iPhone 14 Pro ಸ್ಟಾಕ್‌ ಖಾಲಿ, ಆಪಲ್‌ ಜೊತೆ ಮಾತನಾಡಿದ ಕೇಂದ್ರ ಸಚಿವ!

By Santosh Naik  |  First Published Oct 27, 2022, 4:25 PM IST

ದೇಶದಲ್ಲಿ ಐಫೋನ್‌ 14 ಪ್ರೋ ಮೊಬೈಲ್‌ಗೆ ಸಾಕಷ್ಟು ಬೇಡಿಕೆ ವ್ಯಕ್ತವಾಗಿದೆ. ಆದರೆ, ಬುಕ್‌ ಮಾಡಿದರೆ ಫೋನ್‌ ಸಿಗುತ್ತಿಲ್ಲ. ಸ್ಟಾಕ್‌ ಖಾಲಿ ಎನ್ನುವ ಬೋರ್ಡ್‌ ಬಿದ್ದು ಸಾಕಷ್ಟು ದಿನಗಳಾಗಿವೆ. ಈ ಕುರಿತಾಗಿ ದೂರು ಬಂದ ಹಿನ್ನಲೆಯಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸ್ವತಃ ಆಪಲ್‌ ಕಂಪನಿಯ ಜೊತೆ ಈ ವಿಚಾರವಾಗಲಿ ಮಾತನಾಡಿದ್ದಾರೆ.
 


ನವದೆಹಲಿ (ಅ. 27): ದೆಹಲಿ ಪ್ರಮುಖ ಸ್ಟೋರ್‌ಗಳಲ್ಲಿ ಆಪಲ್‌ ಸಂಸ್ಥೆಯ ಇತ್ತೀಚಿನ ಐಫೋನ್‌ 14 ಪ್ರೋ ಸ್ಟಾಕ್‌ ಖಾಲಿಯಾಗುತ್ತಿದೆ ಎನ್ನುವ ವರದಿಗಳ ಕುರಿತು ಆಪಲ್‌ ಕಂಪನಿಯ ಜೊತೆ ಮಾತನಾಡಿರುವುದಾಗಿ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಐಫೋನ್ 14 ಪ್ರೊಗೆ ಬೇಡಿಕೆ ಹೆಚ್ಚುತ್ತಿದೆ ಮತ್ತು ಆಪಲ್ ಪೂರೈಕೆ ನಿರ್ಬಂಧಗಳನ್ನು ಪರಿಹರಿಸುವಲ್ಲಿ ಶ್ರಮವಹಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ. "ನಾನು ಆಪಲ್‌ನೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಭಾರತದ ಉತ್ಪಾದನೆಯೊಂದಿಗೆ ಐಫೋನ್‌ 14 ಬೇಡಿಕೆಯನ್ನು ಪೂರೈಸುತ್ತದ್ದೇವೆ. ಇದರ ನಡುವೆ ಐಫೋನ್‌ 14 ಪ್ರೊ ಬೇಡಿಕೆಯು ಹೆಚ್ಚಿದೆ. ಅದಲ್ಲದೆ, ಈ ಫೋನ್‌ಗಳನ್ನು ಪೂರೈಕೆ ಮಾಡುವಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ' ಎಂದು ಸಚಿವರು ಟ್ವೀಟ್‌ ಮಾಡಿದ್ದಾರೆ. "ಖಾಸಗಿ ಮಾರಾಟಗಳು ಬಹುಶಃ "ಪರ್ಯಾಯ" ಪೂರೈಕೆ ಚಾನೆಲ್‌ಗಳಾಗಿವೆ" ಚಂದ್ರಶೇಖರ್ ಹೇಳಿದ್ದಾರೆ. ಹೊಸ ಮಾಡೆಲ್‌ಗಳು ಸ್ಟೋರ್‌ಗಳಿಗೆ ಬಂದ ಬಳಿಕ, ಈ ಹಬ್ಬದ ಋತುವಿನಲ್ಲಿ ಹೊಸದಾಗಿ ಬಿಡುಗಡೆಯಾದ ಐಫೋನ್‌ 14 ಗೆ ಬೇಡಿಕೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಇದಲ್ಲದೆ, ವಿವಿಧ ಇ-ಕಾಮರ್ಸ್ ಮತ್ತು ಚಿಲ್ಲರೆ ಪ್ಲಾಟ್‌ಫಾರ್ಮ್‌ಗಳ ಆಕರ್ಷಕ ಕೊಡುಗೆಗಳು ಹೊಸ ಮಾದರಿಯ ಮೊಬೈಲ್ನ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿತ್ತು.

