
ರಸ್ತೆ ಗುಂಡಿಗಳಿಂದ ಪ್ರತಿವರ್ಷ ಅದೆಷ್ಟೋ ವಾಹನ ಸವಾರರು ಮೃತಪಡುತ್ತಿರುವುದು ಗೊತ್ತಿರುವ ವಿಷಯವೇ. ಒಟ್ಟೂ ರಸ್ತೆ ಅಪಘಾತದ ಶೇಕಡಾ 2ರಷ್ಟು ಅಪಘಾತಗಳು ರಸ್ತೆಯ ಮೇಲೆ ಬಿದ್ದಿರುವ ಹೊಂಡಗಳಿಂದ ನಡೆಯುತ್ತಿವೆ ಎನ್ನುವ ಅಂಶವನ್ನು ಈಚೆಗೆ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿತ್ತು. ವರ್ಷಕ್ಕೆ ಏನಿಲ್ಲವೆಂದರೂ 5ಸಾವಿರಕ್ಕೂ ಅಧಿಕ ಅಪಘಾತಗಳು ಇದರಿಂದಲೇ ನಡೆಯುತ್ತಿವೆ. ಅದು ಈ ರಾಜ್ಯ ಆ ರಾಜ್ಯ ಅಂತೇನಿಲ್ಲ. ಎಲ್ಲಾ ರಾಜ್ಯಗಳಲ್ಲಿಯೂ ಇದು ಇದ್ದದ್ದೇ. ಇನ್ನು ಕರ್ನಾಟಕದ ಮಾತಂತೂ ಕೇಳುವುದೇ ಬೇಡ ಬಿಡಿ. ಯಾವ ಸರ್ಕಾರವೇ ಬರಲಿ, ರಸ್ತೆ ಗುಂಡಿಗಳ ಪಾಡು ಆ ದೇವರಿಗೇ ಪ್ರೀತಿ. ರಸ್ತೆ ರಿಪೇರಿಯಲ್ಲಿ ಸಿಗುವ ಲಂಚದ ಮಹಿಮೆ ಇದು ಎನ್ನುವ ಮಾತು ಬಹಳ ಹಿಂದಿನಿಂದಲೂ ಇದೆ. ಇತ್ತ ರಸ್ತೆ ರಿಪೇರಿ ಮಾಡಿ ಅತ್ತ ಮತ್ತೊಂದು ರಸ್ತೆ ರಿಪೇರಿ ಶುರು ಮಾಡುತ್ತಿದ್ದಂತೆಯೇ ಇತ್ತ ಮಾಡಿದ ರಸ್ತೆಗಳು ಕಿತ್ತೋಗಿರೋ ಉದಾಹರಣೆಗಳು ಸಾಕಷ್ಟು ಇವೆ.
ಇನ್ನು ಮಳೆಗಾಲದಲ್ಲಿ ಅಂತೂ ರಸ್ತೆಯ ಮೇಲಿರುವ ಹೊಂಡಗಳು ವಾಹನ ಸವಾರರಿಗೆ ಯಮಪಾಶವಾಗುತ್ತಿದೆ. ಕಳಪೆ ಗುಣಮಟ್ಟವೇ ಇದಕ್ಕೆ ಕಾರಣ, ಗುತ್ತಿಗೆದಾರರಿಂದ ಹಿಡಿದು ಮೇಲಿನ ಅಧಿಕಾರಿಗಳವರೆಗೂ ಲಂಚಾವತಾರವೇ ಇಲ್ಲಿ ತಾಂಡವ ಆಡುವ ಕಾರಣ, ಜನರ ಜೀವಕ್ಕೆ ಲೆಕ್ಕವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಿಯಾದರೂ ಒಂದು ಬಲಿಯಾದ ಮೇಲಷ್ಟೇ ಎಚ್ಚೆತ್ತುಕೊಳ್ಳುವ ಸರ್ಕಾರಗಳು, ಅಲ್ಲಿಯ ಗುಂಡಿಯನ್ನು ರಿಪೇರಿ ಮಾಡಿದಂತೆ ಮಾಡುವುದು, ಒಂದು ಮಳೆ ಬಿದ್ದ ಮೇಲೆ ಅದು ಮತ್ತೆ ಹಾಳಾಗುವುದು ಇವೆಲ್ಲವೂ ನಡೆಯುತ್ತಲೇ ಇದೆ. ರಸ್ತೆ ರಿಪೇರಿಗೆ ಗುಣಮಟ್ಟದ ಕಾಂಕ್ರೀಟ್ ಬಳಕೆ ಮಾಡುವುದು ಸಾಧ್ಯವಾದರೂ, ಲಂಚದ ಮೇಲೆ ಅಧಿಕಾರಗಳ ಕಣ್ಣು ಕುಕ್ಕಿರತ್ತಲ್ಲ, ರಸ್ತೆ ರಿಪೇರಿ ಮಾಡಿಸಿಬಿಟ್ಟರೆ, ರಿಪೇರಿಯ ದುಡ್ಡನ್ನು ಹೊಡೆಯುವುದು ಕಷ್ಟವಾಗುವ ಸಮಸ್ಯೆ ಅವರದ್ದು.
