ಥಾಮ್ಸನ್ ನ ಆ್ಯಂಡ್ರಾಯ್ಡ್ ಟಿವಿ ಮಾರುಕಟ್ಟೆಗೆ; ಇದರ ಠೀವಿಯೇ ಬೇರೆ!

By Web Desk  |  First Published Jun 21, 2019, 3:48 PM IST

ಬದುಕು ದಿನೇ ದಿನೇ ಸ್ಮಾರ್ಟ್ ಆಗುವತ್ತ ಚಲಿಸುತ್ತಿರುವ ಹೊತ್ತಿನಲ್ಲಿ ಭಾರತೀಯರ ಈ ಪಯಣಕ್ಕೆ ಜೊತೆಯಾಗಿದೆ ಥಾಮ್ಸನ್ ಸ್ಮಾರ್ಟ್ ಟಿವಿ ಸೀರಿಸ್. ಸ್ಮಾರ್ಟ್ ಟಿವಿ ಪಟ್ಟಿಯಲ್ಲಿ ಈಗಾಗಲೇ ಸೋನಿ, ಸ್ಯಾಮ್‌ಸಂಗ್, ಎಲ್‌ಜಿ ಮೊದಲಾದ ಬ್ರ್ಯಾಂಡ್‌ಗಳು ಇದ್ದರೂ ಥಾಮ್ಸನ್ ಬೆಲೆ ಮತ್ತು ಲೇಟೆಸ್ಟ್ ಅಪ್‌ಡೇಟ್‌ಗಳಲ್ಲಿ ಕೊಂಚ ಮುಂದೆ ಇದೆ.


'ಓಕೆ ಗೂಗಲ್, ಪ್ಲೇ ಮೂವಿ ಆನ್ ಯೂಟ್ಯೂಬ್.'

ಹಾಗಂತ ಹೇಳಿದರೆ ಸಾಕು ಟಿವಿಯಲ್ಲಿ ಯೂಟ್ಯೂಬ್‌ನಲ್ಲಿ ಸಿನಿಮಾ ಶುರುವಾಗುತ್ತದೆ. ನೀವು ಟಿವಿಗಿಂತ ಸ್ವಲ್ಪ ದೂರದಲ್ಲಿ ಕುಳಿತೇ ಈ ನಿರ್ದೇಶನವನ್ನು ನೀಡಬಹುದು. ಇಂಥಾ ಆ್ಯಂಡ್ರಾಯ್ಡ್ ಟಿವಿಯನ್ನು ಥಾಮ್ಸನ್ ಕಂಪನಿ ಬಿಡುಗಡೆ ಮಾಡಿದೆ.

Tap to resize

Latest Videos

4ಕೆ ಎಚ್‌ಡಿಆರ್ ಡಿಸ್‌ಪ್ಲೇ, ಡಾಲ್ಬಿ ಆಡಿಯೋ, ಡಿಟಿಎಸ್ ಟ್ರೂ ಸರೌಂಡ್ ಸೌಂಡ್ ಮೊದಲಾದ ವಿಶೇಷ ಫೀಚರ್‌ಗಳು ಇದರಲ್ಲಿವೆ. ಇವನ್ನು ಹೊರತಾಗಿಸಿ ಗಮನಿಸಲೇಬೇಕಾದ ಫೀಚರ್‌ಗಳೆಂದರೆ, ಇನ್‌ಬಿಲ್ಟ್ ನೆಟ್‌ಫ್ಲಿಕ್ಸ್, ಗೂಗಲ್ ಪ್ಲೇ ಸ್ಟೋರ್, ಯೂಟ್ಯೂಬ್ ಆಯ್ಕೆಗಳು. 

ಇಲ್ಲಿದೆ ಗೂಗಲ್ ಅಸಿಸ್ಟೆಂಟ್!

