಯಂತೆ ನಡೆಯಲಿದೆ ಎಂದು ತಿಳಿಸಿತ್ತು.

ಅಮೆರಿಕದ ಪ್ರಮುಖ ನಗರಗಳಲ್ಲಿ ಬುಧವಾರದಿಂದ 4ಜಿ ದೂರಸಂಪರ್ಕ ಸೇವೆ ಹಿಂಪಡೆದು 5ಜಿ ಸೇವೆ ಆರಂಭಿಸಲಾಗುತ್ತಿದ್ದು, ಅವುಗಳು ವಿಮಾನಗಳ ಉಪಕರಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳುತ್ತಿದ್ದ ಮತ್ತು ಅಮೆರಿಕದಿಂದ ಹೊರಡಬೇಕಿದ್ದ ಸಾವಿರಾರು ವಿಮಾನಗಳ ಸಂಚಾರವನ್ನು ದಿಢೀರ್‌ ರದ್ದುಪಡಿಸಲಾಗಿತ್ತು.

Good news: ಬೆಂಗಳೂರಲ್ಲಿ ಮುಂದಿನ ವರ್ಷ 5ಜಿ ಸೇವೆ

ಹೀಗಾಗಿ ಭಾರತ ಸೇರಿದಂತೆ ವಿವಿಧ ದೇಶಗಳಿಗೆ ತೆರಳಲು ಸಜ್ಜಾಗಿದ್ದ ಮತ್ತು ವಿವಿಧ ದೇಶಗಳಿಂದ ಅಮೆರಿಕಕ್ಕೆ ಪ್ರಯಾಣಿಸಲು ಅಣಿಯಾಗಿದ್ದ ಲಕ್ಷಾಂತರ ಪ್ರಯಾಣಿಕರು ತಮ್ಮ ಪ್ರಯಾಣ ರದ್ದುಪಡಿಸಬೇಕಾಗಿ ಬಂದಿದೆ. ಜೊತೆಗೆ ಸರಕು ಸಂಚಾರದಲ್ಲೂ ಭಾರೀ ವ್ಯತ್ಯಯವಾಗಿದೆ. ಮುಂದಿನ ಕೆಲವು ದಿನಗಳ ಕಾಲ ಇದು ಮುಂದುವರಿಯಲಿದೆ ಎಂದು ಹೇಳಲಾಗಿತ್ತು, 

ಇಂಥದ್ದೊಂದು ಕೆಲಸದ ಬಗ್ಗೆ ಮೊದಲೇ ಅರಿವಿತ್ತಾದರೂ, ವಿಮಾನಯಾನ ಸಂಸ್ಥೆಗಳು ಕಡೆಯ ಹಂತದವರೆಗೂ ಆ ಬಗ್ಗೆ ಮಾಹಿತಿ ನೀಡದೆ ದಿಢೀರನೆ ಸಂಚಾರ ರದ್ದುಪಡಿಸಿದ್ದಕ್ಕೆ ಏರ್‌ ಇಂಡಿಯಾ ಸೇರಿದಂತೆ ವಿವಿಧ ದೇಶಗಳ ಸಾವಿರಾರು ಪ್ರಯಾಣಿಕರು ವಿಮಾನಯಾನ ಕಂಪನಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಜೊತೆಗೆ ಸಂಚಾರ ರದ್ದಾದ ಅಥವಾ ವ್ಯತ್ಯಯವಾದ ನಿಲ್ದಾಣಗಳಿಂದ ವಿಮಾನ ಸಂಚಾರ ಪುನಾರಂಭದ ಬಗ್ಗೆ ಸ್ಪಷ್ಟಮಾಹಿತಿಯೂ ಇಲ್ಲವಾದ ಕಾರಣ ಲಕ್ಷಾಂತರ ಪ್ರಯಾಣಿಕರು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದರು.

ಏನು ಕಾರಣ?

- ಅಮೆರಿಕದ ಹಲವು ಪ್ರಮುಖ ನಗರಗಳಲ್ಲಿ 5ಜಿ ದೂರಸಂಪರ್ಕ ಸೇವೆ ಆರಂಭಿಸಲಾಗುತ್ತಿದೆ
- 5ಜಿ ಹಾಗೂ ಎತ್ತರ ಸೂಚಿಸುವ ವಿಮಾನ ಉಪಕರಣಗಳ ನಡುವಣ ಸ್ಪೆಕ್ಟ್ರಂ ಅಂತರ ಕಮ್ಮಿ
- 5ಜಿ ಆರಂಭವಾದರೆ ಭೂಮಿಯಿಂದ ಎಷ್ಟುಎತ್ತರದಲ್ಲಿದ್ದೇನೆ ಎಂದು ವಿಮಾನಕ್ಕೆ ತಿಳಿಯದು
- ವಿಮಾನ ಇಳಿಸಲು ಪೈಲಟ್‌ ಪರದಾಡಬೇಕಾಗುತ್ತದೆ. ಜಿಪಿಎಸ್‌ ಸಿಗ್ನಲ್‌ ಕೂಡ ಗೊತ್ತಾಗದು
- ಯುರೋಪ್‌ ದೇಶಗಳಲ್ಲಿ ಎರಡೂ ಸ್ಪೆಕ್ಟ್ರಂಗಳ ಮಧ್ಯೆ ಅಂತರ ಹೆಚ್ಚಿದ್ದು, ಸಮಸ್ಯೆಯಾಗಿಲ್ಲ
- ಏರ್‌ಪೋರ್ಟ್‌ಗಳಲ್ಲಿ 5ಜಿ ಸಿಗ್ನಲ್‌ ಕಡಿಮೆ ಮಾಡುವುದಾಗಿ ದೂರಸಂಪರ್ಕ ಕಂಪನಿಗಳ ಆಫರ್‌
- ಸರ್ಕಾರ, ವಿಮಾನಯಾನ ಸಂಸ್ಥೆಗಳು, ದೂರ ಸಂಪರ್ಕ ಕಂಪನಿಗಳ ಮಧ್ಯೆ ಸತತ ಮಾತುಕತೆ
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?