ಇಂದು ಪೂರ್ಣ ಸೂರ್ಯಗ್ರಹಣ: ಭಾರತಕ್ಕಿಲ್ಲ ನೋಡುವ ಭಾಗ್ಯ!

By Web Desk  |  First Published Jul 2, 2019, 5:04 PM IST

ಇಂದು ವಿಶ್ವದಾದ್ಯಂತ ಸಂಪೂರ್ಣ ಸೂರ್ಯಗ್ರಹಣ| ಭಾರತದಲ್ಲಿ ಗೋಚರವಾಗದ ಸೂರ್ಯಗ್ರಹಣ| ನಾಸಾ ಟ್ವಿಟ್ಟರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ನೋಡುವ ಭಾಗ್ಯ| ರಾತ್ರಿ 10.25 ರ ಸಮಯಕ್ಕೆ ಸೂರ್ಯಗ್ರಹಣ ಆರಂಭ| ರಾತ್ರಿ 11.54ಕ್ಕೆ ಸಂಪೂರ್ಣ ಸೂರ್ಯಗ್ರಹಣ ಗೋಚರ|


ನವದೆಹಲಿ(ಜು.02): ಇಂದು ವಿಶ್ವದಾದ್ಯಂತ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಲಿದ್ದು, ಭಾರತದಲ್ಲಿ ಮಾತ್ರ ಸೂರ್ಯಗ್ರಹಣ ಗೋಚರವಾಗದಿರುವುದು ಖಗೋಳ ಪ್ರೀಯರಿಗೆ ನಿರಾಸೆ ತಂದಿದೆ.

ಭಾರತೀಯ ಕಾಲಮಾನದ ಪ್ರಕಾರ ಇಂದು ರಾತ್ರಿ 10.25 ರ ಸಮಯಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು, 11.54ಕ್ಕೆ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಲಿದೆ. ಈ ಕುರಿತು ಟ್ವೀಟ್ ಮಾಡಿರುವ ನಾಸಾ, ಸಂಪೂರ್ಣ ಸೂರ್ಯಗ್ರಹಣದ ಲೈವ್ ದೃಶ್ಯಾವಳಿಯನ್ನು ಕಣ್ತುಂಬಿಕೊಳ್ಳಲು ನಾಸಾದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ಗೆ ಭೇಟಿ ನೀಡಬಹುದು ಎಂದು ತಿಳಿಸಿದೆ.

¿Están listos? Are you ready? ☀️ 🌑 🌎

A total solar eclipse will be seen over parts of Argentina and Chile on July 2 and we're covering it live in English & Spanish. Here's how you can watch: https://t.co/GNe4WHzbr5 pic.twitter.com/3aphaj8YM7

— NASA (@NASA)

Tap to resize

Latest Videos

undefined

ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಚಂದ್ರನ ಪಾರ್ಶ್ವ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಈ ಖಗೋಳೀಯ ವಿದ್ಯಮಾನವನ್ನು ಸಂಪೂರ್ಣ ಸೂರ್ಯಗ್ರಹಣ ಎಂದು ಕರೆಯಾಲಾಗುತ್ತದೆ.

ಇಂದಿನ ಸಂಪೂರ್ಣ ಸೂರ್ಯಗ್ರಹಣ ಅರ್ಜೆಂಟಿನಾ, ಚಿಲಿ ಹಾಗೂ ಪೆಸಿಫಿಕ್ ಭೂಭಾಗದಲ್ಲಿ ಗೋಚರವಾಗಲಿದೆ. ಅದರಂತೆ ದ.ಅಮೆರಿಕ ಭೂಭಾಗದಲ್ಲಿ ಬ್ರೆಝಿಲ್, ಇಕ್ವೆಡಾರ್, ಉರುಗ್ವೆ ಮತ್ತು ಪೆರುಗ್ವೆ ದೇಶಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ.

click me!