ಡೊನಾಲ್ಡ್ ಟ್ರಂಪ್ ಟ್ವಿಟರ್‌ನಿಷೇಧ ಹಿಂಪಡೆಯುತ್ತೇನೆ ಎಂದ ಟೆಸ್ಲಾ ಸಿಇಓ ಎಲಾನ್ ಮಸ್ಕ್

By Suvarna News  |  First Published May 11, 2022, 5:09 PM IST

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಟ್ವಿಟರ್ ನಿಷೇಧವನ್ನು ಹಿಂತೆಗೆದುಕೊಳ್ಳುವುದಾಗಿ ಟೆಸ್ಲಾ ಸಿಇಓ ಎಲೋನ್ ಮಸ್ಕ್ ಮಂಗಳವಾರ ಹೇಳಿದ್ದಾರೆ


Elon Musk Latest News: ಟೆಸ್ಲಾದ ಸಿಇಓ ಹಾಗೂ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲೊ ಒಬ್ಬರಾದ ಎಲಾನ್ ಮಸ್ಕ್ ಫೈನಾನ್ಶಿಯಲ್   ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲಿನ ಟ್ವಿಟರ್‌ನ ನಿಷೇಧವನ್ನು ಹಿಂತಿರುಗಿಸುವುದಾಗಿ ಮಂಗಳವಾರ ನಡೆದ ಟೈಮ್ಸ್ ಫ್ಯೂಚರ್ ಆಫ್ ದಿ ಕಾರ್ ಕಾನ್ಫರೆನ್ಸ್‌ನಲ್ಲಿ ಮಾತನಾಡುವಾಗ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಟ್ವೀಟರ್ ಸ್ವಾಧೀನಪಡಿಸಿಕೊಳ್ಳಲು ಮಸ್ಕ್ $44 ಬಿಲಿಯನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಮತ್ತು ಅವರ ಮುಂದಿನ ಯೋಜನೆಗಳು ಇನ್ನೂ ಸ್ಪಷ್ಟವಾಗಿಲ್ಲ. 

ಮಂಗಳವಾರ, ಮಸ್ಕ್ ಮತ್ತು ಟ್ವಿಟರ್ ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆ ಅವರು ಶಾಶ್ವತ ನಿಷೇಧಗಳು "ಅತ್ಯಂತ ಅಪರೂಪ" ಎಂದು ನಂಬುತ್ತಾರೆ ಮತ್ತು ಬಾಟ್‌ಗಳನ್ನು ನಿರ್ವಹಿಸುವ ಅಥವಾ ಸ್ಪ್ಯಾಮನ್ನು ಹರಡುವ ಖಾತೆಗಳಿಗೆ ಮಾತ್ರ ನಿಷೇಧ ಹೇರಬೇಕೆಂದು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟರ್‌ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. 

Tap to resize

Latest Videos

ಇದನ್ನೂ ಓದಿ: ಟ್ವಿಟರ್ ಒಪ್ಪಂದ ಯಶಸ್ವಿಯಾಗದಿದ್ರೆ ಚಿಂತೆ ಬೇಡ, ಆ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡಿ; ಮಸ್ಕ್ ಗೆ ಪೂನಾವಾಲಾ ಸಲಹೆ

88 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ಟ್ರಂಪ್‌ ಖಾತೆಯ ಅಮಾನತು ಅವರ ಅವಧಿಯ ಅಂತ್ಯದ ಮೊದಲು ನಿಷೇಧಿಸಲಾಗಿತ್ತು. ಈ ಬಳಿಕ ಸಾಮಾಜಿಕ ಮಾಧ್ಯಮ ಕಂಪನಿಗಳು ಪ್ರಬಲ ಜಾಗತಿಕ ನಾಯಕರ ಖಾತೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಚರ್ಚೆಗಳು ಪ್ರಾರಂಬವಾಗಿದ್ದವು. 

ಜನವರಿ 6 ರಂದು ಯುಎಸ್ ಕ್ಯಾಪಿಟಲ್‌ನಲ್ಲಿ ನಡೆದ ಗಲಭೆಯ ನಂತರ ಟ್ರಂಪ್ ಅವರ ಖಾತೆಯನ್ನು ಟ್ವಿಟರ್‌ನಿಂದ ಶಾಶ್ವತವಾಗಿ ಅಮಾನತುಗೊಳಿಸಲಾಯಿತು. ಟ್ವಿಟರ್ ತನ್ನ ನಿರ್ಧಾರದಲ್ಲಿ "ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಅಪಾಯವನ್ನು" ಉಲ್ಲೇಖಿಸಿತ್ತು.