ಗೂಗಲ್ ಅಸಿಸ್ಟೆಂಟ್ ಸದ್ಯ ಪ್ರವರ್ಧಮಾನಕ್ಕೆ ಬರುತ್ತಿರುವ ಫೀಚರ್. ಇದು ಈಗಾಗಲೇ ಮೊಬೈಲ್ ಲೋಕಕ್ಕೆ ಕಾಲಿಟ್ಟಿದೆ. ಮೊದಲ ಬಾರಿಗೆ ಟಿವಿಯಲ್ಲಿ ಥಾಮ್ಸನ್ ಇದನ್ನು ಪರಿಚಯಿಸುತ್ತಿದೆ. ಆ ಮೂಲಕ ಇಡೀ ಮನೆಯ ನಿರ್ವಹಣೆಯನ್ನು ಸ್ಮಾರ್ಟ್ ಟಿವಿ ಮತ್ತು ಗೂಗಲ್ ಅಸಿಸ್ಟೆಂಟ್ ಸಹಾಯದಿಂದ ಸರಳ ಮಾಡಿಕೊಳ್ಳಬಹುದು. ನೀವು ವಾಯ್ಸ್ ಮೂಲಕ ಕೇಳಿದ ಯಾವುದೇ ಮಾಹಿತಿಯನ್ನು ಗೂಗಲ್ ಸರ್ಚ್ ಇಂಜಿನ್ ಸಹಾಯದಿಂದ ಕ್ಷಣಾರ್ಧದಲ್ಲಿ ಒದಗಿಸುವ ಸಾಮರ್ಥ್ಯ ಈ ಟಿವಿಗಳಿಗೆ ಇದೆ. ಹಾಗಾಗಿ ಈ ಸ್ಮಾರ್ಟ್ ಟಿವಿಗಳು ಮಲ್ಟಿ ಪರ್ಪಸ್ ಬಳಕೆಗೆ ಹೇಳಿ ಮಾಡಿಸಿದ ಆಯ್ಕೆ.

ಇದನ್ನೂ ಓದಿ | ಮೊಬೈಲ್ ಕಳ್ಳರ ಆಟಕ್ಕೆ ಬ್ರೇಕ್ ಹಾಕಲು ಕೇಂದ್ರದ ಹೊಸ ಪ್ಲ್ಯಾನ್ 

5000 ಆ್ಯಪ್‌ಗಳ ಆಯ್ಕೆ:
ಓರಿಯೋ 8.1 ಆ್ಯಂಡ್ರಾಯ್ಡ್ ವರ್ಷನ್ ಒಳಗೊಂಡಿರುವ ಈ ಟಿವಿಗಳು 2.5 GB RAM, 16 GB ROM ಸಾಮರ್ಥ್ಯ ಹೊಂದಿವೆ. ಹೀಗಾಗಿ ಗೂಗಲ್ ಪ್ಲೇ ಸ್ಟೋರ್ ಮೂಲಕ 5000ದಷ್ಟು ಆ್ಯಪ್‌ಗಳು, ಗೇಮ್‌ಗಳನ್ನು ಡೌನ್ ಲೋಡ್ ಮಾಡಿಕೊಂಡು ಬಳಕೆ ಮಾಡುವ ಅವಕಾಶ ಒದಗಿಸಲಾಗಿದೆ. ಏಕ ಕಾಲಕ್ಕೆ ಹತ್ತು ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ಗಳನ್ನು ಬ್ಲೂಟೂತ್ ಮೂಲಕ ಟಿವಿಗೆ ಕನೆಕ್ಟ್ ಮಾಡಿಕೊಳ್ಳುವ ಅವಕಾಶವೂ ಇಲ್ಲಿದೆ.

29,999ರಿಂದ ಆರಂಭ:
ಮೇಡ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ಭಾರತದಲ್ಲಿಯೇ ತಯಾರಾಗುತ್ತಿರುವ ಥಾಮ್ಸನ್ ಸ್ಮಾರ್ಟ್ ಟಿವಿಗಳ ಬೆಲೆ ಪ್ರಾರಂಭವಾಗುವುದು 29,999 ರು. ನಿಂದ. 43 ಇಂಚುಗಳ ಟಿವಿಗೆ ಈ ಬೆಲೆ ನಿಗದಿಯಾಗಿದ್ದರೆ, ಕ್ರಮವಾಗಿ 50 ಇಂಚು- 349,99; 55 ಇಂಚು- 38,999 ರು ಮತ್ತು 65 ಇಂಚಿನ ಟಿವಿಗೆ 59,999 ರು. ಬೆಲೆ ನಿಗದಿಪಡಿಸಲಾಗಿದೆ. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಟಿವಿಗಳ ಅಧಿಕೃತ ಮಾರಾಟವೂ ಆರಂಭವಾಗಿದೆ. 

