Bulli Bai Blocked: ಗಿಟ್‌ಹಬ್‌ನಲ್ಲಿ ಮುಸ್ಲಿಂ ಮಹಿಳೆಯರ ಹರಾಜು: ಮತ್ತೊಂದು Sulli Deals ಪ್ರಕರಣ?

By Suvarna News  |  First Published Jan 2, 2022, 2:57 PM IST

‘Bulli Bai’ ಎಂಬ ಆ್ಯಪ್‌ನಲ್ಲಿ ನೂರಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ದೆಹಲಿ ಮತ್ತು ಮುಂಬೈ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.


Tech Desk: ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ಗಿಟ್‌ಹಬ್ (GitHub) ಬಳಸಿ ಮುಸ್ಲಿಂ ಮಹಿಳೆಯರ (Muslim Women) ಫೋಟೋಗಳನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ ಸುಮಾರು ಆರು ತಿಂಗಳ ನಂತರ, ಅಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. 'ಬುಲ್ಲಿ ಬಾಯಿ' (Bulli Bai)  ಎಂಬ ಆ್ಯಪ್‌ನಲ್ಲಿ ನೂರಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ಈ ಬೆನ್ನಲ್ಲೇ ಹಲವರು ಸಾಮಾಜಿಕ ಜಾಲತಾಣಗಳಲ್ಲಿ (Social Media) ಪೊಲೀಸರಿಗೆ ದೂರು ನೀಡಿದ್ದಾರೆ.

ಟ್ವಿಟರ್‌ನಲ್ಲಿ, ಬುಲ್ಲಿ ಬಾಯಿ ಆ್ಯಪ್‌ನಲ್ಲಿ ಹೆಸರಿಸಲಾದ ಮಹಿಳೆಯರಲ್ಲಿ ಒಬ್ಬರಾದ ಪತ್ರಕರ್ತರೊಬ್ಬರು, ಗಿಟ್‌ಹಬ್‌ನಲ್ಲಿ 'ಸುಲ್ಲಿ ಡೀಲ್ಸ್' ರೀತಿಯಲ್ಲಿ 'ಬುಲ್ಲಿ ಬಾಯಿ' ಎಂಬ ಗುಂಪನ್ನು ರಚಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ, ಅದು ಅವರ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಸಂಗ್ರಹಿಸುತ್ತದೆ ಮತ್ತು ಜನರು ತಮ್ಮ "ಹರಾಜಿನಲ್ಲಿ" (Auction) ಭಾಗವಹಿಸಲು ಪ್ರೋತ್ಸಾಹಿಸುತ್ತದೆ ಎಂದು ಹೇಳಿದ್ದಾರೆ.

Tap to resize

Latest Videos

ಅಪರಾಧಿಯ ಖಾತೆಯನ್ನು GitHub ನಿರ್ಬಂಧಿಸಿದೆ: ಸಚಿವ!

ಈ ಬಗ್ಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಮಾತನಾಡಿ, ಅಪರಾಧಿಯ ಖಾತೆಯನ್ನು GitHub ನಿರ್ಬಂಧಿಸಿದೆ ಮತ್ತು ಪೊಲೀಸರು ಮತ್ತು ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT) ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. "ಇಂದು ಬೆಳಿಗ್ಗೆಯೇ ಬಳಕೆದಾರರನ್ನು ನಿರ್ಬಂಧಿಸುವುದನ್ನು GitHub ದೃಢಪಡಿಸಿದೆ. CERT ಮತ್ತು ಪೊಲೀಸ್ ಅಧಿಕಾರಿಗಳು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ" ಎಂದು ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.

 

GitHub confirmed blocking the user this morning itself.
CERT and Police authorities are coordinating further action. https://t.co/6yLIZTO5Ce

— Ashwini Vaishnaw (@AshwiniVaishnaw)

 

ಇದನ್ನೂ ಓದಿ'ಸುಲ್ಲಿ ಡೀಲ್ಸ್' Appನಲ್ಲಿ ಮುಸ್ಲಿಂ ಯುವತಿಯರ ಹರಾಜು: RSS ವಿರುದ್ಧ DAWN ಗಂಭೀರ ಆರೋಪ!

ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವಿಟರ್‌ನಲ್ಲಿ ಮಹಿಳೆಯರಿಗೆ ಬೆಂಬಲ ನೀಡಿದ್ದಾರೆ. ಅವರು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಈ ವಿಷಯದ ಬಗ್ಗೆ ಗಮನ ಹರಿಸುವಂತೆ ಕೇಳಿಕೊಂಡಿದ್ದಾರೆ.

