ಬೆಂಗಳೂರು (ಡಿ.24): ಗೂಗಲ್ ಮತ್ತು ಆ್ಯಪಲ್ ತಮ್ಮ ಪ್ಲೇಸ್ಟೋರ್‌ನಿಂದ ಜನಪ್ರಿಯ ಮೆಸೇಜಿಂಗ್ ಆ್ಯಪ್ ToTokನ್ನು ತೆಗೆದುಹಾಕಲಾಗಿದೆ. ಬಳಕೆದಾರರ ಬೇಹುಗಾರಿಕೆ ಮಾಡುವ ಆರೋಪ ToTok ವಿರುದ್ಧ ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಈ ಆ್ಯಪ್ ಯೂರೋಪ್, ಕೊಲ್ಲಿ, ಏಷ್ಯಾ, ಆಫ್ರಿಕಾ ಮತ್ತು ಉತ್ತರ ಅಮೆರಿಕಾದಲ್ಲಿ ಈ ಆ್ಯಪ್ ಬಹಳ ಜನಪ್ರಿಯವಾಗಿತ್ತು.
undefined
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಯುಎಇ ಸರ್ಕಾರ ಬಳಕೆದಾರರ ಚಲನವಲನ, ಸೌಂಡ್, ಫೋಟೋಸ್ ಮತ್ತು ಸಂಪರ್ಕಗಳ ಮೇಲೆ ನಿಗಾ ಇಡಲು ಬಳಸುತಿತ್ತು.
ಇದನ್ನೂ ಓದಿ | ನಿಮ್ಮ ಪ್ರತೀ ಹೆಜ್ಜೆ ಮೇಲೆ ಫೇಸ್ಬುಕ್ ಕಣ್ಗಾವಲು!...
ಕಡಿಮೆ ಸಮಯದಲ್ಲಿ ಮಿಲಿಯನ್‌ಗಟ್ಟಲೆ ಡೌನ್‌ಲೋಡ್ ಆಗಿರುವ ಈ ToTok, ಅಮೆರಿಕಾದಲ್ಲೂ ಕಳೆದ ವಾರ ಭಾರೀ ಹವಾ ಎಬ್ಬಿಸಿತ್ತು.
ToTok ಫಾಸ್ಟ್ ಮತ್ತು ಸುರಕ್ಷಿತ ಎಂದು ಕಂಪನಿಯು ಹೇಳಿಕೊಂಡಿತ್ತು. ಆದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯೇನೂ ನೀಡಿರಲಿಲ್ಲ. ವಾಟ್ಸಪ್ ಎಂಡ್-ಟು-ಎಂಡ್ ಎನ್ಕ್ರಿಪ್ಷನ್ ಹೊಂದಿದ್ದು, ಇದರಲ್ಲಿ ಯಾವುದೇ ಹಸ್ತಕ್ಷೇಪ ಬಹಳ ಕಷ್ಟ.
ToTok ಬೇಹುಗಾರಿಕೆ ನಡೆಸುತ್ತಿದೆ ಎಂದು ಅಮೆರಿಕಾ ಅಧಿಕಾರಿಗಳು ಕೂಡಾ ಖಚಿತಪಡಿಸಿದ್ದರು.
ತಾಂತ್ರಿಕ ಕಾರಣಗಳಿಂದ ToTok ಈಗ ಪ್ಲೇಸ್ಟೋರ್‌ಗಳಲ್ಲಿ ತಾತ್ಕಾಲಿಕವಾಗಿ ಲಭ್ಯವಿಲ್ಲ. ಈಗಾಗಲೇ ಡೌನ್‌ಲೋಡ್ ಮಾಡಿರುವವರಿಗೆ ಯಾವುದೇ ತೊಂದರೆಯಿಲ್ಲ ಎಂದು ಕಂಪನಿಯು ಹೇಳಿದೆ. ಬೇಹುಗಾರಿಕೆ ಆರೋಪದ ಬಗ್ಗೆ ಕಂಪನಿಯು ಯಾವುದೇ ಸ್ಪಷ್ಟೀಕರಣ ನೀಡಿಲ್ಲ.