ಸ್ಪೆಷಲ್ ಎಫೆಕ್ಟ್:
4ಕೆ ಎಚ್‌ಡಿಆರ್ ಡಿಸ್‌ಪ್ಲೇ ದೆಸೆಯಿಂದ 4ಕೆ ವಿಡಿಯೋಗಳು, ಡಾಲ್ಬಿ ಆಡಿಯೋ ಜೊತೆಗೆ ಡಿಟಿಎಸ್ ಟ್ರೂ ಸರೌಂಡ್ ಸೌಂಡ್ ಮೂಲಕ ಅದ್ಭುತವಾದ ಸಿನಿಮಾ ಅನುಭವವನ್ನು ಪಡೆಯಬಹುದು. ಅಲ್ಲದೇ ಇದರಲ್ಲಿ ವಿವಿಧ ಮೋಡ್ ಗಳನ್ನು ಕೊಡಲಾಗಿದ್ದು (ಮೂವಿ ಮೋಡ್, ಮ್ಯೂಸಿಕ್ ಮೋಡ್, ಗೇಮಿಂಗ್ ಮೋಡ್) ಆನ್ ಮಾಡಿದ ಮೋಡ್‌ಗೆ ತಕ್ಕಂತೆ ವಿಶೇಷ ಎಫೆಕ್ಟ್‌ಗಳನ್ನು ಆನಂದಿಸಬಹುದು.

ಇದನ್ನೂ ಓದಿ | ಹೊಸ ಉದ್ಯಮಕ್ಕೆ ಕೈ ಹಾಕಿದ ಫೇಸ್ಬುಕ್! ನಿಮಗೇನು ಲಾಭ?

ವಿಶೇಷ ಫೀಚರ್‌ಗಳು:

  • ಗೂಗಲ್ ಪ್ಲೇ ಸ್ಟೋರ್, ನೆಟ್‌ಫ್ಲಿಕ್ಸ್, ಕ್ರೋಮಾ, ಯೂಟ್ಯೂಬ್, ಹಾಟ್‌ಸ್ಟಾರ್ ಮೊದಲಾದ ಇನ್‌ಬಿಲ್ಟ್ ಆಯ್ಕೆಗಳು.
  • 2.5  GB RAM, 16 GB ROM
  • ಓರಿಯೋ 8.1 ಆ್ಯಂಡ್ರಾಯ್ಡ್.
  • 4ಕೆ ಎಚ್‌ಡಿಆರ್ ಡಿಸ್ಪ್ಲೆ, ಡಾಬ್ಲಿ ಆಡಿಯೋ, ಉತ್ತಮ ಸ್ಕ್ರೀನ್ ಶಾರ್ಪ್‌ನೆಸ್, ಹೈಪರ್ ರಿಯಾಲಿಸ್ಟಿಕ್ ಪಿಕ್ಚರ್ ಕ್ವಾಲಿಟಿ.
  • ಕ್ವಾಡ್ ಕೋರ್ A53 ಸಿಪಿಯು.
  • ಯಾವುದೇ ಆ್ಯಂಡ್ರಾಯ್ಡ್ ಫೋನ್ ನೊಂದಿಗೆ ಸಂಪರ್ಕ.
  • ಮೂವಿ ಮೋಡ್ ಮೂಲಕ ಗುಣಮಟ್ಟದ ಮೂವಿ ವಾಚಿಂಗ್ ಅನುಭವ.

ಬೆಲೆ:

  • 43 ಇಂಚುಗಳು: 29,999 ರು.
  • 50 ಇಂಚುಗಳು: 34,999 ರು.
  • 55 ಇಂಚುಗಳು: 38,999 ರು.
  • 65 ಇಂಚುಗಳು: 59,999 ರು.
click me!