*ಜಗತ್ತಿನ ನಂ.1 ಶ್ರೀಮಂತನ ಸಾಹಸಶೀಲತೆಗೆ ಈ ಗೌರವ
*ಪ್ರತಿಷ್ಠಿತ ಟೈಮ್ ಮ್ಯಾಗಝೀನ್ ವರ್ಷದ ವ್ಯಕ್ತಿ ಎಲಾನ್
*ಟೈಮ್ ನಿಯತಕಾಲಿಕೆಯ ಪ್ರಧಾನ ಸಂಪಾದಕರ ನುಡಿʼ
ನ್ಯೂಯಾರ್ಕ್ (ಡಿ. 14) : ವಿಶ್ವದ ನಂ.1 ಶ್ರೀಮಂತ ಖ್ಯಾತಿಯ ಟೆಸ್ಲಾ (Tesla) ಕಂಪನಿಯ ಸಂಸ್ಥಾಪಕ ಸಿಇಒ ಎಲಾನ್ ಮಸ್ಕ್ (Elon Musk) ಅವರು ಅಮೆರಿಕದ ಪ್ರತಿಷ್ಠಿತ ‘ಟೈಮ್’ ನಿಯತಕಾಲಿಕೆಯ ವರ್ಷದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ( Person of the Year). ಮಸ್ಕ್ ಅವರ ನೇತೃತ್ವದ ಎಲೆಕ್ಟ್ರಿಕ್ ಕಾರು ಕಂಪನಿ ವಿಶ್ವದಲ್ಲೇ ಅತ್ಯಮೂಲ್ಯದ ಕಾರು ಕಂಪನಿ ಎಂಬ ಕೀರ್ತಿಗೆ ಭಾಜನವಾಗಿತ್ತು. ಪ್ರಪಂಚದಲ್ಲಿರುವ ಸವಾಲುಗಳು ಮತ್ತು ಬಿಕ್ಕಟ್ಟುಗಳಿಗೆ ಉತ್ತಮ ಪರಿಹಾರಗಳನ್ನು ಹುಡುಕುವುದರ ಜತೆಗ ಸಮಾಜದಲ್ಲಿ ಹೆಚ್ಚಿನ ಧೈರ್ಯಶಾಲಿ ಪ್ರೊಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ಮಸ್ಕ್ ಅವರನ್ನು ಟೈಮ್-2021ರ ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಟೈಮ್ ನಿಯತಕಾಲಿಕೆಯ ಪ್ರಧಾನ ಸಂಪಾದಕ ಎಡ್ವರ್ಡ್ ಫೆಲ್ಸೆಂಥಲ್ (Edward Felsenthal) ಅವರು ತಿಳಿಸಿದ್ದಾರೆ.
2002ರಲ್ಲಿ ಸ್ಥಾಪನೆ ಮಾಡಿದ ಸ್ಪೇಸ್‌ಎಕ್ಸ್‌ನಿಂದ (SpaceX) ಹಿಡಿದು ಪರ್ಯಾಯ ಇಂಧನ ಕಂಪನಿಯಾದ ಸೋಲಾರ್ ಸಿಟಿ (Solar City) ಹಾಗೂ ವಿಶ್ವದಲ್ಲೇ ಅತ್ಯಮೂಲ್ಯವಾದ ಕಾರು ಕಂಪನಿಯನ್ನು ಮಸ್ಕ್ ಹೊಂದಿದ್ದಾರೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಕಂಪನಿ ಪರ ಹೂಡಿಕೆ ಮಾಡುವ ಸಾಹಸಿ ನಿಷ್ಠಾವಂತ ಹೂಡಿಕೆದಾರರ ಬಳಗವನ್ನು ಹೊಂದಿದ್ದಾರೆ ಎಂದು ಶ್ಲಾಘಿಸಲಾಗಿದೆ. 22 ಲಕ್ಷ ಕೋಟಿ ರು. (300 ಬಿಲಿಯನ್ ಡಾಲರ್)ನೊಂದಿಗೆ ಮಸ್ಕ್ ಅಮೆಜಾನ್ ಸಂಸ್ಥಾಪಕ ಜೆಫ್ ಬಿಜೋಸ್ ಅವರನ್ನು ಹಿಂದಿಕ್ಕಿ, ಜಗತ್ತಿನ ನಂ.1 ಶ್ರೀಮಂತರಾಗಿದ್ದರು.
undefined
Elon Musk () is TIME's 2021 Person of the Year https://t.co/8Y5BhIldNs pic.twitter.com/B6h6rndjIh
— TIME (@TIME)
ಶ್ರೀಮಂತ ವ್ಯಕ್ತಿಗೆ ಸ್ವಂತ ಮನೆ ಇಲ್ಲ !
"ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗೆ ಸ್ವಂತ ಮನೆ ಇಲ್ಲ ಮತ್ತು ಇತ್ತೀಚೆಗೆ ತಮ್ಮ ಸಂಪತ್ತನ್ನು ಕೂಡ ಮಾರುತ್ತಿದ್ದಾರೆ" ಎಂದು ಟೈಮ್ ಮ್ಯಾಗಝೀನ್ ಹೇಳಿದೆ. "ಅವರು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುತ್ತಾರೆ ಮತ್ತು ಸೂರ್ಯನನ್ನೂ ಅಧ್ಯಯನಕ್ಕೆ ಬಳಸಿಕೊಳ್ಳುತ್ತಾರೆ; ಅವರು ಅನಿಲವನ್ನು ಬಳಸದ ಮತ್ತು ಚಾಲಕನ ಅಗತ್ಯವಿಲ್ಲದ ಕಾರನ್ನು ಓಡಿಸುತ್ತಾರೆ. ಅವರ ಒಂದು ಸನ್ನೆಯಿಂದ ಷೇರು ಮಾರುಕಟ್ಟೆಯು ಗಗನಕ್ಕೇರುತ್ತದೆ ಅಥವಾ ದೊಡ್ಡ ಬದಲಾವಣೆ ಕಾಣುತ್ತದೆ. ಅವರ ಪ್ರತಿ ಮಾತನ್ನು ಅವರ ನಿಷ್ಠಾವಂತ ಹೂಡಿಕೆದಾರರ ಬಳಗ ಪಾಲಿಸುತ್ತದೆ. ಅವರು ಮಂಗಳನ ಕನಸು ಕಾಣುತ್ತಾರೆ. ಇತ್ತೀಚೆಗೆ, ಎಲೋನ್ ಮಸ್ಕ್ ಲೈವ್-ಟ್ವೀಟ್ ಮಾಡಲು ಇಷ್ಟಪಡುತ್ತಿದ್ದಾರೆ," ಎಂದು ಟೈಮ್ ಹೇಳಿದೆ.
ಇತಿಹಾಸದಲ್ಲಿಯೇ ಶ್ರೀಮಂತ ಖಾಸಗಿ ಪ್ರಜೆ!
"ಅವರ ಸ್ಟಾರ್ಟ್‌ಅಪ್ ರಾಕೆಟ್ ಕಂಪನಿ, ಸ್ಪೇಸ್‌ಎಕ್ಸ್, ಬೋಯಿಂಗ್ ಮತ್ತು ಇತರರನ್ನು ಹಿಂದಿಕ್ಕಿ ಅಮೆರಿಕದ ಬಾಹ್ಯಾಕಾಶ ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಳ್ಳಲು ಮುನ್ನಡೆದಿದೆ. ಅವರ ಕಾರ್ ಕಂಪನಿ, ಟೆಸ್ಲಾ, ಮಲ್ಟಿಬಿಲಿಯನ್-ಡಾಲರ್ ಎಲೆಕ್ಟ್ರಿಕ್-ವಾಹನ ಮಾರುಕಟ್ಟೆಯ ಮೂರನೇ ಎರಡರಷ್ಟು ಪಾಲನ್ನುಹೊಂದಿದೆ ಮತ್ತು ಇದು $1 ಟ್ರಿಲಿಯನ್ ಮೌಲ್ಯದ್ದಾಗಿದೆ. $250 ಶತಕೋಟಿಗಿಂತ ಹೆಚ್ಚಿನ ನಿವ್ವಳ ಮೌಲ್ಯದೊಂದಿಗೆ ಇತಿಹಾಸದ ದಾಖಲೆಗಳಲ್ಲಿ ಇಲಾನ್ ಶ್ರೀಮಂತ ಖಾಸಗಿ ಪ್ರಜೆಯಾಗಿದ್ದಾರೆ" ಎಂದು ಟೈಮ್ ಹೇಳಿದೆ.
"ನಮ್ಮ ಗ್ರಹವನ್ನು ಉಳಿಸಲು ಮತ್ತು ನಮಗೆ ವಾಸಿಸಲು ಹೊಸ ಗ್ರಹವನ್ನು ಹುಡುಕಾಡಲು ಬಯಸುವ ವ್ಯಕ್ತಿ: ಅತ್ಯುತ್ತಮ ಪ್ರತಿಭೆ, ದಾರ್ಶನಿಕ, ಕೈಗಾರಿಕೋದ್ಯಮಿ, ಶೋಮ್ಯಾನ್ ಎಂದು ಟೈಮ್ ಎಲಾನ್‌ರನ್ನು ಶ್ಲಾಘಿಸಿದೆ. "ಅವರು ರೋಬೋಟ್‌ಗಳು ಮತ್ತು ಸೌರಶಕ್ತಿ, ಕ್ರಿಪ್ಟೋಕರೆನ್ಸಿ ಮತ್ತು ಹವಾಮಾನ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದಾರೆ. ಜತೆಗೆ ಬ್ರೇನ್ ಕಂಪ್ಯೂಟರ್‌ನಿಂದ ಕೃತಕ ಬುದ್ಧಿಮತ್ತೆವರೆಗೆ ಮತ್ತು ಜನರನ್ನು ಮತ್ತು ಸರಕುಗಳನ್ನು ಸೂಪರ್ ವೇಗದಲ್ಲಿ ಸಾಗಿಸಲು ಭೂಗತ ಸುರಂಗಗಳ ವರೆಗೆ ಹಲವು ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ" ಎಂದು ಟೈಮ್ ಮ್ಯಾಗಝೀನ್ ವರದಿ ಮಾಡಿದೆ.
ಇದನ್ನೂ ಓದಿ:
1) Google:ಅಮೆರಿಕದಲ್ಲಿ ಉದ್ಯೋಗಿಗಳ ವೇತನ ಹೊಂದಾಣಿಕೆಗೆ ಮುಂದಾದ ಗೂಗಲ್!
2) Elon Musk Tweet: ಕೋಟಿ ಗಳಿಸುವ ಜಾಬ್ ಬಿಟ್ಟು ಈ ಕೆಲಸ ಮಾಡ್ತಾರಂತೆ ಮಸ್ಕ್!
3) Satellite Internet: ಭಾರತದಲ್ಲಿ ಅನುಮತಿ ಪಡೆಯಲಿದೆ ಎಲಾನ್ ಮಸ್ಕ್ ಕಂಪನಿ Starlink