ಆಟೋದವನ ಜೊತೆ ಚೌಕಾಸಿಗೂ ತಂತ್ರಜ್ಞಾನ! ಚಾಟ್ಜಿಪಿಟಿ ಮಾತು ಕೇಳಿ 30 ರೂ.ಬಿಟ್ಟುಕೊಟ್ಟ ಡ್ರೈವರ್...
ಇನ್ನು ವಿಐಪಿಗಳು ಬರುತ್ತಾರೆ ಎಂದ ತಕ್ಷಣ ರಾತ್ರೋರಾತ್ರಿ ಅವರು ಹೋಗುವ ರಸ್ತೆಗಳಷ್ಟೇ ಝಗಮಗಿಸುತ್ತವೆ. ವಿದೇಶಿಗರು ಬಂದರೆ, ವ್ಹಾವ್ ಬೆಂಗಳೂರು, ವ್ಹಾವ್ ಮೈಸೂರು... ಹೀಗೆ ಹೋಗುವ ರಸ್ತೆಗಳನ್ನೆಲ್ಲಾ ಹಾಡಿ ಹೊಗಳಿ ಹೋಗುತ್ತಾರೆ. ಅವರು ಅತ್ತ ಹಾಡಿ ಹೊಗಳುತ್ತಿದ್ದಂತೆಯೇ ಇತ್ತ ಆ ರಸ್ತೆಗಳು ಮೇಲೆದ್ದು ಬಂದಿರುವ ಉದಾಹರಣೆಗಳೂ ಬೆಂಗಳೂರಿನಲ್ಲಿಯೇ ಸಾಕಷ್ಟಿವೆ. ಇಂಥ ಪರಿಸ್ಥಿತಿಯಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಅತಿ ಸುಲಭದಲ್ಲಿ ಈ ತಂತ್ರವನ್ನು ಉಪಯೋಗಿಸಿ ನಿಮಿಷಾರ್ಧದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬಹುದಾಗಿದೆ.
ವೈರಲ್ ವಿಡಿಯೋದಲ್ಲಿ ಇದು ಸ್ವೀಡನ್ ತಂತ್ರ ಎಂದು ಹೇಳಲಾಗಿದೆ. ಯಂತ್ರದ ಸಹಾಯದಿಂದ ರಸ್ತೆಯ ಮೇಲೆ ಬಿದ್ದಿರೋ ಗುಂಡಿಗಳನ್ನು ನಿಮಿಷದಲ್ಲಿಯೇ ಸರಿ ಮಾಡಲಾಗುತ್ತದೆ. ಅಲ್ಲೊಂದು ಗುಂಡಿ ಇತ್ತು ಎನ್ನುವುದು ಕೂಡ ಗೊತ್ತಾಗುವುದಿಲ್ಲ, ಅಷ್ಟು ಚೆನ್ನಾಗಿದೆ ಈ ತಂತ್ರಜ್ಞಾನ. ಆದರೆ ನಮ್ಮವರು ಇದಕ್ಕೆ ಮನಸ್ಸು ಮಾಡುತ್ತಾರೆಯೆ? ಆ ಮಾದರಿ, ಈ ಮಾದರಿ ಮಾಡುತ್ತೇವೆ ಎನ್ನುವ ರಾಜಕಾರಣಿಗಳು ಇಂಥ ತಂತ್ರಜ್ಞಾನದ ಸಹಾಯ ಮಾಡುವುದು ಇಂದಿನ ಲಂಚಾವತಾರದಲ್ಲಿ ಸಾಧ್ಯವಾಗುವ ಮಾತೇ ಎನ್ನುವುದು ಮಾತ್ರ ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ.
ಡ್ರೋನ್ನಲ್ಲಿ ಬಂದ ಹಾರ ವರನ ಕೊರಳ ಬದ್ಲು ಸಿಕ್ಕಾಕ್ಕೊಂಡಿದ್ದೇ ಬೇರೆ ಕಡೆ! ಮದುಮಗ ಕಕ್ಕಾಬಿಕ್ಕಿ... ವಿಡಿಯೋ ವೈರಲ್
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.