ಕಳೆದುಕೊಂಡ ಮೊಬೈಲ್‌ಗೆ ಸಂಬಂಧಿಸಿದಂತೆ ಇನ್ನು ಸ್ಥಾಪಿತವಾಗಲಿರುವ ಐಎಂಇಐ ಸಂಖ್ಯೆ ಒಳಗೊಂಡ ದತ್ತಾಂಶ ಕೇಂದ್ರಕ್ಕೆ ದೂರು ನೀಡಿದರೆ, ಹುಡುಕುವುದು ಸುಲಭ. ಐನಿದು ಕೇಂದ್ರ? ಮೊಬೈಲ್ ಬಳಕೆ ಹೆಚ್ಚಾದ ಈ ಸಂದರ್ಭದಲ್ಲಿ ಈ ಕೇಂದ್ರದಿಂದ ಏನೇನು ನಿರೀಕ್ಷಿಸಬಹುದು?
ನವದೆಹಲಿ (ಜು.21): ದೇಶಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಮೊಬೈಲ್ ಕ್ಲೋನಿಂಗ್ ಮತ್ತು ಮೊಬೈಲ್ ಕಳ್ಳತನದ ಮೇಲೆ ಕಡಿವಾಣ ಹೇರಲು, ಪ್ರತಿಯೊಂದು ಮೊಬೈಲ್‌ಗಳಲ್ಲಿರುವ ಐಎಂಇಐ ಸಂಖ್ಯೆಯನ್ನು ಒಳಗೊಂಡ ದತ್ತಾಂಶ ಕೇಂದ್ರವೊಂದನ್ನು ಸ್ಥಾಪಿಸಲು ನಿರ್ಧರಿಸಿದೆ. ಹೀಗಾಗಿ ಈ ಕೇಂದ್ರ ಆರಂಭವಾದ ಬಳಿಕ ಮೊಬೈಲ್ ಕಳೆದುಕೊಂಡ ಈ ಕುರಿತ ನೊಂದಾಯಿತ ದೂರವಾಣಿ ಸಂಖ್ಯೆಗೆ ಸೂಕ್ತ ದಾಖಲೆಗಳೊಂದಿಗೆ ಮಾಹಿತಿ ನೀಡಿದರೆ, ಅಂಥ ಮೊಬೈಲ್‌ಗಳಿಗೆ ಯಾವುದೇ ಮೊಬೈಲ್ ನೆಟ್‌ವರ್ಕ್ನ ಸಿಗದಂತೆ ಮಾಡಲಾಗುತ್ತದೆ.
Infinis Hot 7 pro ಫೀಚರ್ಸ್ ಇಲ್ಲಿವೆ
undefined
ಏನಿದು ಐಎಂಇಐ?:
ಎಲ್ಲಾ ಮೊಬೈಲ್‌ಗಳಿಗೂ ಇಂಟರ್‌ನ್ಯಾಷನಲ್ ಮೊಬೈಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ (ಐಎಂಇಐ) ಎಂಬ 15 ಸಂಖ್ಯೆಯ ಗುರುತನ್ನು ನೀಡಿರಲಾಗಿರುತ್ತದೆ. ಮೊಬೈಲ್ ಖರೀದಿಸಿದ ಬಳಿಕ ಬಳಕೆದಾರರು ಈ ಮೊಬೈಲ್‌ನ ಸಂಖ್ಯೆಯನ್ನು ಬೇರೆಗೆ ದಾಖಲಿಸಿಟ್ಟು ಕೊಳ್ಳಬೇಕಾಗುತ್ತದೆ. ಮೊಬೈಲ್‌ನಲ್ಲಿ *#06#ಗೆ ಡಯಲ್ ಮಾಡಿದರೆ ಐಎಂಇಐ ನಂಬರ್ ಮೊಬೈಲ್‌ನಲ್ಲೇ ಮೂಡುತ್ತದೆ. ಮುಂದೆ ಯಾವುದೇ ಸಂದರ್ಭದಲ್ಲಿ ಮೊಬೈಲ್ ಕಳವಾದಲ್ಲಿ ಗ್ರಾಹಕರು, ಮೊದಲು ಪೊಲೀಸ್ ಠಾಣೆಗೆ ದೂರು ನೀಡಬೇಕು. ಬಳಿಕ ಕೇಂದ್ರ ದೂರಸಂಪರ್ಕ ಸಚಿವಾಲಯ ಸ್ಥಾಪಿಸಿರುವ ಹೆಲ್ಪ್‌ಲೈನ್‌ಗೆ ಕರೆ ಮಾಡಿದರೆ ಆಯಿತು. ಕೇಂದ್ರ ಸರ್ಕಾರವು, ತನ್ನ ದತ್ತಾಂಶದಲ್ಲಿನ ದಾಖಲೆಗಳನ್ನು ಪರಿಶೀಲಿಸಿ, ಕಳವಾದ ಮೊಬೈಲ್ ಅನ್ನು ಯಾರೂ ಬಳಸದಂತೆ ನೋಡಿಕೊಳ್ಳುತ್ತದೆ.
ಟೆಕ್ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಅಂದರೆ ಕಳವಾದ ಮೊಬೈಲ್‌ನಲ್ಲಿನ ಐಎಂಇಐ ಸಂಖ್ಯೆ ಆಧರಿಸಿ ಅಂಥ ಮೊಬೈಲ್‌ಗೆ ಯಾವುದೇ ಮೊಬೈಲ್ ನೆಟ್‌ವರ್ಕ್ ಸಿಗದಂತೆ ಮಾಡುತ್ತದೆ. ಹೀಗೆ ಮಾಡಿದಲ್ಲಿ ಸಹಜವಾಗಿಯೇ ಮೊಬೈಲ್ ಕಳ್ಳತನ ಮಾಡಿ ಅದನ್ನು ಮಾರುವವರ ಆಟಕ್ಕೆ ಬ್ರೇಕ್ ಬೀಳುತ್ತದೆ.