ಮರವೇರುವ ಬೈಕ್: ರೈತನ ಆವಿಷ್ಕಾರಕ್ಕೆ ಇಂಟರ್‌ನೆಟ್ ಬ್ರೇಕ್!

By Web Desk  |  First Published Jun 5, 2019, 3:56 PM IST

ತೆಂಗಿನ ಮರವೇರಲು ಿನ್ನು ಪಡಬೇಕಿಲ್ಲ ಕಷ್ಟ| ರೈತ ಕಂಡು ಹಿಡಿದ ಮರ ಏರುವ ಬೈಕ್ ಮಾದರಿಯ ಯಂತ್ರ| ಭಾರತೀಯರ ಜುಗಾಡ್‌ಗೆ ಜಾಗತಿಕ ಮನ್ನಣೆ ಸಿಗಬೇಕು| ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮರವೇರುವ ಯಂತ್ರ|
 


ಬೆಂಗಳೂರು(ಜೂ.05): ‘ಅವಶ್ಯಕತೆ ಆವಿಷ್ಕಾರದ ತಾಯಿ..’ ಎಂಬ ಗಾದೆ ಮಾತೊಂದಿದೆ. ಮಾನವ ತನ್ನ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ಹೊಸ ಆವಿಷ್ಕಾರ ಮಾಡುತ್ತಲೇ ಇರುತ್ತಾನೆ.

ಅದರಲ್ಲೂ ಭಾರತೀಯರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅನುಸರಿಸುವ ದಾರಿ ಬಹಳ ವಿಚಿತ್ರ ಮತ್ತು ಆಸಕ್ತಿದಾಯಕವಾಗಿರುತ್ತವೆ.

Tap to resize

Latest Videos

ಆಡು ಭಾಷೆಯಲ್ಲಿ ‘ಜುಗಾಡ್’ ಎಂದು ಕರೆಯಲಾಗುವ ಈ ಆವಿಷ್ಕಾರಗಳಿಗೆ ಜಾಗತಿಕ ಮನ್ನಣೆ ಸಿಕ್ಕಲ್ಲಿ ಖಂಡಿತ ಭಾರತೀಯರು ವಿಶ್ವವನ್ನು ಆಳುವುದರಲ್ಲಿ ಸಂಶಯವಿಲ್ಲ.

When you want to be a bike racer but become a farmer due to parental pressure. pic.twitter.com/OxkPKleoRa

— Bade Chote (@badechote)

ಅದರಂತೆ ರೈತನೋರ್ವ ತೆಂಗಿನ ಮರವೇರಲು ಕಂಡು ಹಿಡಿದಿರುವ ಬೈಕ್ ಮಾದರಿಯ ಯಂತ್ರವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ.

ತಂಗಿನ ಮರವೇರಲು ರೈತ ಕಂಡು ಹಿಡಿದ ಈ ಬೈಕ್ ಮಾದರಿಯ ಯಂತ್ರದ ಮೇಲೆ ಕುಳಿತರೆ ಸಾಕು, ತಾನೇ ಮರದ ತುದಿಗೆ ವ್ಯಕ್ತಿಯನ್ನು ಈ ಯಂತ್ರ ಕರೆದೊಯ್ಯುತ್ತದೆ.

ರೈತನ ಈ ಆವಿಷ್ಕಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಭಾರತೀಯರ ಸುಪ್ತ ಪ್ರತಿಭೆಗೆ ಶಹಬ್ಬಾಸಗಿರಿ ದೊರೆಯುತ್ತಿದೆ.

click me!