'ಇದನ್ನ ನಿರ್ಲಕ್ಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿ'

"ಅಸಹ್ಯಕರ. ಅಧಿಕಾರಿಗಳ ಕ್ರಮ ಕೈಗೊಳ್ಳದಿರುವುದು ಈ ಅಪರಾಧಿಗಳನ್ನು ನಿರ್ಲಜ್ಜರನ್ನಾಗಿಸಿದೆ. @AshwiniVaishnaw @NCWIndia @DelhiPolice ದಯವಿಟ್ಟು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಿ" ಎಂದು ಒವೈಸಿ ಟ್ವೀಟ್ ಮಾಡಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಿಯಾಂಕಾ ಚತುರ್ವೇದಿ “ಇಂತಹ ಅತಿರೇಕದ ಸ್ತ್ರೀದ್ವೇಷ ಮತ್ತು  #ಸುಲ್ಲಿಡೀಲ್‌ ವೇದಿಕೆಗಳ ಮೂಲಕ ಮಹಿಳೆಯರನ್ನು ಕೋಮುವಾದಿ ಗುರಿಯಾಗಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಪದೇ ಪದೇ ಕೇಳಿದೆ ಸನ್ಮಾನ್ಯ ಐಟಿ ಸಚಿವ @AshwiniVaishnaw ji ಅವರನ್ನು ಕೇಳಿಕೊಂಡಿದ್ದೇನೆ . ಅದನ್ನು ನಿರ್ಲಕ್ಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು  ಹೇಳಿದ್ದಾರೆ.  ಪ್ರಿಯಾಂಕಾ ಚತುರ್ವೇದಿ ಮುಂಬೈ ಪೊಲೀಸರೊಂದಿಗೆ ವಿಷಯವನ್ನು ತಿಳಿಸಿರುವದಾಗಿ ಹೇಳಿದ್ದೂ ಅಪರಾಧಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ತನಿಖೆ ಪ್ರಾರಂಭ

ಮುಂಬೈ ಸೈಬರ್ ಪೊಲೀಸರು ಆಕ್ಷೇಪಾರ್ಹ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ  ಎಂದು ಪಿಟಿಐ (PTI)  ವರದಿ ಮಾಡಿದೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು, ತಾವು ಈ ವಿಷಯದ ಬಗ್ಗೆ ಗಮನ ಹರಿಸಿದ್ದೇವೆ ಮತ್ತು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಲಾಗಿದೆ ಎಂದು ಹೇಳಿದ್ದಾರೆ.

ಸುಲ್ಲಿ ಡೀಲ್‌ಗಳ ಪ್ರಕರಣ ಏನು?

ಜುಲೈ 4, 2021 ರಂದು, GitHub ನಲ್ಲಿ ಗುರುತಿಸಲಾಗದ ಗುಂಪಿನಿಂದ ರಚಿಸಲಾದ 'Sulli Deals' ಹೆಸರಿನ ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಲವಾರು Twitter ಬಳಕೆದಾರರು ಹಂಚಿಕೊಂಡಿದ್ದಾರೆ. ಆ್ಯಪ್‌ಗೆ "Sulli deal of the day" ಎಂಬ ಅಡಿಬರಹವಿದೆ ಮತ್ತು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಹಾಕಲಾಗಿದೆ. 'ಸುಳ್ಳಿ' ಎಂಬುದು ಮಹಿಳೆಯರ ವಿರುದ್ಧ ಅವಹೇಳನಕಾರಿ ಪದವಾಗಿದೆ.

ಇದನ್ನೂ ಓದಿ: Password Safety: ಇಂಟರ್ನೆಟ್ ಬ್ರೌಸರ್‌ಗಳಲ್ಲಿ ನಿಮ್ಮ ಪಾಸ್‌ವರ್ಡ್‌ ಸೇವ್‌ ಮಾಡುವುದು ಎಷ್ಟು ಸೇಫ್?

ಅಪ್ಲಿಕೇಶನ್ ರಚನೆಕಾರರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಾರೆ, ಅವರನ್ನು ಟ್ರೋಲ್ ಮಾಡುತ್ತಾರೆ, ಫೋಟೋಗಳನ್ನು ಅನುಚಿತವಾಗಿ ಬಳಸುತ್ತಾರೆ ಮತ್ತು ಅವರ "ಹರಾಜಿನಲ್ಲಿ" ಭಾಗವಹಿಸಲು ಜನರನ್ನು ಪ್ರೋತ್ಸಾಹಿಸುತ್ತಾರೆ. ಸುಲ್ಲಿ ಡೀಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಪತ್ರ ಬರೆದಿದ್ದರೂ ಗಿಟ್‌ಹಬ್‌ನಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ ಎಂದು ದೆಹಲಿ ಪೊಲೀಸರು  ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

click me!