ಟ್ರುತ್ ಸೋಶಿಯಲ್ ಬಳಸುತ್ತೇನೆ: ಎಲಾನ್ ಮಸ್ಕ್ ಪ್ಲಾಟ್‌ಫಾರ್ಮ್ ಖರೀದಿಸಿ ತನ್ನ ಖಾತೆಯನ್ನು ಮರುಸ್ಥಾಪಿಸಿದರೂ ತಾನು ಟ್ವಿಟರ್‌ಗೆ ಹಿಂತಿರುಗುವುದಿಲ್ಲ ಎಂದು ಟ್ರಂಪ್ ಈ ಹಿಂದೆ ಫಾಕ್ಸ್ ನ್ಯೂಸ್‌ಗೆ ತಿಳಿಸಿದ್ದರು ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಪ್ರಾರಂಭಿಸಿದ ಟ್ವಿಟರ್ ತರಹದ ಪ್ಲಾಟ್‌ಫಾರ್ಮ್ ಟ್ರುತ್ ಸೋಶಿಯಲ್ ಎಂಬ ತಮ್ಮದೇ ಆದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನನ್ನು ಬಳಸುವುದಾಗಿ ಹೇಳಿದ್ದರು. ಫೆಬ್ರವರಿ ಕೊನೆಯಲ್ಲಿ ಮತ್ತು ಇದರಲ್ಲಿ ಬಳಕೆದಾರರು ಟ್ವೀಟ್‌ಗಳ ಬದಲಿಗೆ "ಸತ್ಯ"ಗಳನ್ನು ಪೋಸ್ಟ್ ಮಾಡುತ್ತಾರೆ.

ಇದನ್ನೂ ಓದಿ: ಸಾವಿನ ಬಗ್ಗೆ ಎಲಾನ್ ಮಸ್ಕ್ ಟ್ವೀಟ್: ತಾಯಿಯ ಬುದ್ಧಿವಾದದ ಬಳಿಕ 'Sorry' ಎಂದ ಟೆಸ್ಲಾ ಸಿಇಓ

ಟ್ರಂಪ್‌ ಹೊಸ ಪ್ಲಾಟ್‌ಫಾರ್ಮ್ ಟ್ರಂಪ್ ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್‌ನ ಒಡೆತನದಲ್ಲಿದೆ, ಇದು ಮಾಜಿ ರಿಪಬ್ಲಿಕನ್ ಕಾಂಗ್ರೆಸ್‌ಮನ್ ಡೆವಿನ್ ನ್ಯೂನ್ಸ್ ನೇತೃತ್ವದಲ್ಲಿದೆ. 

ಟ್ವೀಟರ್‌ ಸ್ವಾಧೀನ ಯಾವಾಗ?: ಸಮ್ಮೇಳನದ ಸಂದರ್ಭದಲ್ಲಿ, ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದವನ್ನು "ಅತ್ಯುತ್ತಮ ಸನ್ನಿವೇಶದಲ್ಲಿ" ಎರಡರಿಂದ ಮೂರು ತಿಂಗಳಲ್ಲಿ ಮಾಡಬಹುದು ಎಂದು ಹೇಳಿದ್ದಾರೆ. ಆದರೆ ಒಪ್ಪಂದವನ್ನು ಅನುಮೋದಿಸಲು ಟ್ವಿಟರ್ ಇನ್ನೂ ಷೇರುದಾರರ ಮತಕ್ಕಾಗಿ ಪ್ರಾಕ್ಸಿಯನ್ನು ಸಲ್ಲಿಸಿಲ್ಲ ಮತ್ತು ಇನ್ನೂ ಬಾಕಿ ಉಳಿದಿರುವ ಪ್ರಶ್ನೆಗಳನ್ನು ಪರಿಹರಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದಿನ ಮಂಗಳವಾರ, ಟ್ವಿಟರ್ ಷೇರುಗಳು ಸ್ಟಾಕ್ ಮಾರುಕಟ್ಟೆ ಮೊದಲ ಬಾರಿಗೆ ಮಟ್ಟಕ್ಕೆ ಕುಸಿದಿದ್ದವು, ಹೀಗಾಇ ಅವರು ಮೂಲತಃ ಒಪ್ಪಿಕೊಂಡಂತೆ ಮಸ್ಕ್ $ 44 ಶತಕೋಟಿಗೆ ಸ್ವಾಧೀನಪಡಿಸಿಕೊಳ್ಳುವುದು ಅಸಂಭವವಾಗಿದೆ ಸೂಚನೆ ನೀಡಿತ್ತು ಎಂಬುದು ವಿಶ್ಲೇಷಕರ ಅಭಿಪ್ರಾಯ 

click me!