
ಬೆಂಗಳೂರು(ಜೂನ್.8) ಟಾಟಾ ಮೋಟಾರ್ 150ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಹೀಗಾಗಿ ಗ್ರಾಹಕರಿಗೆ ಬಂಬರ್ ಕೊಡುಗೆ ಘೋಷಿಸಿದೆ. ಟಾಟಾ ಕಾರು ಕೊಳ್ಳುವ ಗ್ರಾಹಕರಿಗೆ ಗರಿಷ್ಠ 1 ಲಕ್ಷ ರೂಪಾಯಿವರೆಗೆ ರಿಯಾಯಿತಿ , ಕೇವಲ 1 ರೂಪಾಯಿಗೆ ಕಾರಿನ ಇನ್ಶೂರೆನ್ಸ್ ಸೌಲಭ್ಯದ ಜೊತೆಗೆ ಎಕ್ಸ್‌ಚೇಂಜ್ ಸವಲತ್ತುಗಳನ್ನ ಟಾಟಾ ಘೋಷಿಸಿದೆ.
ಟಾಟಾದ ಯಾವುದೇ ಕಾರು ಕೊಳ್ಳುವ ಗ್ರಾಹಕರಿಗೆ ಈ ಸೌಲಭ್ಯ ಅನ್ವಯವಾಗಲಿದೆ. ಆದರೆ ಈ ಕೊಡುಗೆ ಜೂನ್ 25 ವರೆಗೆ ಮಾತ್ರ ಲಭ್ಯ. ಹೀಗಾಗಿ ಟಾಟಾ ಕಾರು ಕೊಳ್ಳುವ ಗ್ರಾಹಕರಿಗೆ ಇದು ಸೂಕ್ತ ಸಮಯ. 1 ಲಕ್ಷದ ವರೆಗೆ ರಿಯಾತಿ ಜೊತೆಗೆ ಕೇವಲ 1 ರೂಪಾಯಿಗೆ ಒಂದು ವರ್ಷದ ಇನ್ಶೂರೆನ್ಸ್‌ನಿಂದ ಟಾಟಾ ಕಾರು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರಪಾಲು ಪಡೆಯಲಿದೆ.
ಟಾಟಾ ಮೋಟಾರ್ ಸಂಸ್ಥೆ 150ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಇದರ ಜೊತೆಗೆ ಟಾಟಾ ಸಂಸ್ಥೆಯ ಸಂತಸ ಕೂಡ ಇಮ್ಮಡಿಗೊಂಡಿದೆ. ಕಾರಣ 2018ರಲ್ಲಿ ಟಾಟಾ ಕಾರುಗಳ ಮಾರಾಟದಲ್ಲಿ ಶೇಕಡಾ 60 ರಷ್ಟು ಏರಿಕೆಯಾಗಿದೆ. ಹೀಗಾಗಿ ಇದೀಗ ಗ್ರಾಹಕರಿಗೆ ಬಾರಿ ಕೊಡುಗೆ ನೀಡಿದೆ.
ಟಾಟಾ ಟಿಯಾಗೋ, ಟಿಗೋರ್, ನೆಕ್ಸಾನ್ ಹಾಗೂ ಹೆಕ್ಸಾನ್ ಕಾರುಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆಯಿದೆ. ಶೀಘ್ರದಲ್ಲೇ ಇನ್ನಷ್ಟು ಕಾರುಗಳನ್ನ ಟಾಟಾ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.