
ಬೆಂಗಳೂರು : ಕೋಟಕ್ ಹಾಗೂ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್ . ಇನ್ನು ಮುಂದೆ ಈ ಬ್ಯಾಂಕ್ ಗ್ರಾಹಕರು ತಮ್ಮ ವ್ಯಹಹಾರದ ಬಗ್ಗೆ ಮಾಹಿತಿಯನ್ನು ವಾಟ್ಸಾಪ್ ಮೂಲಕ ಪಡೆದುಕೊಳ್ಳಬಹುದು.
ತನ್ನ ಗ್ರಾಹಕರಿಗೆ ಈ ಬ್ಯಾಂಕ್‌ಗಳು ಒಂದು ಅಧಿಕೃತ ವಾಟ್ಸಾಪ್ ನಂಬರ್ ನ್ನು ಗ್ರಾಹಕರಿಗೆ ನೀಡುತ್ತವೆ. ಈ ಸಂಖ್ಯೆಯಿಂದ ಬ್ಯಾಂಕ್ ನೊಂದಿಗೆ ಸಂವಹನ ನಡೆಸಬಹುದು. ಸೇವೆಗಳ ಬಗ್ಗೆ, ಪ್ಯಾನ್ ಹಾಗೂ ಮೊಬೈಲ್ ನಂಬರ್ ಅಪ್ ಡೇಟ್ ಮಾಡುವ ಬಗ್ಗೆ, ಯಾವುದೇ ರೀತಿಯ ಕಾರ್ಯ ಚಟುವಟಿಕೆಗಳು, ಪಾಸ್ ಬುಕ್ ಅಪ್‌ಡೇಟ್, ಬದಲಾವಣೆ, ಬ್ರಾಂಚ್ ಸಂಬಂಧಿತ ಬದ ಲಾವಣೆಗಳು ಯಾವುದೇ ಮಾಹಿತಿಯನ್ನೂ ಕೂಡ ವಾಟ್ಸಾಪ್ ಮೂಲಕ ಪಡೆಯಲು ಅವಕಾಶ ಒದಗಲಿದೆ.
ಇನ್ನು ಈ ಬಗ್ಗೆ ಮಾತನಾಡಿದ ಕೋಟಕ್ ಬ್ಯಾಂಕ್ ಡಿಜಿಟಲ್ ಆಫಿಸರ್ ದೀಪಕ್ ಶರ್ಮಾ ಈ ರೀತಿಯ ಸೇವೆಯಿಂದ ಬ್ಯಾಂಕ್ ಗ್ರಾಹಕರು ಸುಲಭವಾಗಿ ಬ್ಯಾಂಕ್ ವ್ಯವಹಾರ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಶೀಘ್ರದಲ್ಲೇ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಆದರೆ ಎಂದಿನಿಂದ ಈ ನೂತನ ಸೇವೆ ಆರಂಭವಾಗಲಿದೆ ಎನ್ನುವ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಹೊರಬಿದ್ದಿಲ್ಲ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.