I hv spoken wth Apple n they hv said while iphone14 demand is being met also wth india productn, the iphone14 pro demand has surged n is facing supply constraints which they r addressing

pvt sales are probably "alternate" supply channels https://t.co/wLxJdxbFi9

— Rajeev Chandrasekhar 🇮🇳 (@Rajeev_GoI)

ಇನ್ನಿತರ ಸುದ್ದಿಗಳಲ್ಲಿ ಆಪಲ್ ಕಳೆದ ತಿಂಗಳು ತನ್ನ ಇತ್ತೀಚಿನ ಐಫೋನ್ 14 ಮಾದರಿಗಳನ್ನು ಭಾರತದಲ್ಲಿ ತಯಾರಿಸಲು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಘೋಷಿಸಿತು, ಇದು ಜಾಗತಿಕವಾಗಿ ಐಫೋನ್‌ 14 ಅನಾವರಣಗೊಂಡ ಕೆಲವೇ ದಿನಗಳ ನಂತರ ಘೋಷಣೆ ಮಾಡಿತ್ತು. iPhone 14 Pro ಮತ್ತು iPhone 14 Pro Max ಸೆಪ್ಟೆಂಬರ್ 16 ರಂದು ಮಾರುಕಟ್ಟೆಗೆ ಬಂದಿದ್ದವು. ಹೊಸ ಐಫೋನ್‌ಗಳು 6 ಕೋರ್ ಸಿಪಿಯು ಮತ್ತು 5-ಕೋರ್ ಜಿಪಿಯು ಜೊತೆಗೆ ಇತ್ತೀಚಿನ ಎ16 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿವೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ನೀಡುವ ಪ್ರಮುಖ ವೈಶಿಷ್ಟ್ಯಗಳೆಂದರೆ ಕ್ರ್ಯಾಶ್ ಡಿಟೆಕ್ಷನ್, ಉಪಗ್ರಹದ ಮೂಲಕ ತುರ್ತು ಎಸ್‌ಓಎಸ್‌, ಹೊಸ 48ಎಂಪಿ ಮುಖ್ಯ ಕ್ಯಾಮೆರಾ ಮತ್ತು 'ಡೈನಾಮಿಕ್ ಐಲ್ಯಾಂಡ್' ಇಂಟರ್ಫೇಸ್ ನಂಥ ವಿಶೇಷತೆಗಳನ್ನು ಹೊಂದಿದೆ.

Tap to resize

Latest Videos

ಯಾವುದು ಬೆಸ್ಟ್? ಗೂಗಲ್ Pixel ವಾಚ್‌ನಾ OR ಆಪಲ್ ವಾಚ್‌ನಾ?

ಆಪಲ್‌ ಐಫೋನ್‌ 14 ಪ್ರೋ ಆರಂಭಿಕ ಬೆಲೆ ₹1,29,900. ಮೂಲ ಮಾದರಿಯು 128ಜಿಬಿ ಸ್ಟೋರೇಜ್‌ ಪ್ಯಾಕ್ ಇದರಲ್ಲಿ ಇರುತ್ತದೆ. ಇದರ ಉನ್ನತ-ಮಟ್ಟದ ರೂಪಾಂತರದಲ್ಲಿ 1TB ವರೆಗೆ ಹೋಗುತ್ತದೆ. ಅದೇ ರೀತಿ, ಐಫೋನ್‌ 14 ಪ್ರೋ ಮ್ಯಾಕ್ಸ್‌ ಮೂಲ ರೂಪಾಂತರಕ್ಕೆ Rs1,39,900 ಆರಂಭಿಕ ಬೆಲೆಯನ್ನು ಹೊಂದಿದೆ. ಇದು ನಾಲ್ಕು ಶೇಖರಣಾ ಮಾದರಿಗಳನ್ನು ಹೊಂದಿದೆ- 128ಜಿಬಿ, 256ಜಿಬಿ, 512ಜಿಬಿ ಮತ್ತು 1ಟಿಬಿ.

Apple ಫೋನುಗಳಲ್ಲಿ Lockdown mode, ಸ್ಪೈವೇರ್ ದಾಳಿಯಿಂದ ರಕ್ಷಣೆ

click me!