
ಪ್ರತಿನಿತ್ಯ ಕೋಟ್ಯಂತರ ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಎಷ್ಟೋ ಸಂದರ್ಭದಲ್ಲಿ ಯಾವ್ಯಾವುದೋ ಕಾರಣಕ್ಕೆ, ರೈಲು ವಿಳಂಬ ಆಗುವುದು ಇದೆ. ಆದರೆ ಆಗ ಜನರು ಸಾಮಾನ್ಯವಾಗಿ ಶಪಿಸುತ್ತಾ ಕುಳಿತುಕೊಳ್ತಾರೆ. ಇಲ್ಲವೇ ಮೊಬೈಲ್ ಹಿಡಿದು ಸ್ಕ್ರೋಲ್ ಮಾಡುತ್ತಾ ಇರುತ್ತಾರೆ. ಆದರೆ ಇಲ್ಲೊಬ್ಬ ಯುವಕ ಹಾಗೆ ಮಾಡದೇ ಒಂದು ಐಡಿಯಾ ಸೃಷ್ಟಿಸಿರುವ ಕಾರಣ, ಕುಳಿತಲ್ಲಿಯೇ 240 ಕೋಟಿ ರೂಪಾಯಿ ಒಡೆಯನಾದ. ಇದು where is my train ಆ್ಯಪ್ ಕಂಡುಹಿಡಿದಿರುವ ಅಹ್ಮದ್ ನಿಜಾಮ್ ಮೊಹೈದ್ದೀನ್ ಸ್ಟೋರಿ.
ರೈಲು ಎಲ್ಲಿದೆ ಎಂದು ನೋಡಲು ಸಾಮಾನ್ಯವಾಗಿ ಎಲ್ಲರೂ ಈ ಆ್ಯಪ್ ಬಳಸುವುದು ಇದೆ. ಇದರಿಂದ ರೈಲು ಎಲ್ಲಿ ಇದೆ, ಎಲ್ಲಿಗೆ ಬಂದಿದೆ. ನಮ್ಮ ಸ್ಟೇಷನ್ಗೆ ಬರಲು ಎಷ್ಟು ನಿಮಿಷ ಇದೆ. ಎಷ್ಟು ವಿಳಂಬ ಆಗತ್ತೆ... ಹೀಗೆ ಪ್ರತಿಯೊಂದನ್ನೂ ಇದರಲ್ಲಿ ನೋಡಬಹುದಾಗಿದೆ. ರೈಲಿನಲ್ಲಿ ಪ್ರಯಾಣಿಸುವವರಿಗೆ ಅದರಲ್ಲಿಯೂ ನೈಟ್ ಟ್ರೈನ್ ಆಗಿದ್ದರೆ, ಯಾವ ಸ್ಟೇಷನ್ಗೆ ಬಂದ್ವಿ ಎನ್ನೋದು ಗೊತ್ತಾಗದೇ ಕಕ್ಕಾಬಿಕ್ಕಿಯಾಗೋದು ಸಹಜ. ನಮ್ಮ ಸ್ಟೇಷನ್ ಹೊರಟು ಹೋಯ್ತಾ? ಇನ್ನು ಎಷ್ಟು ಹೊತ್ತಿದೆ ಯಾವುದೂ ತಿಳಿಯದೇ ಅವರಿವರನ್ನು ಕೇಳಬೇಕಾಗುತ್ತದೆ. ಆದರೆ ಈ ಆ್ಯಪ್ನಲ್ಲಿ ನಾವು ಯಾವ ಸ್ಟೇಷನ್ನಲ್ಲಿ ಇದ್ದೇವೆ. ನಮ್ಮ ಸ್ಟೇಷನ್ ಬರಲು ಎಷ್ಟು ಟೈಮ್ ಇದೆ ಎಲ್ಲವೂ ತಿಳಿಯುತ್ತದೆ. ಇದರ ಕ್ರೆಡಿಟ್ ಅಹ್ಮದ್ ನಿಜಾಮ್ ಮೊಹೈದ್ದೀನ್ ಅವರಿಗೆ ಸಲ್ಲುತ್ತದೆ.
2015ರಲ್ಲಿ ಒಂದು ದಿನ ಅವರು ರೈಲು ನಿಲ್ದಾಣದಲ್ಲಿ ತಮ್ಮ ರೈಲಿಗಾಗಿ ಕಾಯುತ್ತಿದ್ದರು. ರೈಲು ತುಂಬಾ ತಡವಾಗಿತ್ತು..ಆದರೆ ರೈಲು ಎಲ್ಲಿದೆ ಅನ್ನೋ ಸರಿಯಾದ ಮಾಹಿತಿ ಯಾರ ಬಳಿಯೂ ಇರಲಿಲ್ಲ. ಆಗ ಅವರ ಮನಸ್ಸಿಗೆ ಒಂದು ಐಡಿಯಾ ಬಂತು. ಮೊಬೈಲ್‌ನಲ್ಲೇ ರೈಲು ಎಲ್ಲಿದೆ ಅಂತ ಲೈವ್ ಆಗಿ ಗೊತ್ತಾದ್ರೆ ಎಷ್ಟು ಚೆನ್ನಾಗಿರುತ್ತೆ ಎಂದುಕೊಂಡು ಸ್ಟಾರ್ಟ್‌ಅಪ್ ಆರಂಭಿಸಿದರು. ಅದೇ Where Is My Train ಎಂಬ ಆ್ಯಪ್. ಹಾಗೆಂದು ಅದೇನೂ ಅವರಿಗೆ ಸುಲಭವಾಗಿರಲಿಲ್ಲ. ಏಕೆಂದ್ರೆ ಈಗಿನ ಹಾಗೆ ಆಗ ಎಲ್ಲೆಡೆ ಇಂಟರ್ನೆಟ್ ಇರಲಿಲ್ಲ. ಆದ್ದರಿಂದ ಅವರು GPS ಅಥವಾ ಇಂಟರ್‌ನೆಟ್ ಮೇಲೆ ಅವಲಂಬಿಸದೆ, ಸೆಲ್ ಟವರ್ ಡೇಟಾ ಬಳಸಿಕೊಂಡು ರೈಲು ಎಲ್ಲಿದೆ ಎಂದು ಪತ್ತೆಹಚ್ಚುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದರು.
ಇದರ ಫಲವಾಗಿ, ಇಂಟರ್‌ನೆಟ್ ಇಲ್ಲದಿದ್ದರೂ ಜನರು ತಮ್ಮ ರೈಲು ಎಲ್ಲಿದೆ ಎಂಬ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಲು ಆರಂಭಿಸಿದರು. ಇದು ಎಷ್ಟು ಫೇಮಸ್ ಆಯಿತು ಎಂದರೆ, ಗೂಗಲ್ ಕಂಪೆನಿ 250 ಕೋಟಿ ರೂಪಾಯಿ ಕೊಟ್ಟು ಇವರಿಂದ ಆ ಆ್ಯಪ್ ಖರೀದಿ ಮಾಡಿ, ಅದಕ್ಕೆ ಇನ್ನೊಂದಿಷ್ಟು ಫೀಚರ್ಗಳನ್ನು ತುಂಬಿಸಿದೆ. ಹೀಗೆ ರೈಲು ವಿಳಂಬವಾದದ್ದೇ ಈ ಯುವಕನಿಗೆ ಕೋಟ್ಯಧಿಪತಿ ಮಾಡಿತು. ಮಾತ್ರವಲ್ಲದೇ ಭಾರತದಾಚೆಯೂ ಇವರ ಕೀರ್ತಿ ಹರಡಿತು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.